/newsfirstlive-kannada/media/post_attachments/wp-content/uploads/2025/05/JITESH-SHARMA.jpg)
ಐಪಿಎಲ್​ನಲ್ಲಿ ಆರ್​​ಸಿಬಿ ಪರ ಟ್ರೋಫಿ ಗೆದ್ದ ವಿಕೆಟ್​ ಕೀಪರ್​ ಜಿತೇಶ್​ ಶರ್ಮಾ (Jitesh Sharma) ಮತ್ತೊಂದು ಟಿ20 ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ.
ವಿದರ್ಭ ಪ್ರೋ ಟಿ20 ಲೀಗ್​​ನಲ್ಲಿ ಜಿತೇಶ್​ ಶರ್ಮಾ ನೇತೃತ್ವದ ಮಾಸ್ಟರ್​ ಬ್ಲಾಸ್ಟರ್ (NECO Master Blaster)​ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಪಗಾರಿಯಾ ಸ್ಟ್ರೈಕರ್ಸ್ (Pagariya Strikers)​ ವಿರುದ್ಧದ ಫೈನಲ್​ ಪಂದ್ಯವನ್ನ ಮಾಸ್ಟರ್​​ ಬ್ಲಾಸ್ಟರ್ಸ್​ ತಂಡ 7 ವಿಕೆಟ್​​ಗಳಿಂದ ಜಯಿಸಿತು. ವಿನ್ನಿಂಗ್​​ ಸಿಕ್ಸರ್​ ಬಾರಿಸಿ ಜಿತೇಶ್​ ಶರ್ಮಾ ತಂಡವನ್ನ ಗೆಲುವಿನ ದಡ ಸೇರಿಸಿತು.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಇದೆ ಈತನ ಭಯ.. ತವರಲ್ಲಿ 21 ಶತಕ, 32 ಅರ್ಧಶತಕ ಸಿಡಿಸಿರುವ ಬ್ಯಾಟರ್​!
ಪಗಾರಿಯಾ ಸ್ಟ್ರೈಕರ್ಸ್​​ 179 ರನ್​ಗಳ ಟಾರ್ಗೆಟ್ ನೀಡಿತ್ತು. ಗುರಿಯನ್ನು ಬೆನ್ನು ಹತ್ತಿದ್ದ ಮಾಸ್ಟರ್ ಬ್ಲಾಸ್ಟರ್ಸ್​ ತಂಡವು ಅದ್ಭುತ ಸ್ಟಾರ್ಟ್​​ ಪಡೆಯಿತು. ವೇದಾಂತ್ ದಿಘಡೆ ಅವರು 52 ಬಾಲ್​ನಲ್ಲಿ 80 ರನ್​ಗಳಿಸಿದರು. ನಾಯಕ ಜಿತೇಶ್ ಶರ್ಮಾ, ಕೇವಲ 11 ಬಾಲ್​ನಲ್ಲಿ 30 ರನ್​ಗಳಿಸಿ ತಂಡವನ್ನು ಗೆಲ್ಲಿಸಿಕೊಟ್ಟರು. ಆ ಮೂಲಕ 17.5 ಓವರ್​​ನಲ್ಲೇ ಜಿತೇಶ್ ನಾಯಕತ್ವದ ತಂಡ ಟ್ರೋಫಿಗೆ ಮುತ್ತಿಟ್ಟಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ