₹2025ಕ್ಕೆ ಜಿಯೋ ಆಫರ್‌.. ನ್ಯೂ ಇಯರ್ ವೆಲ್‌ಕಮ್ ಪ್ಲಾನ್ ಬಿಡುಗಡೆ; ಗ್ರಾಹಕರಿಗೆ ಏನು ಲಾಭ?

author-image
admin
Updated On
ಜಿಯೋ 8ನೇ ವಾರ್ಷಿಕೋತ್ಸವ; ಗ್ರಾಹಕರಿಗಾಗಿ 10GB ಡೇಟಾ ಮತ್ತು ಜೊಮ್ಯಾಟೊ ಗೋಲ್ಡ್​​ ಸದಸ್ಯತ್ವ ಉಚಿತ!
Advertisment
  • ಗ್ರಾಹಕರಿಗೆ ಹೊಸ ವರ್ಷಕ್ಕೆ ವಿಶೇಷ ಕೊಡುಗೆ ನೀಡಿದ ಜಿಯೋ
  • 2024ರ ಡಿಸೆಂಬರ್ 11ರಿಂದ 2025ರ ಜನವರಿ 11ರವರೆಗೆ ಲಭ್ಯ
  • 200 ದಿನಗಳ‌ ಅನಿಯಮಿತ 5ಜಿ ಡೇಟಾ, ವಾಯ್ಸ್, ಎಸ್‌ಎಂಎಸ್ ಸೇವೆ

ರಿಲಯನ್ಸ್ ಜಿಯೋ ಹೊಸ ವರ್ಷವನ್ನು ಸ್ವಾಗತಿಸಲು ತನ್ನ ಗ್ರಾಹಕರಿಗೆ 'ನ್ಯೂ ಇಯರ್ ವೆಲ್‌ಕಮ್ ಪ್ಲಾನ್ -2025' ಬಿಡುಗಡೆ ಮಾಡಿದೆ. ಈ ಯೋಜನೆಯ ಬೆಲೆ ₹2025 ನಿಗದಿ ಪಡಿಸಲಾಗಿದೆ. ದೀರ್ಘಾವಧಿಯ ಯೋಜನೆ ಇದಾಗಿದ್ದು, ಅನಿಯಮಿತ 5ಜಿ ಡೇಟಾ, ಉಚಿತ SMS ಮತ್ತು 200 ದಿನಗಳ‌ ಅನಿಯಮಿತ 5ಜಿ ಡೇಟಾ, ವಾಯ್ಸ್, ಎಸ್‌ಎಂಎಸ್ ಜೊತೆಗೆ ₹2,150ರ ಮೌಲ್ಯದ ಕೂಪನ್ ಸಹ ಸಿಗಲಿದೆ.

ಯಾರಿಗೆಲ್ಲಾ ಲಭ್ಯ?
ಹೊಸ ವರ್ಷದ ಈ ಪ್ಲಾನ್ ಜಿಯೋದ ಹಾಲಿ ಮತ್ತು ಹೊಸ ಗ್ರಾಹಕರಿಗೂ ಲಭ್ಯ. 2024ರ ಡಿಸೆಂಬರ್ 11ರಿಂದ 2025ರ ಜನವರಿ 11ರವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ‌. ಮೈ ಜಿಯೋ ಆ್ಯಪ್, ಜಿಯೋದ ಅಧಿಕೃತ ವೆಬ್‌ಸೈಟ್‌ ಅಥವಾ ಅಧಿಕೃತ ರಿಟೇಲರ್ ಮೂಲಕ ರೀಚಾರ್ಜ್ ಮಾಡಬಹುದು.

publive-image

ಯೋಜನೆ‌ಯ ವಿವರ ಹೀಗಿದೆ:
ಅನಿಯಮಿತ 5ಜಿ ಡೇಟಾ:
* 500 ಜಿಬಿಯಷ್ಟು 5 ಜಿ ಡೇಟಾ (ದಿನಕ್ಕೆ 2.5 ಜಿಬಿಯಷ್ಟು)
* ಅನಿಯಮಿತ ಕರೆ ಮತ್ತು ಎಸ್‌ಎಂಎಸ್ ಸೇವೆ
* ₹2,150ರ ಮೌಲ್ಯದ ಪಾರ್ಟ್ನರ್ ಕೂಪನ್
ಜಿಯೋದ ₹349ರ ಪ್ಲಾನ್‌ 200 ದಿನಗಳಿಗೆ ₹2,493ರಷ್ಟು ಆಗುತ್ತದೆ. ಇದಕ್ಕೆ ಹೋಲಿಸಿದರೆ ಈ ಹೊಸ ಪ್ಲಾನ್‌ನಲ್ಲಿ ₹468ರಷ್ಟು ಉಳಿತಾಯ ಆಗಲಿದೆ.

ಇದನ್ನೂ ಓದಿ: ಒಂದು ಲಕ್ಷ ರೂಪಾಯಿ ಕೊಡಿ, ಕಾರು ತೆಗೆದುಕೊಳ್ಳಿ.. 34 ಕಿಮೀ ಮೈಲೇಜ್​ ಕಾರಿನ EMI ಎಷ್ಟು? 

ಪಾರ್ಟನರ್ ಕೂಪನ್:
* ಅಜಿಯೋ ಖರೀದಿಗೆ ₹2500 ಅಥವಾ ಹೆಚ್ಚಿನ ಮೊತ್ತದ ಖರೀದಿಸಿದರೆ ₹500ರ ವಿನಾಯಿತಿ ಸಿಗಲಿದೆ, ಲಿಂಕ್ ಬಳಸಿ ರಿಡೀಮ್ ಮಾಡಬಹುದು.
* ಸ್ವಿಗ್ಗಿಯಲ್ಲಿ ₹499ರ ಮೇಲಿನ‌ ಖರೀದಿಗೆ ₹150 ವಿನಾಯಿತಿ.
* EaseMyTrip.com ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಫ್ಲೈಟ್ ಟಿಕೆಟ್ ಬುಕಿಂಗ್ ಮಾಡಿದರೆ ₹150 ವಿನಾಯಿತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment