ರೈಲ್ವೇ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ.. ಲೋಕೋ ಪೈಲಟ್​ ಅಲರ್ಟ್​ ಆಗಿದ್ದೇಗೆ..?

author-image
Veena Gangani
Updated On
ರೈಲ್ವೇ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ.. ಲೋಕೋ ಪೈಲಟ್​ ಅಲರ್ಟ್​ ಆಗಿದ್ದೇಗೆ..?
Advertisment
  • ಮರಿಗೆ ಜನ್ಮ ನೀಡುತ್ತಿದ್ದ ಆನೆ.. 2 ಗಂಟೆ ಗೂಡ್ಸ್ ರೈಲು ಸಂಚಾರ ಸ್ಥಗಿತ
  • ರೈಲು ಹರಿಯುವುದನ್ನು ತಪ್ಪಿಸಿದ ಅರಣ್ಯ, ರೈಲ್ವೇ ಇಲಾಖೆ ಅಧಿಕಾರಿಗಳು
  • ಮಧ್ಯರಾತ್ರಿ 3 ಗಂಟೆಯ ಸಮಯದಲ್ಲಿ ಆಗಿದ್ದೇನು..? ಇಲ್ಲಿದೆ ಮಾಹಿತಿ..!

ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲು ಚಾಲಕ ಬರೋಬ್ಬರಿ 2 ಗಂಟೆಗಳ ಕಾಲ ಸಂಚಾರ ಸ್ಥಗಿತ ಮಾಡಿತ್ತು. ಇದಕ್ಕೆ ಕಾರಣ ಆನೆ. ಹೌದು, ಆನೆಯೊಂದು ಮರಿಗೆ ಜನ್ಮ ನೀಡುವುದನ್ನು ನೋಡಿದ ಚಾಲಕ 2 ಗಂಟೆ ಕಾಲ ರೈಲು ಅನ್ನು ನಿಲ್ಲಿಸಿದ ಘಟನೆ ಜಾರ್ಖಂಡ್ ನಡೆದಿದೆ.

ಇದನ್ನೂ ಓದಿ: ಅಲಿಯಾ ಭಟ್​ಗೆ ಲಕ್ಷ ಲಕ್ಷ ವಂಚನೆ, ಬೆಂಗಳೂರಲ್ಲಿ ಆಪ್ತ ಸಹಾಯಕಿ ಅರೆಸ್ಟ್.. ಈಕೆ ವಂಚಿಸಿದ್ದೇ ಸಖತ್ ಇಂಟರೆಸ್ಟಿಂಗ್

ತಾಯಿ ಆನೆ ಮರಿಗೆ ಜನ್ಮ ನೀಡುವಾಗ ರೈಲ್ವೇ ಹಳಿಯ ಮೇಲೆ ಬಂದು ನಿಂತಿತ್ತು. ತಾಯಿ ಆನೆಗೆ ಯಾವುದೇ ತೊಂದರೆ ನೀಡಬಾರದು ಎಂದು ಲೋಕೋ ಪೈಲಟ್ ರೈಲು ಅನ್ನು ಸ್ಪಲ್ಪ ದೂರದಲ್ಲೇ ನಿಲ್ಲಿಸಿದ್ದಾರೆ. ಜಾರ್ಖಂಡ್ ರಾಜ್ಯದ ಹಜಾರಿಭಾಗ್ ರೈಲ್ವೇ ನಿಲ್ದಾಣ- ಬರಖಾಖಾನಾ ಮಧ್ಯೆ ಇರುವ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ರೈಲ್ವೇ ಹಳಿಯನ್ನು ಗೂಡ್ಸ್ ಸಾಗಣೆಗಾಗಿಯೇ ಬಳಸಲಾಗುತ್ತೆ. ಈ ಮಾರ್ಗದಲ್ಲಿ ಯಾವುದೇ ಪ್ರಯಾಣಿಕರ ರೈಲುಗಳು ಸಂಚಾರ ಮಾಡಲ್ಲ. ಹೀಗಾಗಿ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ.

publive-image

ಮಧ್ಯರಾತ್ರಿ 3 ಗಂಟೆಯ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈಲ್ವೇ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಕೆಲ ಗಂಟೆ ಕಾಲ ರೈಲುಗಳ ಓಡಾಟವನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು. ತಕ್ಷಣವೇ ರೈಲು ನಿಲ್ದಾಣದಿಂದ ಗೂಡ್ಸ್ ರೈಲಿನ ಲೋಕೋ ಪೈಲಟ್​ಗೆ ಈ ಬಗ್ಗೆ ಆಲರ್ಟ್ ನೀಡಲಾಗಿತ್ತು. ಹೀಗಾಗಿ ಲೋಕೋ ಪೈಲಟ್, ಆಲರ್ಟ್ ಆಗಿ ತಾಯಿ ಆನೆ ಹಾಗೂ ಮರಿಯಾನೆಗೆ ಯಾವುದೇ ತೊಂದರೆಯಾಗದಂತೆ 2 ಗಂಟೆ ಕಾಲ ರೈಲು ನಿಲ್ಲಿಸಿದ್ದರು. ವಿಭಾಗೀಯ ಅರಣ್ಯ ಅಧಿಕಾರಿ ನೀತೀಶ್ ಕುಮಾರ್ ಹೇಳುವ ಪ್ರಕಾರ, ಓರ್ವ ಫಾರೆಸ್ಟ್ ಗಾರ್ಡ್, ಗರ್ಭಿಣಿ ಆನೆ ರೈಲ್ವೇ ಹಳಿಯ ಮೇಲೆ ಬಂದು ನಿಂತಿದೆ. ಲೇಬರ್ ಪೇನ್​ನಿಂದ ಬಳಲುತ್ತಿದೆ ಎಂದು ನನಗೆ ಮಾಹಿತಿ ಕೊಟ್ಟರು. ಈ ಆನೆಯ ಮೇಲೆ ರೈಲು ಹರಿದುಬಿಡಬಹುದು ಎಂದು ನನಗೆ ವಾರ್ನಿಂಗ್ ಕೊಟ್ಟರು. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳನ್ನು ನಿಲ್ಲಿಸಲು ಮನವಿ ಮಾಡಿಕೊಂಡರು. ನಾನು ತಕ್ಷಣವೇ ಬರಖಾಖಾನಾದ ರೈಲ್ವೇ ಕಂಟ್ರೋಲ್ ರೂಂಗೆ ಸಂಪರ್ಕ ಮಾಡಿದೆ. ಎಲ್ಲ ರೈಲುಗಳನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡೆ. ಅದರಂತೆ ರೈಲುಗಳ ಸಂಚಾರವನ್ನು ನಿಲ್ಲಿಸಲಾಯಿತು. ರೈಲ್ವೇ ಹಳಿಯ ಮೇಲೆಯೇ ಆನೆ, ಮರಿಗೆ ಜನ್ಮ ನೀಡಿದೆ. ತಾಯಿ ಆನೆ ಹಾಗೂ ಮರಿಯಾನೆ ಎರಡೂ ಕೂಡ ಸೇಫ್ ಮತ್ತು ಆರೋಗ್ಯಕರವಾಗಿವೆ.


">July 9, 2025

ಈ ಘಟನೆಯ ವಿಡಿಯೋವನ್ನು ಫಾರೆಸ್ಟ್ ಗಾರ್ಡ್ ರೆಕಾರ್ಡ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಮ್ಮ ದೇಶದಲ್ಲಿ ಮಾನವ- ವನ್ಯಪ್ರಾಣಿಗಳ ಸಂಘರ್ಷ ನಡೆಯುತ್ತಲೇ ಇದೆ. ಆದರೆ, ಇದಕ್ಕೆ ವಿರುದ್ಧವಾಗಿ ವನ್ಯಪ್ರಾಣಿಯನ್ನು ರಕ್ಷಿಸಲು ರೈಲ್ವೇ ಇಲಾಖೆ, ಅರಣ್ಯ ಇಲಾಖೆ ಜಂಟಿಯಾಗಿ ರೈಲು ಅನ್ನೇ ನಿಲ್ಲಿಸಿ ಶ್ರಮ ವಹಿಸಿದ್ದಾರೆ. ಜಾರ್ಖಂಡ್ ರಾಜ್ಯದಲ್ಲಿ ಮಾನವ- ವನ್ಯಜೀವಿ ಸಂಘರ್ಷದಲ್ಲಿ ಕಳೆದ 5 ವರ್ಷಗಳಲ್ಲಿ 474 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒರಿಸ್ಸಾ ರಾಜ್ಯದ ನಂತರ ಜಾರ್ಖಂಡ್ ನಲ್ಲಿ ಹೆಚ್ಚಿನ ಜನರು ಮಾನವ- ವನ್ಯಜೀವಿ ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ. ಕೇಂದ್ರದ ಪರಿಸರ, ಅರಣ್ಯ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಈ ಮಾಹಿತಿಯನ್ನು ಲೋಕಸಭೆಗೆ ನೀಡಿದ್ದರು. ಇದರ ಜೊತೆಗೆ ಜಾರ್ಖಂಡ್ ರಾಜ್ಯದಲ್ಲಿ 2019 ರಿಂದ 2024 ರವರೆಗೆ 5 ವರ್ಷದ ಅವಧಿಯಲ್ಲಿ 30 ಆನೆಗಳು ವಿದ್ಯುತ್ ಸ್ಪರ್ಶ ಹಾಗೂ ಇತರೆ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಲೋಕಸಭೆಗೆ ಕೇಂದ್ರ ಅರಣ್ಯ, ಪರಿಸರ ಸಚಿವರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment