newsfirstkannada.com

ರಾಮಮಂದಿರಕ್ಕಾಗಿ ಸತತ 30 ವರ್ಷ ಮೌನವ್ರತ; ಈಗ ಪ್ರತಿಜ್ಞೆ ಮುರಿಯಲಿದ್ದಾರೆ ‘ಮೌನಿ ಮಾತಾ’!

Share :

Published January 10, 2024 at 10:25am

Update January 10, 2024 at 10:28am

    ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕಾಗಿ ಪ್ರತಿಜ್ಞೆ

    ಪತಿ ನಿಧನದ ಬಳಿಕ ಶ್ರೀರಾಮನ ಸೇವೆಗೆ ಬದುಕು ಮುಡಿಪು

    30 ವರ್ಷಗಳನ್ನು ತೀರ್ಥ ಯಾತ್ರೆ ಮೂಲಕವೇ ಕಳೆದ ವೃದ್ಧೆ

ಅಯೋಧ್ಯೆಯಲ್ಲಿ ‘ರಾಮ ಮಂದಿರ’ದ ಕನಸು ನನಸಾಗಿದೆ. ಜನವರಿ 22 ರಂದು ಭವ್ಯ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಮೂಲಕ ಶ್ರೀರಾಮನ ಕೋಟ್ಯಾಂತರ ಆರಾಧಕರ ಹಲವು ವರ್ಷಗಳ ತಪಸ್ಸಿಗೆ ಯಶಸ್ಸು ಸಿಕ್ಕಂತಾಗಿದೆ. ಅಂತೆಯೇ ಜಾರ್ಖಂಡ್‌ನ 85 ವರ್ಷದ ವೃದ್ಧೆಯೊಬ್ಬರು ತಮ್ಮ ಕನಸು, ಪ್ರತಿಜ್ಞೆ ಈಡೇರುತ್ತಿರುವ ಫಲವಾಗಿ ಮೌನ ವ್ರತವನ್ನು ಮುರಿಯುತ್ತಿದ್ದಾರೆ. ಜನವರಿ 22 ರಂದು ಎಲ್ಲರ ಜೊತೆಯಲ್ಲೂ ಬಾಯಿ ತುಂಬಾ ಮಾತನಾಡಲಿದ್ದಾರೆ.

1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನದಂದು ಸರಸ್ವತಿ ದೇವಿಯು ಪ್ರತಿಜ್ಞೆ ಮಾಡಿದ್ದರಂತೆ. ಮುಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು. ಅಲ್ಲಿಯವರೆಗೂ ತಾವು ಮೌನವ್ರತ ಮಾಡುವುದಾಗಿ ಶಪಥ ಮಾಡಿದ್ದರಂತೆ. ಇದೀಗ ರಾಮಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಆ ಶಪಥವನ್ನು ಕೈಬಿಡಲು ನಿರ್ಧರಿಸಿದ್ದಾರೆ.

ಜಾರ್ಖಂಡ್​ನ ಧನಬಾದ್ ನಿವಾಸಿ ಆಗಿರುವ ಸರಸ್ವತಿ ದೇವಿ, ಸೋಮವಾರ ರೈಲಿನ ಮೂಲಕ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳಿದ್ದಾರೆ. ‘ಮೌನಿ ಮಾತಾ’ ಎಂದೇ ಕರೆಯಲ್ಪಡುವ ಸರಸ್ವತಿ ದೇವಿ, ಕೆಲವು ಸಂಜ್ಞೆಗಳ ಮೂಲಕ ಸಂವಹನ ನಡೆಸುತ್ತಿದ್ದರು. ಬರವಣಿಗೆಯ ಮೂಲಕವೂ ಜನರೊಂದಿಗೆ ಮಾತನಾಡುತ್ತಿದ್ದರು. 2020ರಲ್ಲಿ ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದ ದಿನದಿಂದ ಮೌನವ್ರತದಲ್ಲಿ ವಿಶ್ರಾಂತಿ ಪಡೆದುಕೊಂಡರು. ಮಧ್ಯಾಹ್ನ ಒಂದು ಗಂಟೆ ಮಾತ್ರ ಎಲ್ಲರೊಂದಿಗೂ ಮಾತನಾಡುತ್ತಿದ್ದರು.

ಜನವರಿ 22 ರಂದು ಮೌನಕ್ಕೆ ಬ್ರೇಕ್

ಸರಸ್ವತಿ ದೇವಿಯ ಕಿರಿಯ ಪುತ್ರ 55 ವರ್ಷದ ಹರೇರಾಮ್ ಅಗರ್ವಾಲ್ ನೀಡಿರುವ ಮಾಹಿತಿ ಪ್ರಕಾರ.. ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸಗೊಂಡಿತ್ತು. ಆಗ ನನ್ನ ತಾಯಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ಕಂಡರು. ಅಲ್ಲಿಯವರೆಗೆ ಮೌನವಾಗಿರುವುದಾಗಿ ಪ್ರಮಾಣ ಮಾಡಿದ್ದರು ಎಂದಿದ್ದಾರೆ. ರಾಮ ಮಂದಿರದ ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆಯಾದಾಗಿನಿಂದ ಅವರು ತುಂಬಾ ಸಂತೋಷವಾಗಿದ್ದಾರೆ. ಆಕೆ ಸೋಮವಾರ ರಾತ್ರಿ ಧನ್‌ಬಾದ್ ರೈಲು ನಿಲ್ದಾಣದಿಂದ ಗಂಗಾ-ಸಟ್ಲೆಜ್ ಎಕ್ಸ್‌ಪ್ರೆಸ್‌ನಲ್ಲಿ ಅಯೋಧ್ಯೆಗೆ ತೆರಳಿದ್ದಾರೆ. ಜನವರಿ 22ರಂದು ಮೌನ ಮುರಿಯಲಿದ್ದಾರೆ ಎಂದಿದ್ದಾರೆ.

ನಾಲ್ಕು ಹೆಣ್ಮಕ್ಕಳು ಸೇರಿದಂತೆ ಎಂಟು ಮಕ್ಕಳ ತಾಯಿಯಾದ ದೇವಿ 1986 ರಲ್ಲಿ ತನ್ನ ಪತಿ ದೇವಕಿನಂದನ್ ಅಗರ್ವಾಲ್ ಸಾವನ್ನಪ್ಪುತ್ತಾರೆ. ಬಳಿಕ ತಮ್ಮ ಜೀವನವನ್ನು ಭಗವಾನ್ ಶ್ರೀರಾಮನ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಹೆಚ್ಚಿನ ಸಮಯವನ್ನು ತೀರ್ಥಯಾತ್ರೆಗಳಲ್ಲಿಯೇ ಕಳೆದಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸರಸ್ವತಿ ದೇವಿ ಪ್ರಸ್ತುತ ತಮ್ಮ ಎರಡನೇ ಮಗ ನಂದಲಾಲ್ ಅಗರ್ವಾಲ್‌ ಜೊತೆ ವಾಸಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಮಂದಿರಕ್ಕಾಗಿ ಸತತ 30 ವರ್ಷ ಮೌನವ್ರತ; ಈಗ ಪ್ರತಿಜ್ಞೆ ಮುರಿಯಲಿದ್ದಾರೆ ‘ಮೌನಿ ಮಾತಾ’!

https://newsfirstlive.com/wp-content/uploads/2024/01/Mouny-Mata.jpg

Load More