ಜಿತೇಶ್ ಶರ್ಮಾಗೆ RCB ಜಾಕ್​ಪಾಟ್; ಸಂಬಳದಲ್ಲಿ ಶೇಕಡಾ 5,400ರಷ್ಟು ಹೆಚ್ಚಳ..!

author-image
Ganesh
Updated On
ಆರ್​​ಸಿಬಿಯಿಂದ ಕೊಹ್ಲಿ ಆಪ್ತನಿಗೆ ಮಣೆ; ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ ಬೆಂಗಳೂರು
Advertisment
  • ಜಿತೇಶ್ ಶರ್ಮಾರನ್ನು ಆರ್​ಸಿಬಿ ಎಷ್ಟು ಕೋಟಿಗೆ ಖರೀದಿಸಿದೆ?
  • ಕಳೆದ ಬಾರಿ ಪಂಜಾಬ್​​ನಲ್ಲಿ 20 ಲಕ್ಷ ಪಡೆಯುತ್ತಿದ್ದ ಶರ್ಮಾ
  • ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಸೂಕ್ತ ಆಟಗಾರ ಜಿತೇಶ್ ಶರ್ಮಾ

ದಿನೇಶ್ ಕಾರ್ತಿಕ್ ನಿವೃತ್ತಿ ಹಿನ್ನೆಲೆಯಲ್ಲಿ ಆರ್​ಸಿಬಿ ತಂಡಕ್ಕೆ ಅವರ ಸ್ಥಾನ ತುಂಬೋರು ಯಾರು ಎಂಬ ಪ್ರಶ್ನೆ ಇತ್ತು. ಇದೀಗ ಹರಾಜಿನಲ್ಲಿ ಅದಕ್ಕೆ ಉತ್ತರ ಸಿಕ್ಕಿದೆ. ಫಿಲಿಪ್ ಸಾಲ್ಟ್ ಹಾಗೂ ಜಿತೇಶ್ ಶರ್ಮಾ ಅವರನ್ನು ಆರ್​ಸಿಬಿ ಖರೀದಿಸಿದೆ. ಇಬ್ಬರು ಕೂಡ ಅದ್ಭುತ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿದ್ದಾರೆ. ಇವರಿಬ್ಬರೂ ಪ್ಲೇಯಿಂಗ್​-11ನಲ್ಲಿ ಅವಕಾಶ ಪಡೆಯೋದು ಪಕ್ಕಾ ಆಗಿದೆ.

ವಿಶೇಷ ಅಂದರೆ ಆರ್​ಸಿಜಿ ಜಿತೇಶ್​ ಶರ್ಮಾ ಅವರನ್ನು 11 ಕೋಟಿ ನೀಡಿ ಖರೀದಿ ಮಾಡಿದೆ. ಜಿತೇಶ್ ಶರ್ಮಾ ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಅಲ್ಲಿ ಅವರ ಬೆಲೆ 20 ಲಕ್ಷ ರೂಪಾಯಿ ಆಗಿತ್ತು. ಈ ಬಾರಿಯ ಆಕ್ಷನ್​ನಲ್ಲಿ 1 ಕೋಟಿ ರೂಪಾಯಿ ಬೇಸ್​ಪ್ರೈಸ್ ಹೊಂದಿದ್ದರು.

ಇದನ್ನೂ ಓದಿ:ಕಾರ್ತಿಕ್​​ ಸ್ಥಾನಕ್ಕೆ ಇಬ್ಬರನ್ನು ಖರೀದಿಸಿದ ಆರ್​ಸಿಬಿ; ಕೊಹ್ಲಿಗೆ ಇವರಿಬ್ಬರೂ ಉತ್ತಮ ಸಾಥಿ..!

ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಜಿತೇಶ್ ಶರ್ಮಾ ಅವರಿಗಾಗಿ ಬಿಡ್ ಮಾಡಿದ್ದರು. RTM ಕಾರ್ಡ್ ಅಪ್ಲೇ ಮಾಡಿದ್ದ ಪಂಜಾಬ್ ಕಿಂಗ್ಸ್ 7 ಕೋಟಿ ರೂಪಾಯಿವರೆಗೆ ಬಿಡ್ ಮಾಡಿತ್ತು. ಕೊನೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಕೋಟಿ ರೂಪಾಯಿಗೆ ಹೆಚ್ಚಿಸಿತ್ತು. ಆಮೂಲಕ ಕಳೆದ ಸೀಸನ್​ಗೆ ಹೋಲಿಸಿದರೆ ಜಿತೇಶ್ ಅವರ ಸಂಭಾವನೆ ಶೇ.5400ರಷ್ಟು ಹೆಚ್ಚಾಗಿದೆ. ಜಿತೇಶ್ ಶರ್ಮಾ ತಮ್ಮ 40 ಪಂದ್ಯಗಳ ಐಪಿಎಲ್ ವೃತ್ತಿಜೀವನದಲ್ಲಿ 730 ರನ್ ಗಳಿಸಿದ್ದಾರೆ.

ಇದನ್ನೂ ಓದಿ:ಐಪಿಎಲ್​ ಮೆಗಾ ಹರಾಜು; ಬರೋಬ್ಬರಿ 18 ಕೋಟಿಗೆ ಪಂಜಾಬ್​ ಪಾಲಾದ ಅರ್ಷದೀಪ್ ಸಿಂಗ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment