1 ವರ್ಷದ ಅನಿಯಮಿತ ಕರೆ, 912GB ಡೇಟಾ, ಉಚಿತ OTT ಚಂದಾದಾರಿಕೆ.. jio ಬಳಕೆದಾರರಿಗೆ ಈ ಪ್ಲಾನ್​ ಬೆಸ್ಟ್​

author-image
AS Harshith
Updated On
ಜಿಯೋ ಬಳಕೆದಾರರೇ ಎಚ್ಚರ! ಈ ನಂಬರ್​​ನಿಂದ ಮಿಸ್ಡ್​ ಕಾಲ್ ಬಂದ್ರೆ ವಾಪಸ್ ಮಾಡಲೇಬೇಡಿ..!
Advertisment
  • ಜಿಯೋ ಪ್ರಿಯೇಪ್ಡ್​​ ಯೋಜನೆ ಪೈಕಿ ಇದೇ ಬೆಸ್ಟ್​
  • ಈ ಪ್ಲಾನ್​ ರಿಚಾರ್ಜ್​ ಮಾಡಿದ್ರೆ 365 ದಿನ ಟೆನ್ಶನ್​​ ಇರಲ್ಲ
  • ಪ್ರತಿ ದಿನ ಅನಿಯಮಿತ ಕರೆ ಜೊತೆಗೆ ದಿನಕ್ಕೆ 2.5GB ಉಚಿತ

ರಿಲಯನ್ಸ್​ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್​ಗಳಲ್ಲಿ ಒಂದು. 48 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಗ್ರಾಹಕರಿಗೆ ಅನುಗುಣವಾಗಿ ಅತ್ಯಾಕರ್ಷಕ ರೀಚಾರ್ಜ್​ ಪ್ಲಾನ್​ ಮತ್ತು ಕೊಡುಗೆಗಳನ್ನು ನೀಡುವ ಮೂಲಕ ಎಲ್ಲರ ಗಮನಸೆಳೆಯುತ್ತಿದೆ. ಆದರೀಗ ಬೆಲೆ ಏರಿಕೆ ಬಿಸಿಯಿಂದಾಗಿ ಜಿಯೋ ಬೆಸ್ಟ್​ ಪ್ಲಾನ್​​​ ಹುಡುಕಾಡುವುದು ಚಂದಾದಾರರಿಗೆ ಸಾಹಸವಾಗಿ ಬಿಟ್ಟಿದೆ. ಆದರೆ ಒಂದು ವರ್ಷ ಬೆನಿಫಿಟ್ಸ್​ ನೀಡುವ ಬೆಸ್ಟ್ ಪ್ಲಾನ್​ವೊಂದರ ಕುರಿತು ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಹೆಚ್ಚಿನವರು ಒಂದು ತಿಂಗಳ ಯೋಜನೆಯನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ತಿಂಗಳ ರೀಚಾರ್ಜ್​ ದೊಡ್ಡ ತಲೆನೋವು ಎಂಬ ಕಾರಣಕ್ಕೆ ಒಂದು ವರ್ಷದ ರೀಚಾರ್ಜ್​ ಮೊರೆ ಹೋಗುತ್ತಾರೆ. ಅದರಂತೆಯೇ ವಾರ್ಷಿಕ ರೀಚಾರ್ಜ್​ ಮೂಲಕ 365 ದಿನಗಳ ಅನಿಯಮಿತ ಉಚಿತ ಕರೆ, ಟಾಕ್​ ಟೈಂ ಆಯ್ಕೆಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ರಿಯಾಯಿತಿ ಬೆಲೆಗೆ ಗೂಗಲ್​ ಪಿಕ್ಸೆಲ್​​ 8a ಸ್ಮಾರ್ಟ್​ಫೋನ್.. 13 ಸಾವಿರ ರೂಪಾಯಿ ಉಳಿಸಿ

publive-image

ರಿಲಯನ್ಸ್​ ಜಿಯೋ ಬಳಕೆದಾರರಿಗೆ 3999 ರೂಪಾಯಿಯ ಪ್ರಿಪೇಯ್ಡ್​ ರೀಚಾರ್ಜ್​ ಪ್ಲಾನ್​ ಮೂಲಕ ಹಲವು ಕೊಡುಗೆಗಳನ್ನು ಪಡೆಯಬಹುದಾಗಿದೆ. ಇದು 365 ದಿನಗಳ ವ್ಯಾಲಿಡಿಟಿ ಹೊಂದಿದೆ. ಭಾರತದ ಎಲ್ಲಾ ನೆಟ್​​ವರ್ಕ್​ಗೆ ಅನಿಯಮಿತ ಕರೆ ಒದಗಿಸುತ್ತದೆ. ಕರೆ ಜೊತೆಗೆ ಪ್ರತಿದಿನ 100 ಉಚಿತ ಎಸ್​ಎಮ್​ಎಸ್​ ಮತ್ತು ಡೇಟಾ ನೀಡುತ್ತದೆ. ಅಂದರೆ ವರ್ಷಕ್ಕೆ 6500 ಎಸ್​ಎಮ್​ಎಸ್​ ಉಚಿತವಾಗಿ ನೀಡುತ್ತದೆ.

ಇದನ್ನೂ ಓದಿ: ವಯನಾಡು ದುರಂತ ಸ್ಥಳದಲ್ಲಿ ಓಡಾಡಿದ್ದ ನಟನಿಗೆ ಆಗಿದ್ದೇನು? ಈಗ ಹೇಗಿದೆ ಮೋಹನ್‌ ಲಾಲ್​ ಆರೋಗ್ಯ ಸ್ಥಿತಿ!

ಅಂದಹಾಗೆಯೇ 3999 ರೂಪಾಯಿ ರೀಚಾರ್ಜ್​ ಪ್ಲಾನ್​​ ಒಂದು ವರ್ಷಕ್ಕೆ ಅನುಗುಣವಾಗಿ 912.5ಜಿಬಿ ಹೈ-ಸ್ಪೀಡ್​​ ಡೇಟಾ ನೀಡುತ್ತದೆ. ಅಂದರೆ ದಿನಕ್ಕೆ ಜಿಯೋ ಬಳಕೆದಾರರು 2.5ಜಿಬಿ ಡೇಟಾ ಪಡೆಯಬಹುದಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ ಬಳಿಕ ಈಗ ಮತ್ತೊಂದು ಕೇಸ್: ದರ್ಶನ್​ ಬೆಂಬಿಡದ ಸಂಕಷ್ಟಗಳು

ಇದಲ್ಲದೆ, ಹಲವು ಮೌಲ್ಯವರ್ಧಿಕ ಸೇವೆಯನ್ನು ಈ ಪ್ಲಾನ್​ ಹೊಂದಿದೆ. ಉಚಿತ ಫ್ಯಾನ್​​ ಕೋಡ್​ ಚಂದಾದಾರಿಕೆ, ಒಟಿಟಿ ಸ್ಟ್ರೀಮಿಂಗ್​​ಗಾಗಿ ಜಿಯೋ ಸಿನಿಮಾ ನೋಡಬಹುದಾಗಿದೆ. ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್​​ ಉಚಿತ ಚಂದಾದಾರಿಕೆ ಪಡೆಯಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment