jio network issue: ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್‌.. ದೇಶಾದ್ಯಂತ ನೆಟ್‌ವರ್ಕ್‌ ಡೌನ್‌; ಏನಿದು ಸಮಸ್ಯೆ?

author-image
admin
Updated On
ಜಿಯೋ 8ನೇ ವಾರ್ಷಿಕೋತ್ಸವ; ಗ್ರಾಹಕರಿಗಾಗಿ 10GB ಡೇಟಾ ಮತ್ತು ಜೊಮ್ಯಾಟೊ ಗೋಲ್ಡ್​​ ಸದಸ್ಯತ್ವ ಉಚಿತ!
Advertisment
  • ದೇಶಾದ್ಯಂತ ಗ್ರಾಹಕರಿಗೆ ಕಾಣಿಸಿಕೋಡ ಜಿಯೋ ನೆಟ್‌ವರ್ಕ್‌ ಪ್ರಾಬ್ಲಂ!
  • ಕೇವಲ 1 ಗಂಟೆಯಲ್ಲಿ 10 ಸಾವಿರಕ್ಕೂ ಹೆಚ್ಚು ನೆಟ್‌ವರ್ಕ್ ಸಂಬಂಧಿತ ದೂರು
  • ನೋ ಸಿಗ್ನಲ್, ನೆಟ್‌ವರ್ಕ್ ಡೌನ್‌ ನೋಡಿ ಕಂಗಾಲಾದ ಜಿಯೋ ಗ್ರಾಹಕರು

ಮುಂಬೈ: ದೇಶಾದ್ಯಂತ ಜಿಯೋ ನೆಟ್‌ವರ್ಕ್‌ ಡೌನ್ ಆಗಿ ಗ್ರಾಹಕರು ಪರದಾಡುವಂತಾಗಿದೆ. ಬಹಳಷ್ಟು ಗ್ರಾಹಕರು ತಮಗೆ ಜಿಯೋ ನೆಟ್‌ವರ್ಕ್‌ ಸರಿಯಾಗಿ ವರ್ಕ್‌ ಆಗುತ್ತಿಲ್ಲ ಎಂದು ತಮ್ಮ ಸಮಸ್ಯೆಯನ್ನು ರಿಪೋರ್ಟ್ ಮಾಡುತ್ತಿದ್ದಾರೆ. ಜಿಯೋ ಡೌನ್ ಆಗಿರೋ ಸುದ್ದಿ ದೇಶಾದ್ಯಂತ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ರಿಲಯನ್ಸ್‌ ಜಿಯೋ ನೆಟ್‌ವರ್ಕ್ ಸದ್ಯ ಭಾರತದ ಟೆಲಿಕಾಂ ಸೇವೆಗಳಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಕೋಟ್ಯಾಂತರ ಮಂದಿ ಗ್ರಾಹಕರು ರಿಲಯನ್ಸ್ ಜಿಯೋ ಟೆಲಿಕಾಂ ಸೇವೆಯ ಮೇಲೆ ಅವಲಂಬಿತರಾಗಿದ್ದಾರೆ. ಇಂದು ದಿಢೀರನೇ ಜಿಯೋ ನೆಟ್‌ವರ್ಕ್ ಸೇವೆ ವ್ಯತ್ಯಯವಾಗಿರೋದು ಗ್ರಾಹಕರು ಅಕ್ಷರಶಃ ಕಂಗಾಲಾಗುವಂತೆ ಮಾಡಿದೆ.

ಇದನ್ನೂ ಓದಿ: Jio, Airtel ಸೋಲಿಸಲು ಹಠತೊಟ್ಟು ನಿಂತ BSNL; ದಿಢೀರ್ ಟಿವಿ ಜಗತ್ತಿಗೆ ಕಾಲಿಟ್ಟ ಟೆಲಿಕಾಂ ಕಂಪನಿ 

ಗ್ರಾಹಕರು ಕೇವಲ 1 ಗಂಟೆಯಲ್ಲಿ 10 ಸಾವಿರಕ್ಕೂ ಹೆಚ್ಚು ನೆಟ್‌ವರ್ಕ್ ಸಂಬಂಧಿತ ದೂರುಗಳನ್ನು ದಾಖಲಿಸಿದ್ದಾರೆ. ಶೇಕಡಾ 67ರಷ್ಟು ಬಳಕೆದಾರರಿಗೆ ನೋ ಸಿಗ್ನಲ್ ಅಂತ ಬರುತ್ತಿದೆ. ಶೇಕಡಾ 20 ರಷ್ಟು ಮೊಬೈಲ್‌ ಬಳಕೆದಾರರಿಗೆ ಇಂಟರ್ನೆಟ್‌ ಸೇವೆಯಲ್ಲಿ ಅಡಚಣೆಯಾಗಿದೆ. ಶೇಕಡಾ 14ರಷ್ಟು ಜಿಯೋ ಫೈಬರ್‌ ಗ್ರಾಹಕರಿಗೆ ನೆಟ್‌ವರ್ಕ್ ಪ್ರಾಬ್ಲಂ ಎದುರಾಗಿದೆ.

publive-image

ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಜಿಯೋ ಗ್ರಾಹಕರು ತಮ್ಮ ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ. ಜಿಯೋ ಮೊಬೈಲ್ ನೆಟ್‌ವರ್ಕ್‌ ಒಂದೇ ಅಲ್ಲ ಇಂಟರ್ನೆಟ್‌ ಸೇವೆಯಲ್ಲೂ ಬಹಳಷ್ಟು ಅಡಚಣೆಗಳು ಎದುರಾಗಿದೆ. ದೇಶಾದ್ಯಂತ ಕೆಲ ಕಾಲ ಜಿಯೋ ನೆಟ್‌ವರ್ಕ್‌ ಸಿಗ್ನಲ್‌ಗಳಲ್ಲಿ ಸಮಸ್ಯೆ ಎದುರಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇದು ಇನ್ನು ಕೆಲವು ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಜಿಯೋ ನೆಟ್‌ವರ್ಕ್‌ ಕೆಲವು ಗಂಟೆಗಳ ಕಾಲ ಸಮಸ್ಯೆಗೀಡಾಗಿತ್ತು. ಜಿಯೋ ಫೈಬರ್‌ ಸೇವೆಯಲ್ಲೂ ನೆಟ್‌ವರ್ಕ್ ಡೌನ್ ಆಗಿರುವ ವರದಿಯಾಗಿದೆ. ಇಷ್ಟೆಲ್ಲಾ ಸಮಸ್ಯೆಯಾದ್ರೂ ರಿಲಯನ್ಸ್‌ ಜಿಯೋ ನೆಟ್‌ವರ್ಕ್‌ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment