/newsfirstlive-kannada/media/post_attachments/wp-content/uploads/2024/08/Jio-1.jpg)
ರೀಚಾರ್ಜ್ ಮಾಡಿ, ಮಾಡಿ ಸಾಕಾಯ್ತು ಅಂತಾ ಬೇರೆ ಯಾವುದಾದರೂ ಹೊಸ ಪ್ಲಾನ್ ಹುಡುಕುತ್ತಿರೋರಿಗೆ ಒಳ್ಳೆಯ ಸುದ್ದಿ ಇದು. ಜಿಯೋ ಒಂದಷ್ಟು ಟ್ರೆಂಡಿಂಗ್ ಪ್ಲಾನ್ಸ್ ಹೊಂದಿದೆ. 1.5GB ಡೇಟಾ ಸಿಗುವ ಅನೇಕ ಪ್ಲಾನ್ಗಳನ್ನ ಆಫರ್ ಮಾಡಿದೆ. ಡೇಟಾ ಜೊತೆಗೆ, ಅನಿಯಮಿತ ಕರೆ ಮತ್ತು SMS ಪ್ರಯೋಜನ ಸಿಗಲಿದೆ.
ಜಿಯೋ 199 ಪ್ರಿಪೇಯ್ಡ್ ಪ್ಲಾನ್!
ಈ ಜಿಯೋ ಪ್ಲಾನ್ಗೆ ಕೇವಲ 199 ರೂಪಾಯಿ. ಇದು ಅತ್ಯಂತ ಜನಪ್ರಿಯ ಪ್ಲಾನ್. ಇದರ ವ್ಯಾಲಿಡಿಟಿ 18 ದಿನಗಳು. 199 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ನಿತ್ಯ 1.5GB ಡೇಟಾ ಸಿಗಲಿದೆ. ಒಟ್ಟು ನಿಮಗೆ 27GB ಡೇಟಾ ಸಿಗಲಿದೆ. ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಕಳುಹಿಸಬಹುದಾಗಿದೆ.
ಇದನ್ನೂ ಓದಿ: Elephants: ದಾರುಣ ಘಟನೆ.. ಭೀಕರ ರೈಲು ಡಿಕ್ಕಿಗೆ 6 ಆನೆಗಳು ಸ್ಥಳದಲ್ಲೇ ಸಾವು
239 ಪ್ರಿಪೇಯ್ಡ್ ಪ್ಲಾನ್..!
- ಜಿಯೋ 239 ಪ್ಲಾನ್ ಮಾನ್ಯತೆ 22 ದಿನ
- ದಿನಕ್ಕೆ 1.5GB ಡೇಟಾ ಬಳಸಬಹುದು
- 22 ದಿನದಲ್ಲಿ ಒಟ್ಟು 33GB ಡೇಟಾ ಲಭ್ಯ
- ಅನಿಯಮಿತ ಕರೆ, ದಿನಕ್ಕೆ 100 SMS ಕಳುಹಿಸಬಹುದು
299 ಪ್ರಿಪೇಯ್ಡ್ ಪ್ಲಾನ್
ನೀವು 299 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ದಿನಕ್ಕೆ 1.5GB ಡೇಟಾ ಸಿಗಲಿದೆ. 28 ದಿನಗಳವರೆಗೆ ಪ್ಲಾನ್ ಮಾನ್ಯತೆ ಹೊಂದಿದೆ. ಒಟ್ಟು 42GB ಡೇಟಾ ಲಭ್ಯವಿರುತ್ತದೆ. ಜಿಯೋ ಒಟಿಟಿ ಚಂದಾದಾರಿಕೆ ಸಹ ಒಳಗೊಂಡಿದೆ. ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಚಂದಾದಾರಿಕೆಯೂ ಸೇರಿದೆ.
ಜಿಯೋ 319 ಪ್ರಿಪೇಯ್ಡ್ ಯೋಜನೆ
- ಇದು ಕ್ಯಾಲೆಂಡರ್ ಮಂಥ್ಲಿ ಪ್ಲಾನ್
- ಒಂದು ತಿಂಗಳವರೆಗೆ ಸಂಪೂರ್ಣ ಮಾನ್ಯತೆ
- ಒಂದು ತಿಂಗಳಲ್ಲಿ 28 ದಿನ, 31 ದಿನವಿದ್ದರೂ ಸೇವೆ
- ಅನಿಯಮಿತ ಕರೆ ಜೊತೆಗೆ, ಉಚಿತ ಎಸ್ಎಂಎಸ್
- ಪ್ರತಿದಿನ 1.5GB ಡೇಟಾ ಸಿಗಲಿದೆ
ಇದನ್ನೂ ಓದಿ: ಕರ್ನಾಟಕದ ಈ ಜಲಾಶಯದ ನೀರಿನ ಮೇಲೆ ನೆರೆ ರಾಜ್ಯದ ಕಣ್ಣು.. ಎಷ್ಟು TMC ನೀರು ಕೇಳಿದೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ