ಐಪಿಎಲ್ ಹೊತ್ತಿನಲ್ಲೇ ಧೋನಿಗೆ ಬಿಗ್​ ಶಾಕ್; ದಾಖಲಾಯ್ತು ಕೌಂಟರ್ ಕೇಸ್..!

author-image
Ganesh
Updated On
ಐಪಿಎಲ್ ಹೊತ್ತಿನಲ್ಲೇ ಧೋನಿಗೆ ಬಿಗ್​ ಶಾಕ್; ದಾಖಲಾಯ್ತು ಕೌಂಟರ್ ಕೇಸ್..!
Advertisment
  • ಎಂ.ಎಸ್.ಧೋನಿಗೆ ಹೈಕೋರ್ಟ್ ನೋಟಿಸ್ ನೀಡಿದ್ದು ಯಾಕೆ?
  • ಐಪಿಎಲ್-2025ರ ವಿಚಾರಕ್ಕೆ ಸುದ್ದಿಯಲ್ಲಿರುವ ಧೋನಿ
  • ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವ ಎಂಎಸ್​ ಧೋನಿ

ವ್ಯಾಪಾರ ವಂಚನೆ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಎಂಎಸ್ ಧೋನಿಗೆ ನೋಟಿಸ್ ಕಳುಹಿಸಿದೆ. ಧೋನಿ ಅವರ ಹಳೆ ಬಿಸಿನೆಸ್ ಪಾರ್ಟನರ್ ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಒಟ್ಟಾಗಿ ಧೋನಿ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದಾರೆ.

ಪ್ರಕರಣವು ‘ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್’ ಹೆಸರಿನ ಕಂಪನಿಗೆ ಸಂಬಂಧಿಸಿದೆ. ಸಂಸ್ಥೆಯಲ್ಲಿ ದಿವಾಕರ್ ಮತ್ತು ಸೌಮ್ಯ ನಿರ್ದೇಶಕರಾಗಿದ್ದರು. ಕಳೆದ ಜನವರಿಯಲ್ಲಿ ಧೋನಿ ತಮ್ಮ ಮಾಜಿ ಪಾಲುದಾರರ ವಿರುದ್ಧ ಆರೋಪಿಸಿದ್ದರು.
‘ಎಂಎಸ್ ಧೋನಿ’ ಹೆಸರಿನಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸುವುದಾಗಿ ಧೋನಿ ಜತೆ ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್ ಮೆಂಟ್ ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ನಮ್ಮ ಒಪ್ಪಂದವು 2021ರಲ್ಲಿ ಕೊನೆಗೊಂಡಿದೆ. ಹೀಗಿದ್ದೂ ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಕ್ರಿಕೆಟ್ ಅಕಾಡೆಮಿಗಳನ್ನು ತೆರೆಯುವುದನ್ನು ಮುಂದುವರೆಸಿದ್ದಾರೆ. ಇದರಿಂದ ನನಗೆ 15 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಧೋನಿ ಆರೋಪಿಸಿದ್ದರು. ಜನವರಿ 5 ರಂದು ಧೋನಿ ತಮ್ಮ ಮಾಜಿ ಪಾಲುದಾರರ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದರು.

ಧೋನಿ ವಿರುದ್ಧ ಕೌಂಟರ್ ಕೇಸ್
ಪ್ರಕರಣ ಸಂಬಂಧ ಜಾರ್ಖಂಡ್​ ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ವಿಚಾರಣೆಯನ್ನು ಪ್ರಶ್ನಿಸಿ ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಜಾರ್ಖಂಡ್ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ವಿಚಾರಣೆ ನಡೆಸಲು ಧೋನಿಗೆ ಹಾಜರಾಗುವಂತೆ ಜಾರ್ಖಂಡ್ ಹೈಕೋರ್ಟ್ ನೋಟಿಸ್ ನೀಡಿದೆ. ಪ್ರಕರಣದಲ್ಲಿ ನಿಮ್ಮ ನಿಲುವು ತಿಳಿಸುವಂತೆ ಹೈಕೋರ್ಟ್​ ಧೋನಿಗೆ ಸೂಚಿಸಿದೆ. ಆದರೆ ಮುಂದಿನ ವಿಚಾರಣೆಯ ದಿನಾಂಕದ ಕುರಿತು ಇನ್ನೂ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

ಇದನ್ನೂ ಓದಿ:M.S ಧೋನಿ ಫ್ಯಾನ್ಸ್‌ಗೆ ದೀಪಾವಳಿ ಗಿಫ್ಟ್‌.. CSK ರೀಟೈನ್​ ಲಿಸ್ಟ್‌ನಲ್ಲಿ ಮಹತ್ವದ ಬದಲಾವಣೆ; ಯಾರ್‌ ಯಾರು ಇನ್‌?

ಐಪಿಎಲ್-2025ರ ವಿಚಾರಕ್ಕೆ ಧೋನಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅನ್‌ಕ್ಯಾಪ್ಡ್ ಆಟಗಾರನಾಗಿ ಅವರನ್ನು ಉಳಿಸಿಕೊಂಡಿದೆ. ಅದರ ಅಡಿಯಲ್ಲಿ ಅವರು 4 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ಈ ಹಿರಿಯ ಕ್ರಿಕೆಟಿಗ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ರಾಂಚಿಯಲ್ಲಿ ‘ಮಹಿ ರೆಸಿಡೆನ್ಸಿ’ ಹೆಸರಿನ ಹೋಟೆಲ್ ತೆರೆದಿದ್ದಾರೆ. ಬೆಂಗಳೂರಿನಲ್ಲಿ ಎಂಎಸ್ ಧೋನಿ ಗ್ಲೋಬಲ್ ಶಾಲೆಯನ್ನೂ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ:ಆಸೆ ಈಡೇರುತ್ತಾ..? ರಿಷಬ್​ ಪಂತ್ ಸೇರಿಸಿಕೊಳ್ಳಲು ಮಾಸ್ಟರ್ ಮೈಂಡ್ MS ಧೋನಿ ಬಿಗ್ ಪ್ಲಾನ್!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment