/newsfirstlive-kannada/media/post_attachments/wp-content/uploads/2024/08/Jio-1.jpg)
ಸೈಬರ್ ಅಪರಾಧ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ವಂಚಕರು ಹೊಸ, ಹೊಸ ಮಾರ್ಗಗಳ ಮೂಲಕ ಜನರ ವಂಚಿಸಲು ಪ್ರಯತ್ನಿಸ್ತಿದ್ದಾರೆ. ಡಿಜಿಟಲ್ ಅರೆಸ್ಟ್ ಸದ್ಯ ಟ್ರೆಂಡಿಂಗ್ನಲ್ಲಿದೆ. ಇದೀಗ ದೇಶದ ಹೆಸರಾಂತ ಟೆಲಿಕಾಂ ಕಂಪನಿ ಜಿಯೋ ಹೆಸರು ಬಳಸಿಕೊಂಡು ಜನರ ವಂಚಿಸುವ ಪ್ರಯತ್ನ ನಡೆದಿದೆ. ಯಾವುದಕ್ಕು ನೀವು ಹುಷಾರಾಗಿರಿ.
ಈ ಬಗ್ಗೆ ಸೈಬರ್ ಭದ್ರತೆಗೆ ಸಂಬಂಧಿಸಿದ ಸರ್ಕಾರಿ ಸಂಸ್ಥೆ ‘ಸೈಬರ್ ದೋಸ್ತ್’ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಎಚ್ಚರಿಕೆ ನೀಡಿದೆ. APK ಫೈಲ್ ಡೌನ್‌ಲೋಡ್ ಮಾಡಲು ಲಿಂಕ್ ಹೊಂದಿರುವ ಜಿಯೋ ಹೆಸರಿನಲ್ಲಿ ಫೇಕ್ ಮೆಸೇಜ್ ಕಳುಹಿಸಲಾಗುತ್ತಿದೆ. ನಿಮ್ಮಿಂದ ಈ ಫೈಲ್ ಡೌನ್‌ಲೋಡ್ ಮಾಡಿಸಿ ಫೋನ್ ಹ್ಯಾಕ್ ಮಾಡುವ ಹುನ್ನಾರ ನಡೆದಿದೆ. ಆ ಮೂಲಕ ನಿಮ್ಮ ಫೋನ್ನಿಂದ ಗೌಪ್ಯ ಮಾಹಿತಿ ಕದಿಯುತ್ತಾರೆ ಎಂದು ಸೂಚನೆ ನೀಡಿದೆ.
ಇದನ್ನೂ ಓದಿ:ಪತಿ ಮೇಲೆ ಕ್ಯೂಟ್ ಕೋಪ.. ಐಶ್ವರ್ಯ ಹೆಸರು ಹೇಳಿ ಧನರಾಜ್ ಕೆನ್ನೆಗೆ ಹೊಡೆದ ಪತ್ನಿ..!
ಎಚ್ಚರಿಕೆ! ನೀವು ‘Jio internet speed #5G network connection.apk’ ಹೆಸರಿನ ಫೈಲ್ ಡೌನ್‌ಲೋಡ್ ಮಾಡಬೇಡಿ. ಈ ಅಪಾಯಕಾರಿ ಫೈಲ್ನಿಂದ ನಿಮ್ಮ ಫೋನ್ ಹ್ಯಾಕ್ ಆಗಲಿದೆ. ಅಧಿಕೃತ ಆಪ್ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಸೈಬರ್ ದೋಸ್ತ್ ಎಚ್ಚರಿಕೆ ನೀಡಿದೆ.
ಜಿಯೋ ಹೆಸರು ದುರ್ಬಳಕೆ
ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿದೆ. ಇದು ಕೋಟಿ, ಕೋಟಿ ಬಳಕೆದಾರರನ್ನು ಹೊಂದಿದೆ. ವೇಗದ ಇಂಟರ್ನೆಟ್ ಸೇವೆ ಮತ್ತು ಉತ್ತಮ ಸಂಪರ್ಕದಿಂದ ದೇಶಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಮೋಸಗಾರರು ಇದರ ಲಾಭ ಪಡೆದು ಜನರನ್ನು ದಾರಿ ತಪ್ಪಿಸ್ತಿದ್ದಾರೆ.
ವಂಚನೆಯಿಂದ ತಪ್ಪಿಸೋದು ಹೇಗೆ?
- ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ
- ಅಧಿಕೃತ ವೆಬ್‌ಸೈಟ್, ಆಪ್ ಸ್ಟೋರ್‌ನಿಂದ ಮಾತ್ರ ಅಪ್ಲಿಕೇಶನ್ಸ್ ಡೌನ್‌ಲೋಡ್ ಮಾಡಿ
- ನೀವು ಅನುಮಾನಾಸ್ಪದ ಸಂದೇಶವನ್ನು ಸ್ವೀಕರಿಸಿದರೆ ನಿರ್ಲಕ್ಷಿಸಿ, ರಿಪೋರ್ಟ್ ಮಾಡಿ
- ನಿಮ್ಮ ಮೊಬೈಲ್ನಲ್ಲಿ ಬೆಸ್ಟ್ ಆಂಟಿವೈರಸ್ ಸಾಫ್ಟ್‌ವೇರ್ ಸ್ಥಾಪಿಸಿ
- ಫೈಲ್ ಡೌನ್‌ಲೋಡ್ ಮಾಡಲು ಸಂದೇಶ ಪಡೆದ್ರೆ ಅದರ ದೃಢೀಕರಣ ಪರಿಶೀಲಿಸಿ
ಇದನ್ನೂ ಓದಿ:BBK11: ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಪತಿ ಅಭಿಷೇಕ್.. ಗೌತಮಿಗೆ ಕೊಟ್ಟ ಸರ್ಪ್ರೈಸ್ ಗಿಫ್ಟ್ ಏನು?
सावधान! 🚨
"Jio internet speed #5G network connection.apk" जैसे फाइल को डाऊनलोड न करें। यह एक खतरनाक फाइल है जो आपके फोन को हैक कर सकती है और आपका डेटा चुरा सकती है। सुरक्षित रहने के लिए केवल आधिकारिक ऐप स्टोर से ही ऐप्स डाउनलोड करें।#APKFileScampic.twitter.com/9TjAOuvSLA— CyberDost I4C (@Cyberdost) December 29, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್