/newsfirstlive-kannada/media/post_attachments/wp-content/uploads/2024/12/JOB-1.jpg)
ಉತ್ತರ ಭಾರತದಲ್ಲಿರುವ ನೋಯ್ಡಾ ಮೂಲದ ಕಂಪನಿಯೊಂದು ದಕ್ಷಿಣ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಮೌನಿ ಕನ್ಸಲ್ಟಿಂಗ್ (Mounee Consulting Services) ಕಂಪನಿಯು ದಕ್ಷಿಣ ಭಾರತದ ಅಭ್ಯರ್ಥಿಗಳನ್ನು ಉದ್ಯೋಗಿಯನ್ನಾಗಿ ನೇಮಿಸಿಕೊಳ್ಳದಿರಲು ಮುಂದಾಗಿದೆ. ಬೆನ್ನಲ್ಲೇ ಸಂಸ್ಥೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದಕ್ಷಿಣದವರಿಗೆ ದೋಖಾ!
ಮೌನಿ ಕನ್ಸಲ್ಟಿಂಗ್ ‘ಡಾಟಾ ಅನಾಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ವಿಧಾನ, ಹುದ್ದೆಗಳ ನಿಯಮಗಳ ಬಗ್ಗೆ ವಿವರಿಸಿರುವ ನೋಟ್ನಲ್ಲಿ ದಕ್ಷಿಣ ಭಾರತದವರು ಅರ್ಹರಲ್ಲ ಎಂದು ಉಲ್ಲೇಖ ಮಾಡಿದೆ. ಹಿಂದಿ ಮಾತಾಡ್ಬೇಕು, ಬರೆಯಬೇಕೆಂದು ಕಂಪನಿ ತನ್ನ ಸೂಚನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಧನ್ಯವಾದಗಳು ಗೆಳೆಯ.. ಅಶ್ವಿನ್ ಜೊತೆಗಿನ 14 ವರ್ಷಗಳ ಜರ್ನಿ ನೆನೆದು ಕೊಹ್ಲಿ ಭಾವುಕ..!
ಹೀಗಾಗಿ ದಕ್ಷಿಣ ಭಾರತದ ಅಭ್ಯರ್ಥಿಗಳಿಗೆ ಕೆಲಸ ನೀಡಲ್ಲ ಎನ್ನಲಾಗಿದೆ. ಆದರೆ ದಕ್ಷಿಣ ಭಾರತೀಯರಿಗೂ ಹಿಂದಿ ಭಾಷೆ ಬರುತ್ತದೆ. ದಕ್ಷಿಣ ಭಾರತದ ಹಲವು ಕಂಪನಿಗಳಲ್ಲಿ ಉತ್ತರ ಭಾರತದವರಿದ್ದಾರೆ. ಹೈದರಾಬಾದ್, ಬೆಂಗಳೂರು, ಚೆನ್ನೈ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದಾರೆ. ಹೀಗಿದ್ದಾಗ ಉತ್ತರ ಭಾರತದ ಕಂಪನಿಗೆ ದಕ್ಷಿಣ ಭಾರತದವರು ಬೇಡ್ವಾ? ದಕ್ಷಿಣ ಭಾರತದಲ್ಲೂ ಇದೇ ಧೋರಣೆ ಅನುಸರಿಸಿದ್ರೆ ಕತೆ ಏನು? ಎಂಬ ಪ್ರಶ್ನೆ ಶುರುವಾಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.
ಇದನ್ನೂ ಓದಿ:ಟೀಂ ಇಂಡಿಯಾಗೆ ಇಂದು ಶಾಕ್ ಮೇಲೆ ಶಾಕ್; ಒಂದೇ ದಿನ ಮೂರು ಆಘಾತ..!
South Indians are not allowed to apply for a job! pic.twitter.com/hTYVKkGPbs
— idk who (@kannadayapper) December 13, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ