ಏರ್​ಟೆಲ್​​ಗೆ ಟೆನ್ಷನ್ ಹೆಚ್ಚಿಸಿದ ಜಿಯೋ.. ಈ ಪ್ಲಾನ್​ನಲ್ಲಿ ಗ್ರಾಹಕರಿಗೆ ಹೆಚ್ಚು ಪ್ರಯೋಜನ..!

author-image
Ganesh
Updated On
ಜಿಯೋ 8ನೇ ವಾರ್ಷಿಕೋತ್ಸವ; ಗ್ರಾಹಕರಿಗಾಗಿ 10GB ಡೇಟಾ ಮತ್ತು ಜೊಮ್ಯಾಟೊ ಗೋಲ್ಡ್​​ ಸದಸ್ಯತ್ವ ಉಚಿತ!
Advertisment
  • 47 ಕೋಟಿ ಬಳಕೆದಾರರನ್ನು ಹೊಂದಿರೋ ಜಿಯೋ
  • ಹೆಚ್ಚುವರಿಯಾಗಿ 20GB ಬೋನಸ್ ಡೇಟಾ ಸಿಗಲಿದೆ
  • ಏರ್‌ಟೆಲ್‌ನ 589 ರೂಪಾಯಿ ಪ್ಲಾನ್​​ನಲ್ಲಿ ಏನೇನು ಸಿಗುತ್ತೆ?

ಜಿಯೋ ತನ್ನ ಗ್ರಾಹಕರಿಗೆ ಅತ್ಯುತ್ತಮ ಮತ್ತು ಅಗ್ಗದ ಪ್ಲಾನ್ ನೀಡುತ್ತ ಬಂದಿದೆ. 47 ಕೋಟಿ ಬಳಕೆದಾರರನ್ನು ಹೊಂದಿರೋ ಕಂಪನಿಯು ಕಮ್ಮಿ ಬೆಲೆಗೆ ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಅನೇಕ ಲಾಭದಾಯಕ ಪ್ಲಾನ್ ಪ್ರಾರಂಭಿಸಿದೆ. ರೀಚಾರ್ಜ್ ಮಾಡಿ, ಮಾಡಿ ಸಾಕಾಯ್ತು ಅನ್ನೋರಿಗೆ ಈ ಪ್ಲಾನ್ ತುಂಬಾನೇ ಸಹಾಯ ಆಗಲಿದೆ.

448 ರೂಪಾಯಿ ರೀಚಾರ್ಜ್..!

ಜಿಯೋದಲ್ಲಿ 448 ರೂಪಾಯಿ ರೀಚಾರ್ಜ್ ಪ್ಲಾನ್ ಒಂದು ಇದೆ. ಇಂಟರ್ನೆಟ್ ಅಗತ್ಯವಿಲ್ಲದವರಿಗೆ ಹೇಳಿ ಮಾಡಿಸಿದ ಪ್ಲಾನ್ ಇದಾಗಿದೆ. ಇದು 84 ದಿನಗಳವರೆಗೆ ಉಚಿತ ಕರೆ ಸೌಲಭ್ಯ ನೀಡಲಿದೆ. ಯಾವುದೇ ನೆಟ್​​ವರ್ಕ್​ ಜೊತೆಗೂ ಉಚಿತವಾಗಿ ಕರೆ ಮಾಡಬಹುದು, ಸಾವಿರ ಉಚಿತ ಎಸ್​ಎಂಎಸ್ ಸೇವೆ ಕೂಡ ಇದರಲ್ಲಿದೆ.

899 ರೂಪಾಯಿ ರೀಚಾರ್ಜ್ ಪ್ಲಾನ್..!

ಜಿಯೋದ 899 ರೂಪಾಯಿ ರೀಚಾರ್ಜ್​ ಪ್ಲಾನ್ ಇಂಟರ್​​ನೆಟ್ ಬಳಸೋರಿಗೆ ಉತ್ತಮ ಆಯ್ಕೆ. ಪ್ರತಿದಿನ 2GB ಡೇಟಾ ಸಿಗಲಿದ್ದು, 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಹೆಚ್ಚುವರಿಯಾಗಿ 20GB ಬೋನಸ್ ಡೇಟಾ ಕೂಡ ಸಿಗಲಿದೆ.

ಇದನ್ನೂ ಓದಿ: ಜೂನ್ 1ರಿಂದ ಪ್ರಮುಖ 5 ಬದಲಾವಣೆಗಳು; ಇಂದಿನಿಂದ ಈ ಮೊಬೈಲ್‌ಗಳಲ್ಲಿ WhatsApp ವರ್ಕ್ ಆಗಲ್ಲ!

publive-image

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಇತ್ತೀಚೆಗೆ ಟೆಲಿಕಾಂ ಕಂಪನಿಗಳಿಗೆ ಡೇಟಾ ಇಲ್ಲದೇ ಅಗ್ಗದ ಯೋಜನೆ ಪರಿಚಯಿಸಲು ನಿರ್ದೇಶನ ನೀಡಿತು. ಬೆನ್ನಲ್ಲೇ ಜಿಯೋ ಕರೆಗೆ ಸಂಬಂಧಿಸಿದ ವಿಶೇಷ ಆಫರ್​ ನೀಡಿದೆ. ಅವುಗಳಲ್ಲಿ 448 ರೂಪಾಯಿ ಪ್ಲಾನ್ ಹೆಚ್ಚು ಜನಪ್ರಿಯವಾಗುತ್ತಿದೆ.

ಜನ ಏರ್‌ಟೆಲ್‌ನ 589 ರೂಪಾಯಿ ಪ್ಲಾನ್ ತುಂಬಾ ಇಷ್ಟಪಡುತ್ತಾರೆ. ಆದರೆ ಇದರ ಮಾನ್ಯತೆ ಕೇವಲ 30 ದಿನಗಳು. ಈ ಪ್ಲಾನ್​​ನಲ್ಲಿ ಬಳಕೆದಾರರು ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆಯುತ್ತಾರೆ. ಬಳಕೆದಾರರು ಯೋಜನೆಯಲ್ಲಿ 50GB ಡೇಟಾ ಮತ್ತು 300 ಉಚಿತ SMS ನಂತಹ ಪ್ರಯೋಜನ ಪಡೆಯುತ್ತಾರೆ. ಈ ಯೋಜನೆಯಲ್ಲಿ ಪ್ರತಿದಿನ 100 ಉಚಿತ SMS ಗಳ ಪ್ರಯೋಜನ ಸಹ ಇದೆ. ಜೊತೆಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ, ಅಪೊಲೊ 24|7 ಸರ್ಕಲ್ ಮತ್ತು ಉಚಿತ ಹೆಲೋಟ್ಯೂನ್‌ಗೆ ಪ್ರವೇಶದಂತಹ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ.

ಇದನ್ನೂ ಓದಿ: ಎಷ್ಟು ಸೆಕೆಂಡ್​​ಗೆ ಒಮ್ಮೆ ಭೂಮಿಯ ಹೃದಯ ಬಡಿದುಕೊಳ್ಳುತ್ತೆ..? ಆ ನಿಗೂಢ ಶಬ್ದದ ರಹಸ್ಯವೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment