/newsfirstlive-kannada/media/post_attachments/wp-content/uploads/2024/12/JIMMY-CARTER.jpg)
ಯುಎಸ್​ನ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್​​ ಬ್ರೇನ್​ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಲೇ ಅಸುನೀಗಿದ್ದಾರೆ. ಜಿಮ್ಮಿ ಕಾರ್ಟರ್​ 1977 ರಿಂದ 1985ರವರೆಗೆ ಯುಎಸ್​ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯೂ ಕೂಡ ಒಲಿದು ಬಂದಿತ್ತು. 2023ರಿಂದಲೂ ಬ್ರೆನ್ ಕ್ಯಾನ್ಸರ್​ ನೋವು ತೀವ್ರಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಿಮ್ಮಿ ಕಾರ್ಟರ್​ ತಮ್ಮ ನೂರನೇ ವಯಸ್ಸಿನಲ್ಲಿ ಅಸುನೀಗಿದ್ದಾರೆ.
ಪೀಚ್​ ರಾಜ್ಯದ ಗವರ್ನರ್ ಆಗುವ ಮೂಲಕ ಆರಂಭಗೊಂಡ ಇವರ ರಾಜಕೀಯ ಜೀವನ ಅವರನ್ನು ಯುಎಸ್​​ನ ಅಧ್ಯಕ್ಷ ಗಾದಿಗೆ ತಂದು ಕೂರಿಸುವವರೆಗೂ ತಲುಪಿತ್ತು. ರಾಜಕೀಯಕ್ಕೂ ಬರುವ ಮುನ್ನ ಜಿಮ್ಮಿ ಕಾರ್ಟರ್ ಕಡಲೆಕಾಯಿ ಫಾರ್ಮ್​ ನಡೆಸುತ್ತಿದ್ದರು.
ನನ್ನ ತಂದೆ ನನಗೆ ಮಾತ್ರವಲ್ಲ ಶಾಂತಿಯನ್ನು ನಂಬುವ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾದ ನಾಯಕರಾಗಿದ್ದರು ಎಂದು ಜಿಮ್ಮಿ ಕಾರ್ಟರ್​ ಪುತ್ರ ಚಿಪ್ ಕಾರ್ಟರ್​ ಹೇಳಿದ್ದಾರೆ. ದೀರ್ಘಕಾಲ ಬಾಳಿ ಬದುಕಿದ ಯುಎಸ್​ನ ಏಕೈಕ ಅಧ್ಯಕ್ಷ ಅಂದ್ರೆ ಅದು ಜಿಮ್ಮಿ ಕಾರ್ಟರ್​ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ಇದು ನನ್ನ ಕೊನೆಯ ಮೆಸೇಜ್.. ಅಪಘಾತಕ್ಕೂ ಮುನ್ನ ದಕ್ಷಿಣ ಕೊರಿಯಾ ವಿಮಾನದ ಪ್ರಯಾಣಿಕ ಹೇಳಿದ್ದೇನು?
2015ರಲ್ಲಿ ಜಿಮ್ಮಿ ಕಾರ್ಟರ್​ಗೆ ಬ್ರೇನ್ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಸತತ ಸುಮಾರು 10 ವರ್ಷಗಳ ಕಾಲ ಮಹಾಮಾರಿಯೊಂದಿಗೆ ಹೋರಾಡಿದ ಜಿಮ್ಮಿ ಕಾರ್ಟರ್, ಇಂದು 100ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿ ನಿರ್ಗಮಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us