Advertisment

ಚೈನ್​, ಉಂಗುರ ತೆಗೆದುಕೊಂಡಿದ್ದು ಜಗದೀಶ್.. ವಾಚ್ ಕದ್ದಿದ್ಯಾರು? D ಗ್ಯಾಂಗ್​ನ ಒಡವೆಗಳ ಹಂಚಿಕೆ ಹೇಗಿತ್ತು?

author-image
Ganesh
Updated On
ಎಣ್ಣೆ ಅಮಲಿನಲ್ಲಿ CCTV ಮರೆತ ಆರೋಪಿಗಳು; ಕ್ಯಾಮೆರಾದಲ್ಲಿ ದರ್ಶನ್‌ ಹಲ್ಲೆ ಮಾಡಿದ್ದ ದೃಶ್ಯ ಸೆರೆ?
Advertisment
  • ರೇಣುಕಾಸ್ವಾಮಿ ಹತ್ಯೆ ಬಳಿಕ ಪಾರ್ಟಿ ಮಾಡಿದ್ದ ಡಿ-ಗ್ಯಾಂಗ್​
  • ಆರೋಪಿಗಳನ್ನ ಮನೆಗೂ ಕರೆದೊಯ್ದಿದ್ದ ದರ್ಶನ್​ ಆಪ್ತ ಪ್ರದೋಶ್​
  • ಡೀಲ್ ಹಣದಲ್ಲಿ ರೂಮ್​ ಮಾಡಿ ಆರೋಪಿಗಳ ಪಾರ್ಟಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಗೆದಷ್ಟು ಹೊಸಹೊಸ ರಹಸ್ಯಗಳು ಹೊರಗೆ ಬರ್ತಿದೆ. ಇದೀಗ ಪೊಲೀಸರು ಕೋರ್ಟ್​ಗೆ ಸಲ್ಲಿಸಿರುವ ರಿಮ್ಯಾಂಡ್​ ಅರ್ಜಿಯಲ್ಲಿ ಸ್ಫೋಟಕ ವಿಷ್ಯಗಳು ಬಯಲಾಗಿದೆ. ರೇಣುಕಾಸ್ವಾಮಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಪಾತ್ರ.. ರೇಣುಕಾಸ್ವಾಮಿಯನ್ನು ರಾಕ್ಷಸರಂತೆ ಕೊಂದವರು, ಡೀಲ್​ ಹಣದಲ್ಲಿ ಪಾರ್ಟಿ ಮಾಡಿದ್ರಂತೆ.. ಇನ್ನು ಮೃತದೇಹದ ಮೇಲಿದ್ದ ಒಡವೆಗಳನ್ನೂ ಬಿಟ್ಟಿರಲ್ವಂತೆ ಡಿ-ಗ್ಯಾಂಗ್​.

Advertisment

ನಟ ದರ್ಶನ್​ ಗ್ಯಾಂಗ್​ನ ಕರಾಳ ಮುಖಗಳು ಒಂದೊಂದಾಗೇ ಬಯಲಾಗ್ತಿವೆ. ರೇಣುಕಾಸ್ವಾಮಿಯನ್ನು ಮೃಗಗಳಿಗಿಂತ ಕ್ರೂರವಾಗಿ ಹತ್ಯೆ ಮಾಡಿದ್ದು ಒಂದೆಡೆಯಾದ್ರೆ.. ಕೇಸ್​ ಮುಚ್ಚಿಹಾಕಲು, ಸಾಕ್ಷ್ಯ ನಾಶ ಪಡಿಸಲು ಖತರ್ನಾಕ್​ ಪ್ಲಾನ್​ ಮಾಡಿದೆ. ಈ ಎಲ್ಲ ವಿಚಾರಗಳನ್ನು ರಿಮ್ಯಾಂಡ್​ ಅರ್ಜಿಯಲ್ಲಿ ಪೊಲೀಸರು ಎಳೆಎಳೆಯಾಗಿ ವಿವರಿಸಿದ್ದಾರೆ.

ಇದನ್ನೂ ಓದಿ:ಸಂಸದನ ಪುತ್ರಿಯಿಂದ BMW ಕಾರಿನಲ್ಲಿ ಬಂದು ಹಿಟ್​ ಅಂಡ್ ರನ್.. ಯುವಕ ಸಾವು.. ಮತ್ತೊಂದು ಹೈಪ್ರೊಫೈಲ್ ಕೇಸ್..!

publive-image

ರೇಣುಕಾಸ್ವಾಮಿ ಹತ್ಯೆ ಬಳಿಕ ಪಾರ್ಟಿ ಮಾಡಿದ್ದ ಡಿ-ಗ್ಯಾಂಗ್​
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಆಪ್ತ.. 14ನೇ ಆರೋಪಿ ಆಗಿರುವ ಪ್ರದೋಶ್​ನದ್ದು ಕೂಡ ಮುಖ್ಯಪಾತ್ರ. ರೇಣುಕಾಸ್ವಾಮಿ ಕೊಲೆ ಬಳಿಕ ಪ್ರದೋಶ್‌ ಆರೋಪಿಗಳನ್ನ ತನ್ನ ಮನೆಗೂ ಕರೆದೊಯ್ದಿದ್ನಂತೆ.. ಈ ಸಂಬಂಧ ಆತನ ಮನೆಯ ಸಿಸಿಟಿವಿಯಲ್ಲಿ ಆರೋಪಿಗಳು ಬಂದಿರೋ ದೃಶ್ಯ ಸೆರೆಯಾಗಿದೆ. ಪೊಲೀಸರು ಅವುಗಳನ್ನು ಸೀಜ್​ ಮಾಡಿದ್ದಾರೆ. ಇನ್ನು ಹಲ್ಲೆಯ ವಿಡಿಯೋ ಮತ್ತು ಅಶ್ಲೀಲ ಸಂದೇಶದ ಮೆಸೇಜ್​ಗಳಿದ್ದ ರಾಘವೇಂದ್ರ ಮತ್ತು ರೇಣುಕಾಸ್ವಾಮಿಯ ಮೊಬೈಲ್‌ಗಳನ್ನು ರಾಜಕಾಲುವೆಗೆ ಎಸೆದಿದ್ದು ಪ್ರದೋಶ್​ ಅನ್ನೋದು ವಿಚಾರಣೆ ವೇಳೆ ಗೊತ್ತಾಗಿದೆ. ಸದ್ಯ ಮೊಬೈಲ್​ಗಾಗಿ ರಾಜಕಾಲುವೆಯಲ್ಲಿ ತೀವ್ರ ಹುಡುಕಾಟ ನಡೆಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿಯ ಸಹಾಯ ಪಡೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ.

Advertisment

ಇದನ್ನೂ ಓದಿ:ದರ್ಶನ್ ಮಾತ್ರವಲ್ಲ.. ಅಭಿಮಾನಿಗಳಿಗೂ ಇದೆ ಹಬ್ಬ.. ಬಾಲ ಕಟ್ ಮಾಡಲು ಲಿಸ್ಟ್ ರೆಡಿ..!

ಡೀಲ್ ಹಣದಲ್ಲಿ ರೂಮ್​ ಮಾಡಿ ಆರೋಪಿಗಳ ಪಾರ್ಟಿ!
ರೇಣುಕಾಸ್ವಾಮಿ ಶವ ಬೀಸಾಡಿದ ನಂತರ ಜೂನ್ 9 ರಂದು ಆರ್​ಆರ್ ನಗರದಲ್ಲಿ‌ ಹೋಟಲ್‌ ರೂಮ್ ಬುಕ್ ಮಾಡಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವ್, ನಿಖಿಲ್ ನಾಯಕ್​ ಆರ್​ಆರ್‌ನಗರದ ಟ್ರೋಬೋ 98 ಸ್ಟ್ರೀಟ್ ರೆಸ್ಟೋರೆಂಟ್​ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ದೀಪಕ್ ನೀಡಿದ ಹಣದಲ್ಲಿ ರೂಮ್ ಬುಕ್ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಇನ್ನು ಕಾರ್ತಿಕ್‌ ಕ್ರಿಮಿನಲ್‌ ಹಿನ್ನೆಲೆಯ ಆರೋಪಿಯಾಗಿದ್ದು, ಈಗಾಗಲೇ ಈತನ ಮೇಲೆ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣವಿದೆ. ಇದೇ ಕಾರಣಕ್ಕಾಗಿ ಈತನನ್ನ ಶವ ಬಿಸಾಕಲು ಮತ್ತು ಸರಂಡರ್‌ ಮಾಡಿಸಲು ಬಳಸಲಾಗಿತ್ತು ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.

publive-image

ಕಿಡ್ನಾಪ್‌ ಮಾಡಿಕೊಂಡು ಬಂದ ಆರೋಪಿಗಳು ಕೂಡಾ ಮೃತದೇಹ ಸಾಗಿಸಲು ಸಹಕರಿಸಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ. ಇದಷ್ಟೇ ಅಲ್ಲ, ರೇಣುಕಾಸ್ವಾಮಿ ಮೈಮೇಲಿದ್ದ ಆಭರಣಗಳನ್ನೂ ಇವರು ಬಿಟ್ಟಿರಲಿಲ್ವಂತೆ..

Advertisment

ಕಳ್ಳರ ಪಟಾಲಂ!

  • ರೇಣುಕಾಸ್ವಾಮಿ ಕೊಂದು ಆತನ ಆಭರಣ ಕದ್ದಿದ್ದ ಗ್ಯಾಂಗ್​
  • ಚಿನ್ನದ ಚೈನ್​​, ಬೆಳ್ಳಿಯ ಉಂಗುರ, ₹300 ವಾಚ್​​​​ ಕೂಡ ಬಿಟ್ಟಿಲ್ಲ
  • ಚಿನ್ನದ ಚೈನ್​, ಉಂಗುರ ತೆಗೆದುಕೊಂಡಿದ್ದ ಆರೋಪಿ ಜಗದೀಶ್​
  • ಮೃತನ ವಾಚ್​​​ ಎಗರಿಸಿದ್ದ ಆರೋಪಿ ಅನು ಅಲಿಯಾಸ್ ಅನುಕುಮಾರ್​​
  • ರಾಘವೇಂದ್ರನ ಮನೆಯಲ್ಲಿರಿಸಿದ್ದ ಒಡವೆಗಳು ಪೊಲೀಸ್​ ವಶಕ್ಕೆ
  • ರಿಮಾಂಡ್​ ಅರ್ಜಿಯಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಪೊಲೀಸರು

ಇದನ್ನೂ ಓದಿ:ಉಮಾಪತಿ ಹೇಳಿಕೆಯಿಂದ ದರ್ಶನ್​​ಗೆ ಮತ್ತೊಂದು ಸಂಕಷ್ಟ.. ಗೃಹ ಇಲಾಖೆಯಿಂದ ಶಾಕಿಂಗ್ ನಿರ್ಧಾರ..?

publive-image

ರೇಣುಕಾಸ್ವಾಮಿ ಕೊಂದು ಆತನ ಆಭರಣವನ್ನು ಆರೋಪಿಗಳು ಬಿಟ್ಟಿರಲಿಲ್ವಂತೆ.. ಚಿನ್ನದ ಚೈನ್​​, ಬೆಳ್ಳಿಯ ಉಂಗುರ, ₹300 ವಾಚ್​​​​ ಕೂಡ ಕದ್ದಿದ್ದರು.. ಚಿನ್ನದ ಚೈನ್​, ಉಂಗುರವನ್ನು ಜಗ್ಗ ಅಲಿಯಾಸ್​ ಜಗದೀಶ್​ ತೆಗೆದುಕೊಂಡ್ರೆ, ರೇಣುಕಾಸ್ವಾಮಿ ಕೈಯಲ್ದಿದ್ದ ವಾಚ್​ ಅನ್ನು ಅನು ಅಲಿಯಾಸ್​ ಅನುಕುಮಾರ್​ ಎಗರಿಸಿದ್ನಂತೆ.. ಇವುಗಳನ್ನೆಲ್ಲ ರಾಘವೇಂದ್ರನ ಮನೆಯಲ್ಲಿ ಇರಿಸಲಾಗಿತ್ತಂತೆ.. ಸದ್ಯ ಒಡವೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ರಿಮ್ಯಾಂಡ್​ ಅರ್ಜಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

Advertisment

ಇದನ್ನೂ ಓದಿ:36 ಗಂಟೆಯಲ್ಲಿ ಗುಟ್ಟು ರಟ್ಟು.. ಆ ದಿನ ಕುಂತ್ರೂ, ನಿಂತ್ರೂ ಚಡಪಡಿಕೆ.. ದರ್ಶನ್ ತೊಳಲಾಟ, ನಾಟಕ..!

ಒಟ್ಟಾರೆ.. ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಖಡಕ್​ ತನಿಖೆಯನ್ನು ನಡೆಸುತ್ತಿದ್ದಾರೆ. ಒಂದೊಮ್ಮೆ ರಾಘವೇಂದ್ರನ ಮೊಬೈಲ್ ಪೊಲೀಸರಿಗೆ ದೊರೆತಲ್ಲಿ ಅದು ಪ್ರಕರಣಕ್ಕೆ ದೊಡ್ಡ ತಿರುವನ್ನು ನೀಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment