newsfirstkannada.com

ಜಾರ್ಖಂಡ್​ ಸಿಎಂ ಹೇಮಂತ್​ ಸೊರೇನ್​ ಬಂಧನ.. ನೂತನ ಸಿಎಂ ಆಗಿ ಚಂಪೈ ಸೊರೇನ್ ಆಯ್ಕೆ! ಇವರ ಹಿನ್ನೆಲೆ ಗೊತ್ತಾ?

Share :

Published February 1, 2024 at 6:48am

    ED ಭದ್ರತೆಯಲ್ಲೇ ಆಗಮಿಸಿ ಸಿಎಂ ಸ್ಥಾನದಲ್ಲಿ ರಾಜೀನಾಮೆ ಸಲ್ಲಿಕೆ

    ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದ 67 ವರ್ಷದ ಚಂಪೈ ಸೊರೇನ್

    ಜೆಎಂಎಂ ಪಕ್ಷದ ಉಪಾಧ್ಯಕ್ಷರಾಗಿರುವ ಈ ಜಾರ್ಖಂಡ್​ನ​ ಟೈಗರ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಅವರನ್ನ ಇ.ಡಿ ಅರೆಸ್ಟ್ ಮಾಡಿದೆ. ಬಂಧನಕ್ಕೂ ಮೊದಲು ಸಿಎಂ ಸ್ಥಾನಕ್ಕೆ ಹೇಮಂತ್ ಸೊರೇನ್​​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಬೆನ್ನಲ್ಲೇ, ಹೇಮಂತ್ ಸಂಪುಟದ ಸಾರಿಗೆ ಸಚಿವರಾದ ಚಂಪೈ ಸೊರೇನ್ ಅವರನ್ನು ಆಡಳಿತಾರೂಢ ಜೆಎಂಎಂ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆರಿಸಲಾಗಿದೆ. ಅಲ್ಲದೆ, ಜಾರ್ಖಂಡ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಜಾರ್ಖಂಡ್​​ ಪ್ರತ್ಯೇಕ ರಾಜ್ಯ ರಚನೆಯಲ್ಲಿ ಚಂಪೈ ಸೊರೇನ್​​ ಪ್ರಮುಖ ಪಾತ್ರವಹಿಸಿದ್ದರು. ಅದೇ ಕಾರಣಕ್ಕೆ ಚಂಪೈ ಸೊರೇನ್​​ರನ್ನ ಜಾರ್ಖಂಡ್​​ ಟೈಗರ್​​ ಅಂತ ಜನ ಅವರನ್ನ ಕರೆಯುತ್ತಾರೆ.

ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಹೇಮಂತ್​ ಸೊರೇನ್​ ಬಂಧನ

ಜಾರ್ಖಂಡ್​ನ ರಾಜಕೀಯ ಇತಿಹಾಸದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಭೂ ಅಕ್ರಮ ಪ್ರಕರಣ, ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅರನ್ನು ಇಡಿ ಅರೆಸ್ಟ್ ಮಾಡಿದೆ. ಇದಕ್ಕೂ ಮುನ್ನ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್ ಸೊರೇನ್ ರಾಜಿನಾಮೆ ನೀಡಿದ್ದಾರೆ.

ಭೂ ಅಕ್ರಮ ಕೇಸ್​ನಲ್ಲಿ ಹೇಮಂತ್​ ಸೊರೇನ್​ಗೆ ಇಡಿ ನೋಟಿಸ್​

ಭೂ ಅಕ್ರಮ ಕೇಸ್​ನಲ್ಲಿ ಹೇಮಂತ್​ ಸೊರೇನ್​ಗೆ ಇಡಿ ಅಧಿಕಾರಿಗಳು ಸಾಲು ಸಾಲು ನೋಟಿಸ್​ ನೀಡಿದ್ದರು. 9 ಬಾರಿ ನೋಟಿಸ್​ ನೀಡಿದ್ದರೂ ಕೂಟ ಹೇಮಂತ್​ ಸೊರೇನ್​ ಇದಕ್ಕೆಲ್ಲ ಉತ್ತರ ನೀಡಿರಲಿಲ್ಲ. ಕೊನೆಗೆ ಜ.31ಕ್ಕೆ ವಿಚಾರಣೆಗೆ ಹಾಜರಾಗಲು ಇ.ಡಿಯಿಂದ 10ನೇ ನೋಟಿಸ್​ ನೀಡಲಾಗಿತ್ತು. ಇದರ ಬೆನ್ನಲ್ಲೇ ಹೇಮಂತ್​ ಸೊರೇನ್​ ಸುಮಾರು 30 ಗಂಟೆಗಳ ಕಾಲ ನಾಪತ್ತೆ ಆಗಿದ್ದರು.

ಇನ್ನು ಸೊರೇನ್​ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಕಾರು, ದಾಖಲೆ ವಶಕ್ಕೆ ಪಡೆದಿದ್ದರು. ಇದಾದ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ ಸೊರೇನ್​, ಮಂಗಳವಾರ ರಾಂಚಿಯಲ್ಲಿ ಪ್ರತ್ಯಕ್ಷರಾಗಿದ್ರು. ಸಿಎಂ ಬಂಧನಕ್ಕೆ ರಾಜ್ಯಪಾಲರ ಅನುಮತಿ ಕಡ್ಡಾಯ. ಹೀಗಾಗಿ ರಾಜ್ಯಪಾಲರ ಅನುಮತಿಯೊಂದಿಗೆ ಸೊರೇನ್​ ನಿವಾಸಕ್ಕೆ ತೆರಳಿ ಇಡಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿ, ಬಂಧನ ಮಾಡಿದ್ರು.

ಹೇಮಂತ್​ ಸೊರೆನ್ ಬಂಧಿಸಿದ ಇಡಿ ಅಧಿಕಾರಿಗಳು, ತಮ್ಮ ಭದ್ರತೆಯಲ್ಲೇ ನೇರವಾಗಿ ರಾಜ್ಯಪಾಲರ ಭವನಕ್ಕೆ ಕರೆದೊಯ್ದಿದ್ರು. ಈ ವೇಳೆ ಹೇಮಂತ್ ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಜಾರ್ಖಂಡ್​ನ ನೂತನ ಸಿಎಂ ಆಗಿ ಚಂಪೈ ಸೊರೇನ್ ಆಯ್ಕೆ

ಹೇಮಂತ್​ ಸೊರೇನ್​ ರಾಜೀನಾಮೆ ಬೆನ್ನಲ್ಲೇ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಸೇರಿದಂತೆ ಮೈತ್ರಿ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ನಡೆಸಿ, ಚಂಪೈ ಸೊರೇನ್ ಅವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡಿವೆ. ಚಂಪೈ​ ಸೊರೇನ್​ ರಾಜ್ಯಪಾಲರನ್ನು ಭೇಟಿಯಾಗಿ, ಸರ್ಕಾರ ರಚನೆಗೆ ಅವಕಾಶ ಕೋರಿದ್ದಾರೆ. ಇವತ್ತು ನೂತನ ಸಿಎಂ ಆಗಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಚಂಪೈ ಸೊರೇನ್​ ಸಿಎಂ ಆಗಿ ಆಯ್ಕೆಯಾದ ಬೆನ್ನಲ್ಲೇ ಅವರ ಗ್ರಾಮದಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ.

ಜಾರ್ಖಂಡ್​ ಟೈಗರ್​ ಎಂದೇ ಚಂಪೈ​ ಪ್ರಖ್ಯಾತಿ

67 ವರ್ಷದ ಚಂಪೈ ಸೊರೆನ್ ಸೆರೈಕೆಲಾ ಕ್ಷೇತ್ರದ ಶಾಸಕರು.. ಇದುವರೆಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಶಿಬು ಸೊರೆನ್ ಸ್ಥಾಪಿಸಿದ ಜೆಎಂಎಂ ಪಕ್ಷದ ಉಪಾಧ್ಯಕ್ಷರು ಕೂಡ ಹೌದು. ಇನ್ನು ಜಾರ್ಖಂಡ್ ಪ್ರತ್ಯೇಕ ರಾಜ್ಯ ರಚನೆ ಚಳವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಹೀಗಾಗಿಯೇ ಅವರನ್ನು ಜಾರ್ಖಂಡ್​ ಟೈಗರ್​ ಎಂದು ಕರೆಯುತ್ತಾರೆ. ಹೇಮಂತ್ ಸೊರೆನ್ ಅವರ ನಿಷ್ಠಾವಂತ ಬೆಂಬಲಿಗರು ಆಗಿರುವ ಚಂಪೈ ಹೇಮಂತ್​ ಸೊರೇನ್​ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿದ್ದಾರೆ. ಸಾರಿಗೆ ಸೇರಿ ವಿವಿಧ ಖಾತೆಗಳನ್ನು ಚಂಪೈ ಸೊರೇನ್ ನಿಭಾಯಿಸಿದ್ದಾರೆ.

ಹೇಮಂತ್​ ಸೊರೇನ್​ ಬಂಧನ ಖಂಡಿಸಿ ಇಂದು ಜಾರ್ಖಂಡ್​ ಬಂದ್

ಭೂ ಅಕ್ರಮ ಪ್ರಕರಣದಲ್ಲಿ ಹೇಮಂತ್​ ಸೊರೇನ್​ ಅವರ ಬಂಧನಕ್ಕೆ ಕಾಂಗ್ರೆಸ್​ ಖಂಡನೆ ವ್ಯಕ್ತಪಡಿಸಿದೆ. ಹಾಗೂ ರಾಹುಲ್ ಗಾಂಧಿಸೇರಿದಂತೆ ಹಲವು ನಾಯಕರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಜಾರ್ಖಂಡ್​ನ ಎಲ್ಲಾ ಬಡಕಟ್ಟು ಒಕ್ಕೂಟಗಳು ಸೊರೇನ್​ ಬಂಧನ ಖಂಡಿಸಿ, ಒಂದು ಜಾರ್ಖಂಡ್​ ಬಂದ್​ಗೆ ಕರೆ ನೀಡಿವೆ.. ಮತ್ತೊಂದೆಡೆ ಇಡಿ ಸಮನ್ಸ್​ ಪ್ರಶ್ನಿಸಿ ಹೇಮಂತ್​ ಸೊರೇನ್​ ಕೋರ್ಟ್​ ಮೆಟ್ಟಿಲೇರಿದ್ದು, ಇಂದು ಬೆಳಗ್ಗೆ 10ಗಂಟೆಗೆ ಅದರ ವಿಚಾರಣೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾರ್ಖಂಡ್​ ಸಿಎಂ ಹೇಮಂತ್​ ಸೊರೇನ್​ ಬಂಧನ.. ನೂತನ ಸಿಎಂ ಆಗಿ ಚಂಪೈ ಸೊರೇನ್ ಆಯ್ಕೆ! ಇವರ ಹಿನ್ನೆಲೆ ಗೊತ್ತಾ?

https://newsfirstlive.com/wp-content/uploads/2024/02/Champai-Suren.jpg

Load More