ಸಖತ್ತಾಗಿದೆ ಈ ರೀಚಾರ್ಜ್​ ಪ್ಲಾನ್​! 168GB ಡೇಟಾ, ಅನಿಯಮಿತ ಕರೆ, OTT ಸೌಲಭ್ಯ ಉಚಿತ!

author-image
AS Harshith
Updated On
ಜಿಯೋ 8ನೇ ವಾರ್ಷಿಕೋತ್ಸವ; ಗ್ರಾಹಕರಿಗಾಗಿ 10GB ಡೇಟಾ ಮತ್ತು ಜೊಮ್ಯಾಟೊ ಗೋಲ್ಡ್​​ ಸದಸ್ಯತ್ವ ಉಚಿತ!
Advertisment
  • 3 ತಿಂಗಳ ಕಾಲ ಈ ಪ್ಲಾನ್​ನ ಪ್ರಯೋಜನ ಸಿಗುತ್ತೆ
  • ಸ್ಥಳೀಯ ಮತ್ತು STD ಕರೆ ಸೌಲಭ್ಯ ನೀಡುತ್ತೆ ಈ ಪ್ಲಾನ್
  • ಪ್ರತಿದಿನ 2GB ಡೇಟಾ.. ಒಟ್ಟು 168GB ಡೇಟಾ ಉಚಿತ

ಬಹುತೇಕರು ಅಧಿಕ ಡೇಟಾ ಜೊತೆಗೆ ಅನಿಯಮಿತ ಕರೆ ಸೌಲಭ್ಯವನ್ನು ಹೊಂದಿರುವ ರೀಚಾರ್ಜ್​ ಪ್ಲಾನ್​ ಹುಡುಕಾಡುತ್ತಿರುತ್ತಾರೆ. ಅದರಂತೆ ಟೆಲಿಕಾಂ ಕಂಪನಿಗಳು ಗ್ರಾಹಕರ ಮನದಾಸೆ ಮನಗಂಡು ಕೆಲವೊಂದು ಪ್ಲಾನ್​ಗಳನ್ನು ಪರಿಚಯಿಸುತ್ತಿರುತ್ತದೆ. ಆದರೆ ಸದ್ಯ ಖಾಸಗಿ ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್​ ಪ್ಲಾನ್​ಗಳ ಬೆಲೆ ಏರಿಸಿಕೊಂಡಿದೆ. ಅದರ ನಡುವೆ ಕೆಲವೊಂದು ಕೊಡುಗೆ ನೀಡುತ್ತಿವೆ.

ರಿಲಯನ್ಸ್​ ಜಿಯೋ 1049 ರೂಪಾಯಿಯ ಯೋಜನೆ ಇಂಟರ್​ನೆಟ್​ ಬಳಕೆಗೆ, ಓಟಿಟಿ ಬಳಕೆಗೆ ಹೇಳಿ ಮಾಡಿಸಿದಂತಿದೆ. ಇದು 84 ದಿನಗಳ ಸಿಂಧುತ್ವ ಹೊಂದಿದ್ದು, 3 ತಿಂಗಳ ಕಾಲ ಈ ಪ್ಲಾನ್​ನ ಪ್ರಯೋಜನ ಪಡೆಯಬಹುದಾಗಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ಪ್ರೇಮಿಗಳಿಗೆ ಭಾರೀ ಹಿನ್ನಡೆ; ಇಲ್ಲಿದೆ ಇಂದಿನ ಭವಿಷ್ಯ

ಗ್ರಾಹಕರಿಗಾಗಿ ಅನಿಯಮಿತ ಸ್ಥಳೀಯ ಮತ್ತು ಎಸ್​​ಟಿಡಿ ಕರೆ ಸೌಲಭ್ಯ ನೀಡುತ್ತಿದೆ. ಟಾಕ್​ ಟೈಮ್ ಮಾತ್ರವಲ್ಲದೆ ಬಳಕೆದಾರರನ್ನು ಸಂಪರ್ಕದಲ್ಲಿ ಸಕ್ರೀಯವಾಗಿಡಲು ಇದು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಐವರು ಸಾವು, 200ಕ್ಕೂ ಹೆಚ್ಚು ಜನ ಆಸ್ಪತ್ರೆಗೆ.. ಚೆನ್ನೈ ಏರ್​​ ಶೋದಲ್ಲಿ ಆಗಿದ್ದೇ ಬೇರೆ!

1049 ರೂಪಾಯಿ ರೀಚಾರ್ಜ್​ ಮಾಡಿದರೆ 168GB ಡೇಟಾ ಒದಗಿಸುತ್ತದೆ. ಅಂದರೆ ಪ್ರತಿದಿನ 2GB ಡೇಟಾ ಪಡೆಯಬಹುದಾಗಿದೆ. ಅಂದಹಾಗೆಯೇ ಇದು ಅನಿಯಮಿತ ಟ್ರೂ 5G ಡೇಟಾ ಯೋಜನೆಯ ಭಾಗವಾಗಿದ್ದು, ಗ್ರಾಹಕರು ಉಚಿತವಾಗಿ ಆನಂದಿಸಬಹುದಾಗಿದೆ.

ಇನ್ನು ಓಟಿಟಿ ಫ್ಲಾಟ್​ಫಾಮ್​ಗೆ ಉಚಿತ ಪ್ರವೇಶವನ್ನು ಈ ಪ್ಲಾನ್​ ಮೂಲಕ ಪಡೆಯಬಹುದಾಗಿದೆ. =ಸೋನಿ ಲೈವ್ ಮತ್ತು​ ಝೀ5ಗೆ ಪೂರಕ ಚಂದಾದಾರಿಕೆ ನೀಡುತ್ತಿದೆ. ಇದಲ್ಲದೆ ಜಿಯೋ ಸಿನಿಮಾ, ಜಿಯೋ ಕ್ಲೌಡ್​, ಜಿಯೋ ಟಿವಿ ಪ್ರವೇಶವನ್ನು ಒಳಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment