ಅತಿ ಜಿಮ್ ಮಾಡುವುದೇ ಅಭ್ಯಾಸ ಮಾಡಿಕೊಂಡಿದ್ದ ಜೋ
ಮೊದಲು ಬೌನ್ಸರ್, ನಂತರ ವಿಶ್ವದ ಬಾಡಿಬಿಲ್ಡರ್ ಆಗಿದ್ದರು
ಜೋ ಲಿಂಡ್ನರ್ ಸಾವಿನ ಬಗ್ಗೆ ಗರ್ಲ್ಫ್ರೆಂಡ್ ಹೇಳುವುದೇನು?
ಬರ್ಲಿನ್: ಜರ್ಮನಿಯ ಫೇಮಸ್ ಫಿಟ್ನೆಸ್ ಮಾಡೆಲ್ ಹಾಗೂ ಬಾಡಿಬಿಲ್ಡರ್ ಆಗಿದ್ದ ಜೋಸ್ಟೆಟಿಕ್ಸ್ ಎಂದೇ ಖ್ಯಾತಿ ಪಡೆದಿರುವ ಜೋ ಲಿಂಡ್ನರ್ ಕೇವಲ 30 ವರ್ಷಕ್ಕೆ ಸಾವನ್ನಪ್ಪಿದ್ದಾರೆ. ಸ್ಯಾಂಡಲ್ವುಡ್ನ ‘ಪೊಗರು’ ಸಿನಿಮಾದಲ್ಲಿ ಧ್ರುವ ಸರ್ಜಾ ಜತೆ ಕ್ಲೈಮ್ಯಾಕ್ಸ್ನ ಫೈಟಿಂಗ್ ಸೀನ್ನಲ್ಲಿ ಜೋ ಭರ್ಜರಿಯಾಗಿ ಕಾಣಿಸಿಕೊಡಿದ್ದರು.
ಜೋ ಲಿಂಡ್ನರ್ ತನ್ನ ಆಕರ್ಷಣೆಯ ದೇಹದಿಂದ ಇಡೀ ಫಿಟ್ನೆಸ್ ಮತ್ತು ಜಿಮ್ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದರು. ಇವರ ಸಾವು ಹಲವು ಅನುಮಾನಗಳಿಂದ ಕೂಡಿದ್ದು ಮಾಹಿತಿ ಪ್ರಕಾರ ಅತಿಯಾದ ಜಿಮ್ ಮಾಡಿರುವುದೇ ರಕ್ತನಾಳಗಳ ಸಮಸ್ಯೆಯಿಂದ ಹಠಾತ್ ಆಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ತನ್ನ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಜೋ ಲಿಂಡ್ನರ್ ಸ್ನೇಹಿತೆ ನಿಚಾ, ಜೋ ಪ್ರಾಮಾಣಿಕ ಹಾಗೂ ಉತ್ತಮ ವ್ಯಕ್ತಿಯಾಗಿದ್ದರು. ಹಾರ್ಡ್ ವರ್ಕರ್ ಮತ್ತು ನಂಬಿಕಸ್ಥರಾಗಿದ್ದರು. ಅವರು ನಿಧನರಾದರು ಅನ್ನೋದನ್ನ ಯಾರು ಊಹಿಸಿರಲಿಲ್ಲ. ಇದಕ್ಕೂ ಮೊದಲು ಜೋ ನನ್ನ ತೋಳಿನಲ್ಲಿದ್ದು, ಸ್ವತಃ ತಾನೇ ಮಾಡಿದ್ದ ಹಾರವನ್ನು ನನಗೆ ಹಾಕಿದ್ದರು. 3 ದಿನಗಳ ಹಿಂದೆ ನನ್ನ ಕುತ್ತಿಗೆ ತುಂಬಾ ನೋವು ಆಗುತ್ತಿದೆ ಎಂದಿದ್ದರು ಅಷ್ಟೇ. ಇದನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದದ್ದೆ ಇಂತಹ ದುರಂತಕ್ಕೆ ಕಾರಣ ಆಯಿತು ಎಂದು ನಿಚಾ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಜೋ ಲಿಂಡ್ನರ್ ಆಕರ್ಷಕವಾದ ಬಾಡಿಬಿಲ್ಡ್ ಮಾಡಿದ್ದರು. ಮೊದ ಮೊದಲು ಇವರು ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ವಿಶ್ವ ಬಾಡಿ ಬಿಲ್ಡಿಂಗ್ ಮೂಲಕ ಇಡೀ ವಿಶ್ವಕ್ಕೆ ಪರಿಚಿತರಾದರು. ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ಫಿಟ್ನೆಸ್ ಬಗ್ಗೆ ಟಿಪ್ಸ್, ಟ್ರಿಕ್ಸ್ ನಿತ್ಯ ಹೇಳಿಕೊಡುತ್ತಿದ್ದರು. ತಮ್ಮದೇ ಆ್ಯಪ್ ರೆಡಿ ಮಾಡಿ ಅದರ ಮೂಲಕ ಜಿಮ್, ಫಿಟ್ನೆಸ್ ಬಗ್ಗೆ ಹೇಳುತ್ತಿದ್ದಂತೆ ಇನ್ನು ಹೆಚ್ಚು ಖ್ಯಾತಿ ಗಳಿಸಿದರು ಎನ್ನಲಾಗಿದೆ.
ಇವರ ದೇಹದ ನರಗಳು ದೇಹದಿಂದ ಹೊರಗಿವೆಯೇ ಎಂಬಂತೆ ಭಾಸವಾಗುತ್ತಿದ್ದವು. ಹೆಚ್ಚು ಹೆಚ್ಚು ಜಿಮ್ ಮಾಡಿದ್ದರಿಂದ ಬಾಡಿ ಪಾರ್ಟ್ಸ್ ಮಸ್ತ್ ಲುಕ್ನಲ್ಲಿ ಕಾಣಿಸುತ್ತಿದ್ದವು. ಆದರೆ ಜೋ ಫಿಟ್ನೆಸ್ಗಾಗಿ ಹೆಚ್ಚಾಗಿ ಜಿಮ್ ಮಾಡಿರುವುದೇ ದೇಹದ ರಕ್ತನಾಳಗಳಲ್ಲಿ ಸಮಸ್ಯೆ ಉಂಟಾಗಿದೆ ಎಂದು ಕಾರಣ ಹೇಳಲಾಗುತ್ತಿದೆ. ಸದ್ಯ ಇವರ ಸಾವಿನಿಂದ ಆಪ್ತರು ತೀರ ದುಃಖಿತರಾಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
View this post on Instagram