/newsfirstlive-kannada/media/post_attachments/wp-content/uploads/2024/10/SIM-CARD.jpg)
ಜಿಯೋ, ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು BSNL ಸಿಮ್ ಕಾರ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಟೆಲಿಕಾಂ ಆಪರೇಟರ್‌ಗಳ ಸುಮಾರು 1.7 ಕೋಟಿ ಸಿಮ್ ಕಾರ್ಡ್‌ಗಳನ್ನು ಸರ್ಕಾರ ಬ್ಲಾಕ್ ಮಾಡಿದೆ.
ನಕಲಿ ದಾಖಲೆಗಳ ಮೂಲಕ ಪಡೆಯಲಾದ ಸಿಮ್ಕಾರ್ಡ್ಗಳನ್ನು ಬ್ಲಾಕ್ ಮಾಡಿದೆ. ಈ ಮೂಲಕ ನೀವು ಬೇರೊಬ್ಬರ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬಳಸಬಾರದು ಎಂದು ಎಚ್ಚರಿಕೆ ನೀಡಿದೆ. ಒಂದು ವೇಳೆ ನೀವು ಬಳಸುತ್ತಿರುವ ಸಿಮ್ ಕಾರ್ಡ್ ನಿಮ್ಮ ಹೆಸರಲ್ಲಿ ಎಲ್ಲವೆಂದರೆ ಅದು ಬ್ಲಾಕ್ ಆಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ:ರತನ್ ಟಾಟಾ ಆಸ್ಪತ್ರೆಗೆ ದಾಖಲು.. ವದಂತಿಗಳ ಬಗ್ಗೆ 86 ವರ್ಷದ ಉದ್ಯಮಿ ಹೇಳಿದ್ದೇನು?
ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಲು ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಇಂಥ ನಿರ್ಧಾರ ಕೈಗೊಂಡಿದೆ. AI ಸಹಾಯದಿಂದ ಸಿಮ್‌ಗಳನ್ನು ನಿರ್ಬಂಧಿಸಲಾಗಿದೆ. ನಕಲಿ ಅಥವಾ ನಕಲಿ ದಾಖಲೆಗಳೊಂದಿಗೆ ಖರೀದಿಸಿದ 1.77 ಕೋಟಿ ಮೊಬೈಲ್ ಸಂಪರ್ಕಗಳನ್ನು ಕೃತಕ AI ಸಹಾಯದಿಂದ ನಿರ್ಬಂಧಿಸಲಾಗಿದೆ. ಮಾತ್ರವಲ್ಲ, 45 ಲಕ್ಷ ಅಂತರರಾಷ್ಟ್ರೀಯ ನಕಲಿ ಕರೆಗಳನ್ನು ನಿರ್ಬಂಧಿಸಲಾಗಿದೆ.
11 ಲಕ್ಷ ಖಾತೆಗಳನ್ನು ಸ್ಥಗಿತ
ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಮ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಲಾಗುವುದು ಎಂದು ಕೇಂದ್ರ ಹೇಳಿದೆ. ಸುಮಾರು 11 ಲಕ್ಷ ಬ್ಯಾಂಕ್‌ಗಳು ಖಾತೆಗಳನ್ನೂ ಸ್ಥಗಿತ ಮಾಡಲಾಗಿದೆ ಇದೇ ವೇಳೆ ತಿಳಿಸಿದೆ.
ಇದನ್ನೂ ಓದಿ:Jio, Airtel ಸೋಲಿಸಲು ಹಠತೊಟ್ಟು ನಿಂತ BSNL; ದಿಢೀರ್ ಟಿವಿ ಜಗತ್ತಿಗೆ ಕಾಲಿಟ್ಟ ಟೆಲಿಕಾಂ ಕಂಪನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ