ಕೊನೆಗೂ ಅಭಿಮಾನಿಗಳಿಗೆ ಗುಡ್​ ಬೈ ಹೇಳಿದ ಜೇನುಗೂಡು ಸೀರಿಯಲ್​​.. ಕಾರಣವೇನು..?

author-image
Veena Gangani
Updated On
ಕೊನೆಗೂ ಅಭಿಮಾನಿಗಳಿಗೆ ಗುಡ್​ ಬೈ ಹೇಳಿದ ಜೇನುಗೂಡು ಸೀರಿಯಲ್​​.. ಕಾರಣವೇನು..?
Advertisment
  • ಒಂದು ಸೀರಿಯಲ್​​ ಮುಕ್ತಾಯ ಬೆನ್ನಲ್ಲೇ ಮತ್ತೊಂದರ ಆರಂಭ!
  • ಕಿರುತೆರೆಯ ಮೋಸ್ಟ್ ಯೂನಿಕ್ ಸೀರಿಯಲ್​ಗಳಲ್ಲಿ ಜೇನುಗೂಡು ಒಂದು
  • ಅವನು ಮತ್ತೆ ಶ್ರಾವಣಿ ಸೀರಿಯಲ್​​ಗೆ ದಾರಿ ಮಾಡಿಕೊಟ್ಟ ಜೇನುಗೂಡು!

ಕಿರುತೆರೆಯ ಮೋಸ್ಟ್ ಯೂನಿಕ್ ಸೀರಿಯಲ್​ಗಳಲ್ಲಿ ಜೇನುಗೂಡು ಧಾರಾವಾಹಿ ಕೂಡ ಒಂದು. ಜೇನುಗೂಡು ಧಾರಾವಾಹಿ ಸರಿ ಸುಮಾರು ಎರಡು ವರ್ಷಗಳಿಂದ ಕರುನಾಡ ಜನರನ್ನು ರಂಜಿಸ್ತಾ ಬಂದಿದೆ. ಈಗ ಧಾರಾವಾಹಿ ತನ್ನ ಕೊನೆ ಸಂಚಿಕೆಗಳನ್ನ ಪ್ರಸಾರ ಮಾಡಿ ಅಭಿಮಾನಿಗಳಿಗೆ ಅಂತಿಮ ವಿದಾಯ ತಿಳಿಸಿದೆ.

ಹೌದು, ಜೇನುಗೂಡು ಧಾರಾವಾಹಿ ಉತ್ತರ ಕರ್ನಾಟಕ ಭಾಷೆಯನ್ನ ಒಳಗೊಂಡಿತ್ತು ಕರ್ನಾಟಕದಾದ್ಯಂತ ಧಾರಾವಾಹಿಗೆ ಒಳ್ಳೆ ಜನಪ್ರಿಯತೆ ಕೂಡ ಇತ್ತು. ಎರಡು ವರ್ಷಗಳಿಂದ ರಂಜಿಸಿ ಮೊನ್ನೆಯಷ್ಟೆ ತನ್ನ ವೀಕ್ಷಕರಿಗೆ ಅಂತಿಮ ವಿದಾಯ ತಿಳಿಸಿದೆ. ಒಳ್ಳೆ ರೀತಿಯಲ್ಲಿ ಈ ಜನಪ್ರಿಯ ಧಾರಾವಾಹಿ ಅಂತ್ಯಗೊಂಡಿರೋದು ತಂಡಕ್ಕೆ ಖುಷಿ ಕೊಟ್ಟಿದೆ.

publive-image

ಈಗ ಇದೇ ಧಾರಾವಾಹಿ ಸ್ಲಾಟ್​ಗೆ ಹೊಚ್ಚ ಹೊಸ ವಿಭಿನ್ನ ಕಥಾ ಹಂದರವನ್ನ ಹೊತ್ತು ತರ್ತಿದೆ ಅವನು ಮತ್ತೆ ಶ್ರಾವಣಿ. ಹೌದು ಜೇನುಗೂಡು ಮುಕ್ತಾಯದ ಬೆನ್ನಲ್ಲೇ ಅಕ್ಟೋಬರ್ 2ರಂದು ಅಂದ್ರೆ ಇಂದಿನಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ರಾತ್ರಿ 10.00ಗಂಟೆಗೆ ಅವನು ಮತ್ತೆ ಶ್ರಾವಣಿ ಪ್ರಸಾರವಾಗಲಿದೆ. ಒಟ್ಟಿನಲ್ಲಿ ಜೇನುಗೂಡು ಮುಕ್ತಾಯ ಮತ್ತೊಂದು ಧಾರಾವಾಹಿಗೆ ಆರಂಭವಾಗಿದೆ. ವಿಭಿನ್ನ ಕತೆ ಹೊತ್ತು ತರ್ತಿರೋ ಸ್ಟಾರ್ ಸುವರ್ಣ ವಾಹಿನಿಗೆ ನಮ್ಮ ಕಡೆಯಿಂದಲೂ ಬೆಸ್ಟ್ ವಿಶಸ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment