ಬೆಂಗಳೂರಿಗೆ ಸ್ಫೋಟಕ ಬ್ಯಾಟರ್​ ಎಂಟ್ರಿ; RCB ಸೇರಿದ ಬಗ್ಗೆ ಏನಂದ್ರು ಜಿತೇಶ್​​?

author-image
Ganesh Nachikethu
Updated On
ಬೆಂಗಳೂರಿಗೆ ಸ್ಫೋಟಕ ಬ್ಯಾಟರ್​ ಎಂಟ್ರಿ; RCB ಸೇರಿದ ಬಗ್ಗೆ ಏನಂದ್ರು ಜಿತೇಶ್​​?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್
  • ಆರ್​​ಸಿಬಿ ತಂಡ ಸೇರಿದ ಭಾರತದ ಸ್ಫೋಟಕ ಬ್ಯಾಟರ್​​..!
  • ಈ ಬಗ್ಗೆ ಸ್ಟಾರ್​ ವಿಕೆಟ್​ ಕೀಪರ್​ ಜಿತೇಶ್​ ಏನಂದ್ರು ಗೊತ್ತಾ?

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರಿಗೆ ಮಣೆ ಹಾಕಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಲಿಷ್ಠ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ.

ಮುಂದಿನ ಸೀಸನ್​ನಲ್ಲಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್​​ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಇದಕ್ಕೂ ಮುನ್ನ ಆರ್​​ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್‌ ದಯಾಳ್‌ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್​​ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ.

ಹರಾಜಿನಲ್ಲಿ ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾರನ್ನು ಬರೋಬ್ಬರಿ 11 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ದಿನೇಶ್ ಕಾರ್ತಿಕ್‌ ನಿವೃತ್ತಿ ಘೋಷಣೆ ಮಾಡಿದ ಬಳಿಕ ಆರ್​​ಸಿಬಿ ತಂಡದ ಫಿನಿಷರ್ ಸ್ಥಾನವನ್ನು ಜಿತೇಶ್ ಶರ್ಮಾ ನಿಭಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜಿತೇಶ್​ ಶರ್ಮಾ ಮಾತಾಡಿದ್ದಾರೆ.

ಏನಂದ್ರು ಜಿತೇಶ್​ ಶರ್ಮಾ?

ಆರ್​ಸಿಬಿ ನನ್ನನ್ನು ಖರೀದಿ ಮಾಡಿದಕ್ಕೆ ದೇವರಿಗೆ ಧನ್ಯವಾದ ಹೇಳುತ್ತೇನೆ. ಹರಾಜಿನ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳು ಇರಲಿಲ್ಲ. ಉತ್ತಮ ತಂಡ ಸೇರುತ್ತೇನೆ ಅನ್ನೋ ವಿಶ್ವಾಸವಿತ್ತು. ಆರ್‌ಸಿಬಿ ನನ್ನನ್ನು ಖರೀದಿ ಮಾಡಿದ್ದು ಖುಷಿ ಹೆಚ್ಚಿಸಿದೆ ಎಂದರು.

ನನಗೆ ಯಾವುದೇ ನಿರೀಕ್ಷೆಗಳು ಇಲ್ಲ. ಆರ್​​ಸಿಬಿ ತಂಡಕ್ಕಾಗಿ ಮುಕ್ತವಾಗಿ ಬ್ಯಾಟ್​ ಬೀಸುವ ಮತ್ತು ನನ್ನ ಸಾಮರ್ಥ್ಯ ಪ್ರೂವ್​ ಮಾಡೋ ಆಸೆ ಇದೆ. ನನ್ನನ್ನು ಖರೀದಿ ಮಾಡಿದ ಆರ್​​ಸಿಬಿಗೆ ಕೃತಜ್ಞ. ವಿರಾಟ್ ಕೊಹ್ಲಿ ಜೊತೆ ಆಡಲು ನಾನು ಕಾಯುತ್ತಿದ್ದೇನೆ. ಅವರಿಂದ ಕಲಿಯುವುದು ಬಹಳಷ್ಟಿದೆ ಎಂದರು.

ಆರ್‌ಸಿಬಿ ತಂಡದ ಹೊಸ ಫಿನಿಶರ್

ಜಿತೇಶ್ ಶರ್ಮಾ ಆರ್​ಸಿಬಿ ತಂಡದ ಹೊಸ ಫಿನಿಶರ್. ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ನಿವೃತ್ತಿಯಾದ ಬಳಿಕ ಇವರ ಸ್ಥಾನ ತುಂಬಲಿದ್ದಾರೆ. ಜಿತೇಶ್ ಶರ್ಮಾ ಪಂಜಾಬ್ ಕಿಂಗ್ಸ್ ತಂಡದ ಉಪನಾಯಕನಾಗಿ ಜವಾಬ್ದಾರಿ ನಿಭಾಯಿಸಿದ್ರು. ಜಿತೇಶ್ ಶರ್ಮಾ ಅವರನ್ನು ವಾಪಸ್​ ತರಲು ಪಂಜಾಬ್​​​ ಆರ್​​ಟಿಎಂ ಕಾರ್ಡ್​ ಬಳಸಿದ್ರೂ ಆರ್​​ಸಿಬಿ 11 ಕೋಟಿ ನೀಡಿ ಖರೀದಿ ಮಾಡಿದೆ.

ಇದನ್ನೂ ಓದಿ: ಕೊಹ್ಲಿ ಆಪ್ತನಿಗೆ RCB ತಂಡದ ನಾಯಕತ್ವ; ಸ್ಫೋಟಕ ಸುಳಿವು ಕೊಟ್ಟ ಮುಖ್ಯ ಕೋಚ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment