/newsfirstlive-kannada/media/post_attachments/wp-content/uploads/2024/10/Jio.jpg)
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಜಿಯೋ ಮಾಲೀಕ ಮುಕೇಶ್ ಅಂಬಾನಿ ಧಮಾಕಾ ಆಫರ್ ನೀಡಿದ್ದಾರೆ. ಹಬ್ಬದ ಖುಷಿಯಲ್ಲಿ ಜಿಯೋದ 4G ಫೋನ್ ಅನ್ನು ರೂಪಾಯಿ 700ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ದೀಪಾವಳಿಯಂದು ರಿಲಯನ್ಸ್ ಜಿಯೋ ತನ್ನ ಜಿಯೋ ಭಾರತ್ ಫೋನ್‌ನಲ್ಲಿ ಶೇಕಡಾ 30 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. 999 ರೂಪಾಯಿ ಇರುವ ಜಿಯೋ ಭಾರತ್ ಫೋನ್ ಅನ್ನು 699 ರೂಪಾಯಿಗೆ ಖರೀದಿಸಬಹುದು. 123 ರೂಪಾಯಿಗೆ ರೀಚಾರ್ಜ್ ಮಾಡಿಕೊಂಡರೆ ಅನಿಯಮಿತ ಉಚಿತ ಕರೆಗಳೊಂದಿಗೆ ಬಳಕೆದಾರರು 14 GB ಡೇಟಾವನ್ನು ಬಳಸಬಹುದು.
ಇದನ್ನೂ ಓದಿ:iPhone-16 ಬ್ಯಾನ್..! Apple ಸಂಸ್ಥೆಗೆ ಬಿಗ್ ಶಾಕ್ ಕೊಟ್ಟ ಸರ್ಕಾರ
ಏರ್‌ಟೆಲ್, ವೊಡಾಫೋನ್‌ಗಿಂತ ಕಡಿಮೆ
ರಿಲಯನ್ಸ್ ಜಿಯೋದ 123 ರೂಪಾಯಿ ರೀಚಾರ್ಜ್ ಯೋಜನೆಯು ಏರ್‌ಟೆಲ್ ಮತ್ತು ವೊಡಾಫೋನ್ ರೀಚಾರ್ಜ್ ಪ್ಲಾನ್ಗಿಂತ ಶೇಕಡಾ 40 ರಷ್ಟು ಕಡಿಮೆ ಆಗಿದೆ. ಜೊತೆಗೆ 2G ಯಿಂದ 4Gಗೆ ಬದಲಾಯಿಸುವ ಅವಕಾಶ ಕೂಡ ಇದೆ.
ಫೋನ್‌ನಲ್ಲಿ ಏನಿದೆ..?
- ಫೋನ್‌ನಲ್ಲಿ 455ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ನೋಡಬಹುದು
- ಪ್ರೀಮಿಯರ್ ಸಿನಿಮಾ, ಹೊಸ ಚಲನಚಿತ್ರಗಳು, ವೀಡಿಯೊಗಳು
- ಕ್ರೀಡೆಗಳ ನೇರ ಪ್ರಸಾರದ ಕಾರ್ಯಕ್ರಮಗಳು, ಡಿಜಿಟಲ್ ಪಾವತಿ
- ಜಿಯೋ ಫೋನ್ ಶಾಪ್, JioMart ಮತ್ತು ಇ-ಕಾಮರ್ಸ್ ಸೈಟ್ನಿಂದಲೂ ಖರೀದಿಸಬಹುದು
ಇದನ್ನೂ ಓದಿ:ಅರಬ್ ಅಮೆರಿಕನ್ ಮತಗಳ ಮೇಲೆ ಕಣ್ಣು; ಮಿಚಿಗನ್ನಲ್ಲಿ ಹ್ಯಾರಿಸ್, ಟ್ರಂಪ್ ಭರ್ಜರಿ ಕ್ಯಾಂಪೇನ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್