/newsfirstlive-kannada/media/post_attachments/wp-content/uploads/2024/07/puri-jagantha3.jpg)
ಬರೋಬ್ಬರಿ 46 ವರ್ಷಗಳ ಬಳಿಕ ಒಡಿಶಾದ ಪುರಿ ಜಗನ್ನಾಥ ಮಂದಿರದಲ್ಲಿರುವ ರತ್ನಭಂಡಾರದ ರಹಸ್ಯ ಕೋಣೆಯನ್ನ ಓಪನ್ ಮಾಡಲಾಗಿದೆ. ಮಧ್ಯಾಹ್ನ 1.28ರ ಶುಭ ಮುಹೂರ್ತದಲ್ಲಿ ರತ್ನ ಭಂಡಾರದ ಒಟ್ಟು 4 ಬಾಗಿಲುಗಳನ್ನು ಓಪನ್ ಮಾಡಿರೋದನ್ನ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:BREAKING: ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು ತೆಗೆಯುತ್ತಿದ್ದಂತೆ ಮೂರ್ಛೆ ಹೋದ ಎಸ್‌ಪಿ
ಈ ರತ್ನ ಭಂಡಾರ ಓಪನ್ ಮಾಡಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧರಿಸಿತ್ತು. 46 ವರ್ಷಗಳ ನಂತರ ಇದೇ ಮೊದಲ ಬಾರಿಗೇ ಭಂಡಾರದ ಕೊಠಡಿ ತೆರೆಯಲಾಗಿದೆ. ಅದರಲ್ಲೂ ರತ್ನಭಂಡಾರದ ಕೊಠಡಿಯಲ್ಲಿ ಏನೆಲ್ಲಾ ಸಿಗುತ್ತಿದೆ ಎಂಬುವುದರ ಬಗ್ಗೆ ಬಹು ಕೋಟಿ ಭಕ್ತ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.
ಇದನ್ನೂ ಓದಿ: ಪುರಿ ಜಗನ್ನಾಥನ ಪವಾಡ.. ರತ್ನ ಭಂಡಾರದ ಬಾಗಿಲಿನ ಮುಂದೆ ಮೂರ್ಛೆ ಹೋದ SPಗೆ ಏನಾಯ್ತು?
ಇನ್ನು, ಈ ರತ್ನ ಭಂಡಾರ ಕೋಣೆಗೆ ಸರ್ಪಗಳ ರಕ್ಷಣೆ ಇದೆ ಎಂದು ನಂಬಲಾಗಿದೆ. ಹೀಗಾಗಿಯೇ ಈ ರತ್ನ ಭಂಡಾರದ ಕೋಣೆಯನ್ನು ತೆಗೆಯುವ ವೇಳೆ ಸರ್ಪ ಹಿಡಿಯೋ ಪರಿಣತರನ್ನ ಕರೆಸಲಾಗಿತ್ತು. ಇವರ ಜೊತೆಗೆ ವೈದ್ಯರ ತಂಡ ಮತ್ತು ಔಷಧಿ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ರತ್ನ ಭಂಡಾರದ ಕೊಠಡಿ ತೆಗೆಯದೇ ಬರೋಬ್ಬರಿ 46 ವರ್ಷಗಳು ಆಗಿತ್ತು. ಹೀಗಾಗಿ ಸಣ್ಣ ಸಣ್ಣ ರಂಧ್ರಗಳಿಂದ ಹಾವುಗಳು ಹೋಗಿರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿಯೇ ಹಾವು ಹಿಡಿಯುವಲ್ಲಿ ಅನುಭವ ಇರುವವರನ್ನು ಅಲ್ಲಿಗೆ ಕರೆಸಲಾಗಿತ್ತು. ಒಂದು ವೇಳೆ ಯಾರಿಗಾದರೂ ಹಾವು ಕಚ್ಚಿದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ. ಆದರೆ ಬರ್ಮಾದ ಬೆಟ್ಟದ ಹಾವುಗಳು ಇಲ್ಲಿನ ಸಂಪತ್ತನ್ನು ಕಾಪಾಡುತ್ತಿವೆ ಅಂತ ಕಥೆಗಳನ್ನು ಸ್ಥಳೀಯರು ಹೇಳುತ್ತಾರೆ. ಪುರಿಯಲ್ಲಿರುವ ರತ್ನ ಭಂಡಾಗಾರಂನಲ್ಲಿರುವ ಜಗನ್ನಾಥ ಮತ್ತು ಇತರ ದೇವತೆಗಳಿಗೆ ಸೇರಿದ ಅಮೂಲ್ಯವಾದ ಚಿನ್ನದ ಆಭರಣಗಳನ್ನು ಸರ್ಪಗಳು ಕಾಪಾಡುತ್ತವೆ ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ:ನೆರಳು ಎಲ್ಲಿಯೂ ಬೀಳಲ್ಲ, ಗಾಳಿಯ ವಿರುದ್ಧ ಹಾರಾಡುತ್ತೆ ಧ್ವಜ.. ವಿಜ್ಞಾನಕ್ಕೂ 5 ಸವಾಲು ಪುರಿ ಜಗನ್ನಾಥನ ಸನ್ನಿಧಿ..!
ಹೌದು, ಈ ಹಿಂದೆ ದೇವಾಲಯದ ನೆಲಮಾಳಿಗೆಯನ್ನು ತೆರೆಯಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಹಾಗಾಗಿ 2018ರಲ್ಲಿ ಒಡಿಶಾ ಹೈಕೋರ್ಟ್‌ನ ಆದೇಶದ ಮೇರೆಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಂಡವು ರತ್ನ ಭಂಡಾರವನ್ನು ಪ್ರವೇಶಿಸಲು ಪ್ರಯತ್ನಿಸಿತು. ಆದರೆ ಆ ಸಂದರ್ಭದಲ್ಲಿ ಅದು ಸಾದ್ಯವಾಗಿರಲಿಲ್ಲ. ಇದೀಗ ಒಡಿಶಾ ಸರ್ಕಾರವು ಮತ್ತೊಮ್ಮೆ ಜಗನ್ನಾಥ ದೇಗುಲದ ರತ್ನ ಭಂಡಾರವನ್ನು ಒಳಗೊಂಡ ರಹಸ್ಯ ಕೋಣೆಯನ್ನು ತೆರೆಯುವ ನಿರ್ಧರಿಸಿತ್ತು. ಕೊನೆಗೂ 46 ವರ್ಷಗಳ ನಂತರ ದೇವಾಲಯದ ಆಡಳಿತ ಸಮಿತಿ ರತ್ನ ಭಂಡಾರದ ಕೊಠಡಿ ತೆರೆಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ