newsfirstkannada.com

ಅಪ್ಪ, ಅಮ್ಮ ಕ್ಷಮಿಸಿ.. ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ; ವಾರದಲ್ಲಿ 2 ದುರಂತ!

Share :

Published January 29, 2024 at 5:48pm

    ಡೆತ್​ನೋಟ್​​ನಲ್ಲಿನ ಸಂಗತಿ ಕೇಳಿ ಕಣ್ಣೀರಿಡುತ್ತಿರುವ ತಂದೆ, ತಾಯಿ

    ನಾನು, ನಿಮ್ಮ ಕೆಟ್ಟ ಮಗಳೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

    ವಾರದಲ್ಲೇ JEE ಪರೀಕ್ಷೆ ಬರೆಯುವ ಇಬ್ಬರು ವಿದ್ಯಾರ್ಥಿಗಳು ಬಲಿ

ಜೈಪುರ: ಇನ್ನೆರಡು ದಿನದಲ್ಲಿ ಎಂಜಿನಿಯರ್‌ಗಾಗಿ ಜಾಯಿಂಟ್​ ಎಂಟ್ರೆನ್ಸ್​​ ಎಕ್ಸಾಮಿನೇಷನ್ (JEE) ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ನಿಹಾರಿಕ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. JEE ಪರೀಕ್ಷೆಗಾಗಿ ಪೂರ್ವ ತಯಾರಿ ನಡೆಸಿದ್ದ ವಿದ್ಯಾರ್ಥಿನಿ ಆಸಕ್ತಿ ಕಳೆದುಕೊಂಡಿದ್ದಳು ಎನ್ನಲಾಗಿದೆ. ಹೀಗಾಗಿಯೇ ಪರೀಕ್ಷೆ ಇನ್ನೇರಡು ದಿನಗಳು ಇರುವಾಗಲೇ ಜೆಇಇ ಪಾಸ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಂದೆ, ತಾಯಿಗೆ ಡೆತ್​​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಡೆತ್​​ನೋಟ್​​ನಲ್ಲಿ ಏನಿದೆ..?

ಪೊಲೀಸರಿಗೆ ಸಿಕ್ಕಿರುವ ಡೆತ್​​ನೋಟ್​ನಲ್ಲಿ ನಾನು ಕೆಟ್ಟ ಮಗಳು. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ಅಪ್ಪ, ಅಮ್ಮ ನನಗೆ ಜೆಇಇ ಪಾಸ್ ಮಾಡಲು ಸಾಧ್ಯವಾಗುತ್ತಿಲ್ಲದ ಕಾರಣ ನಾನು ಆತ್ನಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸೋಲಿಗೆ ನಾನೇ ಕಾರಣ. ಅಪ್ಪ-ಅಮ್ಮ ನಿಮಗೆ ಕೆಟ್ಟ ಮಗಳಾಗಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ. ಆತ್ಮಹತ್ಯೆಯೇ ನನಗೆ ಕೊನೆ ಅವಕಾಶವಾಗಿದೆ ಎಂದು ಪತ್ರದಲ್ಲಿ ಬರೆದು ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಇದೇ ವಾರದಲ್ಲಿ ಕೋಟಾ ಕೋಟ ನಗರದಲ್ಲಿ ವಿದ್ಯಾರ್ಥಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪ, ಅಮ್ಮ ಕ್ಷಮಿಸಿ.. ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ; ವಾರದಲ್ಲಿ 2 ದುರಂತ!

https://newsfirstlive.com/wp-content/uploads/2024/01/RAJASTHAN_GIRL_DEAD.jpg

Load More