ಅಂಬಾನಿ ಮಗನ ಮದ್ವೆ ಸ್ಪೆಷಲ್​.. ಜಿಯೋ 3 ತಿಂಗಳ ರೀಚಾರ್ಜ್​ ಉಚಿತ ನೀಡುತ್ತಿದ್ಯಾ?

author-image
AS Harshith
Updated On
ಅಂಬಾನಿ ಮಗನ ಮದ್ವೆ ಸ್ಪೆಷಲ್​.. ಜಿಯೋ 3 ತಿಂಗಳ ರೀಚಾರ್ಜ್​ ಉಚಿತ ನೀಡುತ್ತಿದ್ಯಾ?
Advertisment
  • ಮುಖೇಶ್​​ ಅಂಬಾನಿಯ ಹಿರಿಯ ಮಗನ ಅದ್ಧೂರಿ ಮದುವೆ
  • 500 ಕೋಟಿ ಮೊತ್ತದಲ್ಲಿ ನಡೆದ ದುಬಾರಿ ಮದುವೆ
  • ಫ್ರೀ..ಫ್ರೀ..ಫ್ರೀ ಅನ್ನೋ ಈ ಮ್ಯಾಟರ್​​ ನಿಜನಾ?

Fact check: ಇತ್ತೀಚೆಗೆ ರಿಲಯನ್ಸ್ ಕಂಪನಿ​ ಮುಖ್ಯಸ್ಥ ಮುಖೇಶ್​​ ಅಂಬಾನಿಯವರ ಹಿರಿಯ ಮಗ ಅನಂತ್​ ಅಂಬಾನಿಯವರ ದುಬಾರಿ ಮದುವೆ ನಡೆದಿತ್ತು. 500 ಕೋಟಿ ಮೊತ್ತದಲ್ಲಿ ಭರ್ಜರಿಯಾಗಿ ಕಾರ್ಯಕ್ರಮ ನೆರವೇರಿತ್ತು. ಆದರೆ ಈ ಮದುವೆ ಸಂಭ್ರಮದ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ರಿಲಯನ್ಸ್​ ಜಿಯೋ ತನ್ನ ಬಳಕೆದಾರರಿಗೆ 3 ತಿಂಗಳ ಉಚಿತ ರೀಚಾರ್ಜ್​ ನೀಡುತ್ತಿದೆ ಎಂಬ ಸಂಗತಿ ಹರಿದಾಡುತ್ತಿದೆ.

ಇದನ್ನೂ ಓದಿ: ಬೆತ್ತಲೆ ಪಾರ್ಟಿಯಲ್ಲಿ ಭಾಗವಹಿಸಿದ ಕನ್ನಡದ ‘ವಿಶ್ವ’ ಸಿನಿಮಾದ ನಟಿ! ಅನುಭವ ಬಿಚ್ಚಿಟ್ರು ನೋಡಿ

ವಾಟ್ಸ್​ಆ್ಯಪ್​ ಸೇರಿ ಮೆಸೇಜಿಂಗ್​ ಪ್ಲಾಟ್​​ಫಾರ್ಮ್​ಗಳಲ್ಲಿ ಜಿಯೋ ಉಚಿತ ರೀಚಾರ್ಜ್​ ಬಗ್ಗೆ ಸಂದೇಶ ಹರಿದಾಡುತ್ತಿದೆ. ಹಿಂದಿಯಲ್ಲಿ ಬರೆಯಲಾಗಿದ್ದ ಈ ಸಂದೇಶದಲ್ಲಿ ಉಚಿತ ರೀಚಾರ್ಜ್​ ಕೊಡುಗೆ ಆನಂದಿಸಲು ಲಿಂಕ್​ ಕ್ಲಿಕ್​ ಮಾಡಿ ಎಂದು ಬರೆಯಲಾಗಿದೆ. ಆದರೆ ಅನೇಕರು ಈ ಸಂದೇಶವನ್ನು ಗಮನಿಸಿ ಲಿಂಕ್​ ಟ್ಯಾಪ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: 7 ಜನರು ಬಲಿ.. ಗುಡ್ಡ ಕುಸಿತದ ಭೀಕರತೆ ಬಗ್ಗೆ ತಿಳಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಆದರೆ ಇದೊಂದು ನಕಲಿ ಸಂದೇಶವಾಗಿದ್ದು, ರಿಲಯನ್ಸ್​ ಜಿಯೋ ಈ ಬಗ್ಗೆ ಎಚ್ಚರಿಕೆಯ ಜೊತೆಗೆ ಸ್ಪಷ್ಟತೆಯನ್ನು ನೀಡಿದೆ. ಇಂತಹ ನಕಲಿ ಸಂದೇಶ ನಂಬಬೇಡಿ. ಏಕೆಂದರೆ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment