/newsfirstlive-kannada/media/post_attachments/wp-content/uploads/2024/10/TERRORIST-ATTACK.jpg)
ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಲೇಹ್ ಹಾಗೂ ಲಡಾಖ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸುರಂಗ ಕಾಮಗಾರಿ ನಡೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿರುವ ಉಗ್ರರು ವೈದ್ಯರೊಬ್ಬರನ್ನು ಸೇರಿ ಒಟ್ಟು 6 ಜನರನ್ನು ಹತ್ಯೆ ಮಾಡಿದ್ದಾರೆ. ಗಂಡೆರ್ಬಾಲ್ ಜಿಲ್ಲೆಯ ಬಳಿ ರವಿವಾರ ಈ ಒಂದು ಭೀಕರ ಘಟನೆ ನಡೆದಿದೆ.
ಗಂಡೆರ್ಬಾಲ್ ಜಿಲ್ಲೆಯ ಬಳಿ ಸುರಂಗ ಮಾರ್ಗದ ಕಾಮಗಾರಿ ಮುಗಿಸಿಕೊಂಡು ಸಂಜೆ ವೇಳೆ ಕಾರ್ಮಿಕರು ತಮ್ಮ ಕ್ಯಾಂಪ್ಗೆ ಹಿಂದಿರುಗುತ್ತಿದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು ವೈದ್ಯರೊಬ್ಬರು ಸೇರಿ 6 ಕಾರ್ಮಿಕರು ಹತ್ಯೆಯಾಗಿದ್ದಾರೆ.
ಇದನ್ನೂ ಓದಿ:‘ಜಾಸ್ತಿ ಮಕ್ಕಳನ್ನು ಮಾಡಿಕೊಳ್ಳಿ‘; ಆಂಧ್ರಪ್ರದೇಶದ ಸಿಎಂ ಕೊಟ್ರು ಅಚ್ಚರಿಯ ಆಫರ್!
The dastardly terror attack on civilians in Gagangir, J&K, is a despicable act of cowardice. Those involved in this heinous act will not be spared and will face the harshest response from our security forces. At this moment of immense grief, I extend my sincerest condolences to…
— Amit Shah (@AmitShah) October 20, 2024
">October 20, 2024
ಸ್ಥಳೀಯರು ಹಾಗೂ ಬೇರೆಕಡೆಯಿಂದ ಬಂದಿದ್ದ ಕಾರ್ಮಿಕರೆಲ್ಲರೂ ಸೇರಿ ಸುರಂಗ ಮಾರ್ಗದ ಕಾಮಗಾರಿಯಲ್ಲಿ ನಿರತರಾಗಿದ್ದಾರೆ. ಸಂಜೆ ವೇಳೆ ಕೆಲಸ ಮುಗಿಸಿಕೊಂಡು ವಾಪಸ್ ಬರುವಾಗ ಈ ದುರಂತ ನಡೆದಿದೆ. ಪ್ರತ್ಯಕ್ಷದರ್ಶಿಗಳು ಹೇಳವು ಪ್ರಕಾರ, ಒಟ್ಟು ಇಬ್ಬರು ಉಗ್ರರು ಈ ಕೃತ್ಯ ನಡೆಸಿದ್ದಾರಂತೆ. ಸಂಜೆ ಕ್ಯಾಂಪ್ಗೆ ವಾಪಸ್ ಬರುವಾಗ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದರು. ಗುಂಡಿನ ದಾಳಿಗೆ ತುತ್ತಾದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ವೈದ್ಯರು ಸೇರಿ ಉಳಿದ ನಾಲ್ಕು ಕಾರ್ಮಿಕರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಇನ್ನೂ ಐದು ಜನರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಮಾಜಿ ವಿಜ್ಞಾನಿ ಹಾಗೂ ಪತ್ನಿಯನ್ನು ಸೆರೆಯಾಳಾಗಿ ಹಿಡಿದ ಕಳ್ಳರು! ಆಮೇಲಾಗಿದ್ದೇನು?
ಮೃತಪಟ್ಟವರನ್ನು ಡಾ. ಶಹನವಾಜ್, ಫಹೀಮ್ ನಾಜೀರ್, ಖಲೀಮ್, ಮೊಹಮ್ಮದ್ ಹನೀಫ್, ಶಶಿ ಅಬ್ರೋಲಾ, ಅನಿಲ್ ಶುಕ್ಲಾ ಹಾಗೂ ಗುರ್ಮೀತ್ ಸಿಂಗ್ ಎಂದು ಗುರುತಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಾದ ಈ ಘಟನೆಯ ಹಿಂದಿರುವವರ ಪತ್ತೆಗಾಗಿ ಭದ್ರತಾ ಪಡೆ ಜಾಲ ಬೀಸಿದೆ. ಈಗಾಗಲೇ ಶೋಧಕಾರ್ಯ ನಡೆದಿದ್ದು. ಹಂತಕರನ್ನು ಹೊಡೆದುರುಳಿಸುವ ಕಾರ್ಯಕ್ಕೆ ಸಿದ್ಧತೆ ನಡೆದಿದೆ.
ಇನ್ನು ಘಟನೆಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗಗನ್ಗಿರ್ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿ ಅತ್ಯಂತ ಹೇಡಿಗಳ ಕಾರ್ಯವಾಗಿದೆ. ಯಾರು ಕಾರ್ಯದಲ್ಲಿ ನಿರತರಾಗಿದ್ದಾರೋ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ, ನಮ್ಮ ಭದ್ರತಾ ಪಡೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ. ಈ ವೇಳೆ ನಾನು ಈ ಘಟನೆಯಲ್ಲಿ ಮೃತಪಟ್ಟಿರುವವರ ಕುಟುಂಬಗಳಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಗಾಯಗೊಂಡವರು ಕೂಡಲೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ