/newsfirstlive-kannada/media/post_attachments/wp-content/uploads/2025/01/Jobs_aspirant-1.jpg)
ಗೆಲುವು -ಸೋಲು ಎಲ್ಲವೂ ನಮ್ಮದೇ. ಕೆಲವರಿಗೆ ಮಾತ್ರ ಸರ್ಕಾರಿ ಉದ್ಯೋಗ ಸಿಗುತ್ತದೆ. ಸಾಕಷ್ಟು ಜನರಿಗೆ ಈ ಹುದ್ದೆ ಸಿಗಲ್ಲ. ಆಗಂತ ಇಲ್ಲಿಗೆ ಬದುಕು ಕೊನೆಯಲ್ಲ. ಅದಕ್ಕಿಂತ ಮಿಗಿಲಾದ ಜೀವನ ಮತ್ತೊಂದು ಇದೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳು ಆದ ನಾವು ಮಾಡೋ ಪ್ರಯತ್ನ ಮಾಡಬೇಕು. ಸಿಗುವ ಫಲ ಕೊಂಚ ಲೇಟ್ ಆಗಿ ಆದರೂ ಸಿಗಬಹುದು. ಅದು ಸರ್ಕಾರಿ ಹುದ್ದೆಗಿಂತ ಸ್ವೀಟ್ ಆಗಿರುತ್ತೆ. ಸದ್ಯ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಏನೇನು ಓದಬೇಕು ಎನ್ನುವುದ ಕುರಿತು ಸ್ವಲ್ಪ ಮಾಹಿತಿ ನಿಮಗಾಗಿ ಇಲ್ಲಿದೆ.
ಸ್ಪರ್ಧಾತ್ಮಕ ಪರೀಕ್ಷೆಯನ್ನ ಒಂದು ದಿನದಲ್ಲೋ, ವಾರನೋ ಅಥವಾ ತಿಂಗಳದಲ್ಲೋ ಓದಿ ಪಾಸ್ ಮಾಡುತ್ತೇನೆ ಎನ್ನುವುದು ಬರೀ ಮಾತು ಅಷ್ಟೇ. ಈ ಪರೀಕ್ಷೆ ಎಂದರೆ ಅಷ್ಟು ಸಾಮಾನ್ಯವಲ್ಲ. ಏಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇರುವಂತ ಕೋಚಿಂಗ್ ಸೆಂಟರ್ಗಳಲ್ಲಿ ಅಭ್ಯರ್ಥಿಗಳು ಕೋಚಿಂಗ್ ಪಡೆದುಕೊಂಡರು ಒಂದು ಪರೀಕ್ಷೆಯಲ್ಲಿ ಪಾಸ್ ಆಗುವುದು ಕೇವಲ 5, 8 ಅಭ್ಯರ್ಥಿಗಳು ಮಾತ್ರ.
ಈ ಪರೀಕ್ಷೆಗಾಗಿ ಅಭ್ಯರ್ಥಿಗಳು ಸಮಯ ಮೀಸಲು ಇಟ್ಟಿರಬೇಕು. 10ನೇ ತರಗತಿ, ಪಿಯುಸಿ, ಪದವಿ ಪರೀಕ್ಷೆಗಳಿಗೆ ಓದಿದಕ್ಕಿಂತ ನೂರು ಪಟ್ಟು ಶ್ರಮ ಹಾಕಬೇಕು. ಶಾಲಾ-ಕಾಲೇಜು ಪರೀಕ್ಷೆಗಳಲ್ಲಿ ನಿರ್ದಿಷ್ಟ ಪುಸ್ತಕಗಳಿಂದ ಪ್ರಶ್ನೆ ಬರುತ್ತವೆ ಎಂದು ಕನ್ಫರ್ಮ್ ಆಗಿ ಹೇಳಬಹುದು. ಆದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ನಿರ್ದಿಷ್ಟ ಪುಸ್ತಕದಿಂದ ಪ್ರಶ್ನೆ ಬರುತ್ತವೆ ಎಂದು ಊಹೆ ಮಾಡುವುದಕ್ಕೂ ಆಗುವುದಿಲ್ಲ.
ಇದೇ ಬುಕ್ನಿಂದ ಇದೇ ಪ್ರಶ್ನೆ ಬರುತ್ತದೆ ಹೇಳುವುದಕ್ಕೆ ಆಗಲ್ಲ. ಅರ್ಜಿ ಬಿಟ್ಟಾಗ ಸಿಲಬಸ್ ಕೊಟ್ಟಿರುತ್ತಾರೆ. ಆದರೂ ಪರೀಕ್ಷೆಯಲ್ಲಿ ಅದಕ್ಕಿಂತ ಮಿಗಿಲಾದ ಪ್ರಶ್ನೆಗಳು ಬಂದಿರುತ್ತವೆ. ಹೀಗಾಗಿ ಸರ್ಕಾರಿ ಉದ್ಯೋಗ ಬೇಕೆಬೇಕು ಎನ್ನುವ ಅಭ್ಯರ್ಥಿಗಳು ವರ್ಷಗಳವರೆಗೆ ನಿರಂತರ ಪ್ರಯತ್ನದಲ್ಲಿ ಇರಬೇಕು. ಪ್ರಚಲಿತ ವಿದ್ಯಾಮಾನಗಳ ಅರಿವಿರಬೇಕೆ ಹೊರತು, ಊರಲ್ಲಿ, ನಿಮ್ಮ ಸ್ನೇಹಿತರು, ಹಳ್ಳಿಯಲ್ಲಿ ನಡೆಯುವಂತ ಕೆಲ ಕೆಟ್ಟ ಸಂಗತಿಗಳ ತಲೆ ಕೆಡಿಸಿಕೊಳ್ಳಬಾರದು.
ಪರೀಕ್ಷಾರ್ಥಿಗಳು ಯಾವ್ಯಾವ ವಿಷಯಗಳನ್ನ ಓದಬೇಕು?
- ಪ್ರಾಥಮಿಕ, ಪ್ರೌಢ ಶಿಕ್ಷಣದ ಪುಸ್ತಕಗಳು- 5 ರಿಂದ 10ನೇ ತರಗತಿ
- ಮೊದಲ ಮತ್ತು ದ್ವಿತೀಯ ಪಿಯುಸಿ ಪುಸ್ತಕಗಳು
- ಭೂಗೋಳ ಶಾಸ್ತ್ರ (ವಿಶ್ವ, ಏಷ್ಯಾ, ದೇಶ, ರಾಜ್ಯ, ಜಿಲ್ಲೆಗಳ ಪ್ರಮುಖ ಮಾಹಿತಿ)
- ಇತಿಹಾಸ (ದಕ್ಷಿಣ ಭಾರತ, ಉತ್ತರ ಭಾರತ, ಕರ್ನಾಟಕದ ಸಾಮ್ರಾಜ್ಯಗಳು, ಭಾರತದ ಸಾಮ್ರಾಜ್ಯಗಳು, ಆರಂಭ ಮತ್ತು ಕೊನೆ)
- ಮೊಘಲ ರಾಜರ ಅಂತ್ಯ ಆರಂಭ, ಸಾಧನೆ, ಹೆಸರುಗಳು, ಅವರ ಕೆಲ ಯೋಜನೆ, ಯುದ್ಧಗಳು
- ಸಂವಿಧಾನ (ಭಾರತದ ಸಂವಿಧಾನ, ಆರ್ಟಿಕಲ್, ಹಕ್ಕುಗಳು, ನ್ಯಾಯಂಗ, ರಾಷ್ಟ್ರಪತಿ, ಪ್ರಧಾನಿ, ಸಿಎಂ ಇತ್ಯಾದಿ )
- ದಿನಪತ್ರಿಕೆಗಳು (ಓದುವುದರ ಜೊತೆ ಪಾಯಿಂಟ್ಸ್ ಮಾಡಿಕೊಳ್ಳಬೇಕು)
- ಕನ್ನಡ, ಇಂಗ್ಲಿಷ್ ವ್ಯಾಕರಣ (ಕೆಲವು ಪರೀಕ್ಷೆಗಳಲ್ಲಿ ಇದನ್ನು ಕೇಳುತ್ತಾರೆ)
- ಬೇಸಿಕ್ ಕಂಪ್ಯೂಟರ್ ಜ್ಞಾನ (ಇತ್ತೀಚಿನ ಪರೀಕ್ಷೆಗಳಲ್ಲಿ ಪ್ರಶ್ನೆಗಳಿರುತ್ತವೆ)
- ಭಾರತದ ಮ್ಯಾಪ್ ಬಗ್ಗೆ ಸಂಪೂರ್ಣ ಜ್ಞಾನ ಇರಬೇಕು
- ದಿಕ್ಕುಗಳು, ನಕ್ಷೆಗಳು, ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ಇರಲಿ
- ರೈಲ್ವೆ ಇಲಾಖೆಯ ಮಾಹಿತಿ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು
- ಸಂಖ್ಯಾಶಾಸ್ತ್ರದ ಬಗ್ಗೆ ತಿಳಿದಿರಬೇಕು
ಇದನ್ನೂ ಓದಿ: ಏಪ್ರಿಲ್ ಅಂತ್ಯದೊಳಗೆ 2975 KPTCL ಹುದ್ದೆಗಳ ನೇಮಕಾತಿ, ರಾಜ್ಯಾದ್ಯಂತ ಒಂದೇ ದಿನದಲ್ಲಿ ದೈಹಿಕ ಪರೀಕ್ಷೆ
ಓದುವುದಕ್ಕೆ ಸಮರ್ಪಕ ಟೈಮ್ ಟೇಬಲ್
- ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಕರೆದ ಮೇಲೆ ಇನ್ನೆಷ್ಟು ದಿನಗಳು ಬಾಕಿ ಎನ್ನುವುದರ ಆಧಾರದ ಮೇಲೆ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ.
- ಓದುವುದಕ್ಕೆ ಹೆಚ್ಚಿನ ಸಮಯ ಮೀಸಲಿಡಿ
- ನಿದ್ದೆ, ಊಟ, ಸೇರಿದಂತೆ ಇತ್ಯಾದಿ ನಿತ್ಯಕರ್ಮಗಳನ್ನ ಬೇಗ ಮುಗಿಸಬೇಕು
- ಯಾರೂ ಇಲ್ಲದ ಪ್ರದೇಶ, ನಿಶಬ್ಧವಾಗಿರುವ ಪ್ರದೇಶದ ಆಯ್ಕೆ ನಿಮ್ಮದಾಗಲಿ
- ಓದಿದ್ದನ್ನ ಪುನರ್ ಮನನ (ರಿವೀಸನ್) ಮಾಡಿಕೊಳ್ಳಲು ಪ್ರತ್ಯೇಕ ಸಮಯ ಇಡಿ
ಓದಿಕೊಳ್ಳಬೇಕು ಎಂದರೆ ಏನೇನು ಮಾಡಬಾರದು?
- ಕೀ ಪ್ಯಾಡ್ ಮೊಬೈಲ್ ಬಳಕೆ ಮಾಡಿದರೆ ಉತ್ತಮ
- ಮೊಬೈಲ್, ಟಿವಿ, ಕಂಪ್ಯೂಟರ್, ಟ್ಯಾಬ್ ಇತ್ಯಾದಿಗಳಿಂದ ದೂರ
- ಓದುವಾಗ ಸ್ನೇಹಿತರು ಕರೆದರೆ ಹೋಗುವುದು ಕಡಿಮೆ ಮಾಡಿ
- ಮನೆಯ ಕೆಲ ಕೆಲಸ ಬೇಗ ಮುಗಿಸಿ ಪುಸ್ತಕ ಹಿಡಿದುಕೊಳ್ಳಬೇಕು
- ಸಿನಿಮಾ, ಮನರಂಜನೆ, ಹಾಡು ಕೇಳುವುದು ಸ್ಟಾಪ್ ಮಾಡಿ
ಹೆಚ್ಚು ಹೆಚ್ಚು ಗ್ರಂಥಾಲಯಗಳಿಗೆ ಭೇಟಿ ನೀಡಿ, ನಿಮಗೆ ಬೇಕಾದ ನ್ಯೂಸ್ಪೇಪರ್ ಸೇರಿದಂತೆ ಪುಸ್ತಕಗಳ ಪರಿಚಯ ಆಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಕೆಲ ಮಾಸಿಕ ಪತ್ರಿಕೆಗಳು (ಸ್ಪರ್ಧಾ ಸ್ಪೂರ್ತಿ, ಸ್ಪರ್ಧಾ ಚೈತ್ರಾ, ಸ್ಪರ್ಧಾ ವಿಜೇತಾ, ಚಾಣಕ್ಯ, ಉದ್ಯೋಗ ವಾರ್ತೆ, ಪತ್ರಿಕೆಗಳಲ್ಲಿ ಬರುವ ಶಿಕ್ಷಣ ಸಂಪ್ಲಿಮೆಂಟರಿ) ನಿಮಗೆ ಅಲ್ಲಿ ದೊರೆಯುತ್ತವೆ. ಲೇಖಕರ ಪುಸ್ತಕಗಳ ಬಗ್ಗೆ ಅರಿವು ಬರುತ್ತದೆ. ಇಂಗ್ಲಿಷ್ ಪತ್ರಿಕೆಗಳನ್ನು ಓದುವುದರಿಂದ ಟ್ರಾನ್ಸಲೇಟ್ (ತರ್ಜುಮೆ) ಈಸಿ ಆಗುತ್ತದೆ. ಒಂದೇ ಸಂಸ್ಥೆಯ ಪತ್ರಿಕೆಗಳನ್ನು ಓದುವುದರಿಂದ ಟ್ರಾನ್ಸಲೇಟ್ ಸುಲಭವಾಗುತ್ತದೆ. ಉದಾ- ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್.
ಇದನ್ನೂ ಓದಿ:ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ನಡೆಸಬೇಕು.. ಉದ್ಯೋಗಾಕಾಂಕ್ಷಿಗಳು ಏನೇನು ಮಾಡಬೇಕು?
ನಿಮಗೆ ಓದುವುದಕ್ಕಾಗಿಯೇ ಪ್ರತ್ಯೇಕವಾದ ಕೋಣೆ (ರೂಮ್) ಇದ್ದರೆ ಅದರಲ್ಲಿ ಪರೀಕ್ಷೆಗೆ ಸಂಬಂಧಿಸಿದ ನಕ್ಷೆಗಳು, ಚಿತ್ರಗಳನ್ನ, ಫಾರ್ಮುಲಾಗಳನ್ನ ಅಂಟಿಸಿ. ನಿಮಗೆ ಯಾವುದು ಕಷ್ಟ ಅನಿಸುತ್ತದೆಯೋ ಅದನ್ನು ದೊಡ್ಡದಾಗಿ ಬರೆದು ಎದ್ದ ತಕ್ಷಣ ಅದನ್ನು ನೋಡಿ. ವಿಶ್ವ, ಭಾರತ, ಕರ್ನಾಟಕದ ಭೂಪಟಗಳನ್ನ ಅತ್ಯಂತ ಸೂಕ್ಷ್ಮವಾಗಿ ಗಮನಿಸಿ. ಮೊಘಲ ಸಾಮ್ರಾಜ್ಯದ ರಾಜರುಗಳ ಹೆಸರು ಕನ್ಫ್ಯೂಸ್ ಆದರೆ ಅವರ ಹೆಸರುಗಳನ್ನ ಮೊದಲಿನಿಂದ ಕೊನೆವರೆಗೂ ದೊಡ್ಡದಾಗಿ ಬರೆದು ಅಂಟಿಸಿ ನಿತ್ಯ ನೋಡಿ.
ರೂಮ್ನಲ್ಲಿ ನೀರು, ಬುಕ್ಸ್, ಎರಡು ಚೇರ್ ಇದ್ದರೇ ಸಾಕು. ಟಿವಿ, ರೇಡಿಯೋ, ಮೊಬೈಲ್ ದೂರವಿಡಿ. ಉಳಿದಂತೆ ನಿಮ್ಮ ಓದಿಗೆ ಸಂಬಂಧಿಸಿದ ವಸ್ತುಗಳೇ ಅಲ್ಲಿರಬೇಕು. ದಿಕ್ಕು ಹಾಗೂ ಸಮಯದ ಕೆಲ ಪಟ ಗೋಡೆ ಮೇಲೆ ಇರಲಿ. ಮನೆಯಲ್ಲಿ ಅವಕಾಶ ಇದ್ದರೂ ಈ ರೀತಿ ಮಾಡಿಕೊಳ್ಳಬಹುದು. ಕೋಣೆಯಲ್ಲಿ ಗಾಳಿ, ಬೆಳಕು ಬರುವಂತೆ ಇರಲಿ, ಹೆಚ್ಚಿನ ಪುಸ್ತಕಗಳು, ಪ್ರಶ್ನೆ ಪತ್ರಿಕೆಗಳ ಆಯ್ಕೆ ನಿಮ್ಮದಾಗಿರಲಿ.
ವಿಶೇಷ ವರದಿ;ಭೀಮಪ್ಪ, ಡಿಜಿಟಲ್ ಡೆಸ್ಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ