Netflix, ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ಉಚಿತ; ಜಿಯೋ, ಏರ್​ಟೆಲ್​ನ 4 ಬೆಸ್ಟ್​ ಪ್ಲಾನ್​ಗಳು..!

author-image
Ganesh
Updated On
Netflix, ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ಉಚಿತ; ಜಿಯೋ, ಏರ್​ಟೆಲ್​ನ 4 ಬೆಸ್ಟ್​ ಪ್ಲಾನ್​ಗಳು..!
Advertisment
  • Jio ಮತ್ತು Airtel ದೇಶದ ದೈತ್ಯ ಟೆಲಿಕಾಂ ಕಂಪನಿಗಳು
  • ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್​​ ಬಗ್ಗೆ ಮಾಹಿತಿ ಇಲ್ಲಿದೆ
  • ಎಷ್ಟು ರೂ. ರೀಚಾರ್ಜ್ ಮಾಡಿಕೊಂಡರೆ ಏನೆಲ್ಲ ಲಭ್ಯ?

Jio ಮತ್ತು Airtel ದೇಶದ ದೈತ್ಯ ಟೆಲಿಕಾಂ ಕಂಪನಿಗಳು. ಇವು ಬಳಕೆದಾರರಿಗೆ ಅನೇಕ ಬೆಸ್ಟ್​ ಪ್ಲಾನ್​ಗಳನ್ನು ನೀಡುತ್ತಿವೆ. ಜಿಯೋ ಮತ್ತು ಏರ್‌ಟೆಲ್‌ನ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್​​ ಬಗ್ಗೆ ಮಾಹಿತಿ ಇಲ್ಲಿದೆ. ನವೆಂಬರ್-2024 ರಲ್ಲಿ ಸಕ್ರಿಯವಾಗಿರುವ ಕೆಲವು ಪ್ಲಾನ್​ಗಳಲ್ಲಿ ನೀವು ನೆಟ್‌ಫ್ಲಿಕ್ಸ್ (Netflix) ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ (Disney Plus Hotstar) ಉಚಿತ ಚಂದಾದಾರಿಕೆ ಪಡೆಯುತ್ತೀರಿ.

ಏರ್‌ಟೆಲ್​ನ 549 ರೂ. ಪ್ಲಾನ್
ಏರ್‌ಟೆಲ್‌ನ ಈ ಪ್ಲಾನ್​ನ ಬೆಲೆ 549 ರೂಪಾಯಿ. ಬಳಕೆದಾರರು 3 ತಿಂಗಳವರೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್​ನ ಉಚಿತ ಚಂದಾದಾರಿಕೆ ಪಡೆಯುತ್ತಾರೆ. ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ಲೇ ಪ್ರೀಮಿಯಂ ಮತ್ತು ವಿಂಕ್ ಮ್ಯೂಸಿಕ್‌ನಂತಹ ಅಪ್ಲಿಕೇಶನ್‌ಗಳ ಉಚಿತ ಬಳಕೆಗೆ ಅವಕಾಶ ಇದೆ. ಅನಿಯಮಿತ ಕರೆ, 3 GB ಡೇಟಾ ಮತ್ತು ದಿನಕ್ಕೆ 100 SMS ಸೌಲಭ್ಯ ಸಹ ಇದೆ.

ಜಿಯೋ 949 ರೂ. ಪ್ಲಾನ್
ಉಚಿತ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ, ಅನಿಯಮಿತ ಕರೆ, ದಿನಕ್ಕೆ 2GB ಡೇಟಾ ಮತ್ತು 100 SMS ಜೊತೆಗೆ JioTV, JioCinema ಮತ್ತು JioCloudಗೆ ಉಚಿತ ಪ್ರವೇಶಕ್ಕೆ ಅವಕಾಶ ಇದೆ. ಈ ಯೋಜನೆಯ ಮಾನ್ಯತೆ 84 ದಿನಗಳು.

ಏರ್‌ಟೆಲ್ 1029 ರೂ. ಪ್ಲಾನ್
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆ, ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ಲೇ ಪ್ರೀಮಿಯಂ ಮತ್ತು ವಿಂಕ್ ಮ್ಯೂಸಿಕ್‌ನಂತಹ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಿಗಲಿದೆ. ಅನಿಯಮಿತ ಕರೆ, 2 GB ಡೇಟಾ ಮತ್ತು ದಿನಕ್ಕೆ 100 SMS ಸೌಲಭ್ಯ ಇದೆ. ಈ ಯೋಜನೆಯ ಮಾನ್ಯತೆ 84 ದಿನಗಳು.

ಇದನ್ನೂ ಓದಿ:ಭಾರತ ತಂಡದ ಬ್ಯಾಟಿಂಗ್ ಕೋಚ್ ಯಾರು..? ಗೌತಮ್​ ಗಂಭೀರ್​ಗೆ ಕ್ರಿಕೆಟ್​ ದಿಗ್ಗಜ ಪ್ರಶ್ನೆ

ಜಿಯೋ 1299 ರೂ ಪ್ಲಾನ್
ನೆಟ್‌ಫ್ಲಿಕ್ಸ್ ಚಂದಾದಾರಿಕೆ ಉಚಿತವಾಗಿದೆ. ಅನಿಯಮಿತ ಕರೆ ಸೌಲಭ್ಯ, ಪ್ರತಿದಿನ 2GB ಡೇಟಾ ಮತ್ತು 100 SMS ಜೊತೆಗೆ JioTV, JioCinema ಮತ್ತು JioCloudಗೆ ಉಚಿತ ಪ್ರವೇಶ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment