Jio, Airtelಗೆ ಮತ್ತೊಂದು ಮಾಸ್ಟರ್​ ಸ್ಟ್ರೋಕ್​​ ಕೊಟ್ಟ ಬಿಎಸ್​ಎನ್​​ಎಲ್..!

author-image
Ganesh
Updated On
BSNL: ದಿನಕ್ಕೆ 7 ರೂಪಾಯಿಯಂತೆ 105 ದಿನಗಳಿಗೆ 210GB ಡೇಟಾ.. ಸಖತ್ತಾಗಿದೆ ನೂತನ ಪ್ಲಾನ್​
Advertisment
  • ಜನವರಿಯಿಂದ 5G ನೆಟ್​ವರ್ಕ್​ ನೀಡಲಿರುವ BSNL
  • ಗ್ರಾಹಕರ ಸೆಳೆಯುವಲ್ಲಿ ಯಶಸ್ವಿ ಆಗಿರುವ ಸರ್ಕಾರಿ ಸಂಸ್ಥೆ
  • ಬೇರೆ ಬೇರೆ ನೆಟ್​ವರ್ಕ್​ ಗ್ರಾಹಕರು ಬಿಎಸ್​ಎನ್​​ಎಲ್​​ಗೆ ಶಿಫ್ಟ್

ಸರ್ಕಾರಿ ಸ್ವಾಮ್ಯದ BSNL ಸಂಸ್ಥೆಗೆ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ 8 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಟ್ರಾಯ್ ನೀಡಿದ್ದು, ಬಿಎಸ್ಎನ್ಎಲ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ ಎಂದು ತಿಳಿಸಿದೆ.

ಇದೀಗ ಬಿಎಸ್ಎನ್ಎಲ್ 91.89 ಲಕ್ಷ ಗ್ರಾಹಕರನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಶೇಕಡಾ 7.98ಕ್ಕೆ ಏರಿಕೆ ಮಾಡಿಕೊಂಡಿದೆ. ಖಾಸಗಿ ಸಂಸ್ಥೆಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ದರ ಹೆಚ್ಚಳ ಮಾಡಿರೋದ್ರಿಂದ ಗ್ರಾಹಕರನ್ನ ಕಳೆದುಕೊಳ್ತಿವೆ. ಸದ್ಯ ಸಾಕಷ್ಟು ಮಂದಿ ಸಿಮ್​ಗಳನ್ನ ಬಿಎಸ್​ಎನ್​ಎಲ್​ಗೆ ಪೋರ್ಟ್​ ಮಾಡಿಸಿಕೊಳ್ತಿದ್ದಾರೆ.

ಇದನ್ನೂ ಓದಿ:BSNL: ಗ್ರಾಹಕರಿಗೆ ಮತ್ತೊಂದು ಗುಡ್​​ನ್ಯೂಸ್ ಕೊಟ್ಟ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್

ಇನ್ನು ಬಿಎಸ್​ಎನ್​​​ಎಲ್​ 4G ಸೇವೆಯಿಂದ 5Gಗೆ ಶಿಫ್ಟ್ ಆಗಲು ತಯಾರಿ ನಡೆಸ್ತಿದೆ. 2025 ಜನವರಿಯಿಂದ ಬಹುತೇಕ ನಗರಗಳಲ್ಲಿ ಬಿಎಸ್​ಎನ್​ಎಲ್ 5G ನೆಟ್​​ವರ್ಕ್​ ಪಡೆಯಲಿದೆ. ​ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದೆ. 5 ನೆಟ್​​ವರ್ಕ್​​, ಕಡಿಮೆ ಬೆಲೆಗೆ ರೀಚಾರ್ಜ್​ ಪ್ಲಾನ್ ಪರಿಚಯಿಸುತ್ತಿರುವ ಬಿಎಸ್​​ಎನ್​ಎಲ್, ಖಾಸಗಿ ಟೆಲಿಕಾಮ್ ಸಂಸ್ಥೆಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಇದೀಗ ಅದೇ ಬಿಎಸ್​ಎನ್​​​ಎಲ್ ತನ್ನ ಗ್ರಾಹಕರಿಗೆ ಗುಡ್​​ನ್ಯೂಸ್ ಒಂದನ್ನು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment