/newsfirstlive-kannada/media/post_attachments/wp-content/uploads/2024/04/RCB-26.jpg)
ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋ ಸಿನಿಮಾ (JioCinema) ಕ್ರಿಕೆಟ್ ಪ್ರಿಯರಿಗೆ ಬಿಗ್ ಶಾಕ್ ನೀಡಲು ಸದ್ದಿಲ್ಲದೇ ತಯಾರಿ ನಡೆಸುತ್ತಿದೆ. ಬಳಕೆದಾರರ ಹೊಸ ಚಂದಾದಾರಿಕೆಗಾಗಿ (New subscription) ಪ್ಲಾನ್ ಮಾಡ್ತಿದ್ದು, ಅಂತೆಯೇ ಐಪಿಎಲ್​ ಪಂದ್ಯಗಳ ವೀಕ್ಷಣೆಗೆ ಶುಲ್ಕ ವಿಧಿಸುತ್ತಿದೆ ಎನ್ನಲಾಗಿದೆ. ಆದರೆ, ಇದು ಎಷ್ಟು ಸತ್ಯ ಎಂಬುವುದರ ಬಗ್ಗೆ ಜಿಯೋ ಕಂಪನಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ಇದನ್ನೂ ಓದಿ:ನೇಹಾ ಹಿರೇಮಠ ಕೇಸ್ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸ್ತೇವೆ -ಸುರ್ಜೇವಾಲಾ ಭರವಸೆ
JioCinema Xನಲ್ಲಿ ಕಿರು ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೋಗಳ ನಡುವೆ ಬರುವ ಜಾಹೀರಾತುಗಳಿಂದ ವೀಕ್ಷಕರು ತೊಂದರೆಗೊಳಗಾಗಿದ್ದಾರೆ. ಜಾಹೀರಾತುಗಳನ್ನು ನೋಡಿ, ನೋಡಿ ಸುಸ್ತಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದ್ದರಿಂದ ಕಂಪನಿಯು ಹೊಸ ಜಾಹೀರಾತು-ಮುಕ್ತ ಚಂದಾದಾರಿಕೆಯನ್ನು ಏಪ್ರಿಲ್ 25 ರಂದು ತರುತ್ತಿದೆ.
ಪ್ರಸ್ತುತ, ಜಿಯೋ ಸಿನಿಮಾದಲ್ಲಿ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು. ಮುಂಬರುವ ಪ್ಲಾನ್​​​ನಿಂದ ಐಪಿಎಲ್ ಪಂದ್ಯ ವೀಕ್ಷಣೆಗೆ ಶುಲ್ಕ ವಿಧಿಸುತ್ತದೆ ಎನ್ನಲಾಗಿದೆ. ಐಪಿಎಲ್ ಪಂದ್ಯಗಳ ನಡುವೆಯೂ ಸಾಕಷ್ಟು ಜಾಹೀರಾತುಗಳು ಬಂದು ಹೋಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಐಪಿಎಲ್ ನೋಡುವ ಕುತೂಹಲವನ್ನು ಹಾಳು ಮಾಡುತ್ತಿದೆ. ಒಂದು ವೇಳೆ ಉಚಿತ ವೀಕ್ಷಣೆ ಪ್ಲಾನ್ ಕ್ಯಾನ್ಸಲ್ ಮಾಡಿ, ಶುಲ್ಕವನ್ನು ವಿಧಿಸಿ ಜಾಹಿರಾತು ಮುಕ್ತ ಲೈವ್​ಸ್ಟ್ರೀಮ್ ನೀಡಲು ಜಿಯೋ ಮುಂದಾಗಿದೆ ಎನ್ನಲಾಗುತ್ತಿದೆ. ಸದ್ಯ ಜಿಯೋ ಸಿನಿಮಾ ಎರಡು ರೀತಿಯ ಪ್ಲಾನ್​ಗಳನ್ನು ನೀಡುತ್ತಿದೆ. ವಾರ್ಷಿಕ 999 ರೂ.ಗಳ ಯೋಜನೆ. ಇನ್ನೊಂದು ಮಾಸಿಕ 99 ರೂ ಪ್ಲಾನ್. ಈ ಪ್ಲಾನ್​ಗನ್ನು ತೆಗೆದುಕೊಂಡರೂ ಜಾಹೀರಾತುಗಳಿಂದ ಮುಕ್ತವಾಗಿಲ್ಲ.
Aisa plan, ki doosro ko apni 'nanny' yaad aa jaayegi.
A new plan. Coming April 25th.#JioCinemapic.twitter.com/ouAaQXPgD1— JioHotstar Reality (@HotstarReality) April 23, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us