/newsfirstlive-kannada/media/post_attachments/wp-content/uploads/2024/04/SOURABH-KUMAR.jpg)
ಬುಧವಾರ ರಾತ್ರಿ ಪಾಟ್ನಾದಲ್ಲಿ ಜೆಡಿಯು ಪಕ್ಷದ ಯುವ ಮುಖಂಡರೊಬ್ಬರನ್ನು ಗುಂಡಿಟ್ಟು ಬರ್ಬರವಾಗಿ ಕೊಲ್ಲಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೌರಭ್ ಕುಮಾರ್ ಅಪರಿಚಿತರ​ ಗುಂಡೇಟಿಗೆ ಬಲಿಯಾದ ಯುವ ನಾಯಕ.
ನಾಲ್ವರು ದಾಳಿ ಕೋರರು ಬೈಕ್​ನಲ್ಲಿ ಬಂದು, ಫೈರಿಂಗ್ ಮಾಡಿದ್ದಾರೆ. ಮದುವೆ ಸಮಾರಂಭಕ್ಕೆ ಹೋಗಿದ್ದ ಸೌರಭ್, ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆ ವಾಪಸ್ ಆಗುತ್ತಿದ್ದರು. ಈ ವೇಳೆ ದಾಳಿ ಮಾಡಿ ಪರಾರಿ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಕಾಂಗ್ರೆಸ್​ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ದಾಳಿಕೋರರು ಬೈಕ್​​ನಲ್ಲಿ ಬಂದು ಸೌರಭ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮದುವೆಯ ರಿಸೆಪ್ಷನ್ ಮುಗಿಸಿ ವಾಪಸ್ ಬರುತ್ತಿದ್ದಾಗ ದಾಳಿಯಾಗಿದೆ. ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಕೂಡ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದ ಸ್ಥಿತಿ ಸ್ಥಿರವಾಗಿದೆ ಎಂದು ಎಸ್​ಪಿ ಭರತ್ ಸೋನಿ ತಿಳಿಸಿದ್ದಾರೆ.
ಸೌರಭ್ ಕುಮಾರ್​​ ತಲೆಗೆ ಮತ್ತು ಕುತ್ತಿಗೆ ಬಾಗಗಕ್ಕೆ ಗುಂಡುಗಳು ಹೊಕ್ಕಿವೆ. ಕೆಲವು ಸಿಸಿಟಿವಿ ದೃಶ್ಯಗಳು ಸೆರೆ ಸಿಕ್ಕಿದ್ದು, ಅವುಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us