/newsfirstlive-kannada/media/post_attachments/wp-content/uploads/2025/04/RCB-11.jpg)
ಕೊಲ್ಕತ್ತಾ, ಚೆನ್ನೈ ಚಕ್ರವ್ಯೂಹ ಯಶಸ್ವಿಯಾಗಿ ಭೇದಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಇದೀಗ ತವರಿನಲ್ಲಿ ಅಗ್ನಿಪರೀಕ್ಷೆಗೆ ಸಿದ್ಧವಾಗಿದೆ. ಚಿನ್ನಸ್ವಾಮಿಯಲ್ಲಿ 50-50 ಸಾಧನೆ ಮಾಡಿರುವ ಆರ್ಸಿಬಿ, ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವಿನ ಲೆಕ್ಕಾಚಾರದಲ್ಲಿದೆ.
ಇಬ್ಬರು ಸ್ಟಾರ್ಗಳ ಬ್ಯಾಟ್ ಮಾತಾಡಬೇಕಿದೆ..
ಸದ್ಯ ಆರ್ಸಿಬಿ ಒಳ್ಳೆ ಟ್ರ್ಯಾಕ್ನಲ್ಲಿದೆ. ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮತ್ತು ಬಿಗ್ ಹಿಟ್ಟರ್ ಲಿಯಾಮ್ ಲಿವಿಂಗ್ಸ್ಟೋನ್ ಬ್ಯಾಟ್ನಿಂದ ನಿರೀಕ್ಷಿತ ರನ್ ಬರ್ತಿಲ್ಲ. ಜಿತೇಶ್, ಲಿವಿಂಗ್ಸ್ಟೋನ್ ಇಬ್ಬರೂ ಇಂದು ಕ್ಲಿಕ್ ಆಗಿದ್ರೆ ಆರ್ಸಿಬಿ ಬ್ಯಾಟಿಂಗ್ಗೆ ಮತ್ತಷ್ಟು ಬಲ ಬರಲಿದೆ.
ಇದನ್ನೂ ಓದಿ: RCB vs GT: ಬೆಂಗಳೂರಲ್ಲೇ ಪಂದ್ಯ, ಹೆಚ್ಚು ಬಾರಿ ಗೆದ್ದ ತಂಡ ಯಾವುದು? ಕಂಪ್ಲೀಟ್ ಮಾಹಿತಿ..!
ಮೊದಲ ಪಂದ್ಯ ಕೋಲ್ಕತ್ತ ವಿರುದ್ಧ ಲಿವಿಂಗ್ಸ್ಟೋನ್ 5 ಬಾಲ್ನಲ್ಲಿ 15 ರನ್ ಬಾರಿಸಿ ನಾಟೌಟ್ ಆಗಿ ಉಳಿದರು. ಐದು ಬಾಲ್ನಲ್ಲಿ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿ ಬಾರಿಸಿದರು. ಚೆನ್ನೈ ವಿರುದ್ಧ 9 ಬಾಲ್ ಎದುರಿಸಿ ಒಂದು ಸಿಕ್ಸರ್ನೊಂದಿಗೆ 10 ರನ್ಗಳಿಸಿ ಔಟ್ ಆಗಿದ್ದಾರೆ. ಇನ್ನು ಜಿತೇಶ್ ಶರ್ಮಾ ಅವರಿಗೆ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಎರಡನೇ ಪಂದ್ಯದಲ್ಲಿ ಅವಕಾಶ ಸಿಕ್ಕರೂ ಕೈಚೆಲ್ಲಿದ್ದಾರೆ. 6 ಬಾಲ್ ಎದುರಿಸಿ 12 ರನ್ಗಳಿಸಿ ಔಟ್ ಆಗಿದ್ದಾರೆ. ಈ ಅವಧಿಯಲ್ಲಿ ಒಂದು ಸಿಕ್ಸರ್, ಒಂದು ಬೌಂಡರಿ ಬಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಇಬ್ಬರು ಬ್ಯಾಟ್ಸಮನ್ಗಳಿಂದ ದೊಡ್ಡ ಸ್ಕೋರ್ ನಿರೀಕ್ಷೆ ಮಾಡಲಾಗಿದೆ.
ಕೃನಾಲ್ ಪಾಂಡ್ಯ ಕೂಡ ಫೇಲ್..!
ಬೆಂಗಳೂರು ತಂಡ ಬ್ಯಾಟಿಂಗ್ನಲ್ಲೇನೋ ಬಲಿಷ್ಟವಾಗಿ ಕಾಣ್ತಿದೆ. ನಂಬರ್ 9 ಸ್ಲಾಟ್ವರೆಗೂ ಆರ್ಸಿಬಿಗೆ, ಬ್ಯಾಟಿಂಗ್ ಡೆಪ್ತ್ ಇದೆ. ಲೋವರ್ ಡೌನ್ನಲ್ಲಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಬ್ಯಾಟ್ನಿಂದ ಅಲ್ಪ ಸ್ವಲ್ಪ ಕಾಣಿಕೆ ನೀಡಬೇಕಿದೆ. ಇಬ್ಬರೂ ರನ್ ಕಾಣಿಕೆ ನೀಡಿದ್ರೆ ಎದುರಾಳಿಗಳ ವಿರುದ್ಧ 100 ಪರ್ಸೆಂಟ್ ಮೇಲುಗೈ ಸಾಧಿಸಬಹುದು.
ಇದನ್ನೂ ಓದಿ: GT ವಿರುದ್ಧ ಆರ್ಸಿಬಿಗೆ ಬಿಗ್ ಚಾಲೆಂಜ್.. ಈ 6 ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗೆಲುವು ನಮ್ಮದೇ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್