ಗ್ರಿನ್‌ಹ್ಯಾಮ್ ಸಾಧನೆಗೆ ಇಡೀ ವಿಶ್ವವೇ ಕೊಂಡಾಡುತ್ತಿದೆ
ಬಿಲ್ಲುಗಾರಿಕೆಯಲ್ಲಿ ಗ್ರಿನ್ಹ್ಯಾಮ್ಗೆ ಕಂಚಿನ ಪದಕ
ಗರ್ಭಿಣಿಯಾಗಿ ಪದಕ ಗೆದ್ದ ಮೊದಲ ಪ್ಯಾರಾ ಅಥ್ಲೀಟ್
ಪ್ಯಾರಿಸ್ ಪ್ಯಾರಾಲಿಂಪಿಕ್ಸ್-2024 ನಿರೀಕ್ಷೆಗಳಿಗೂ ಮೀರಿದ ಸಂಗತಿಗಳಿಗೆ ಸಾಕ್ಷಿ ಆಗ್ತಿದೆ. 7 ತಿಂಗಳ ತುಂಬು ಗರ್ಭಿಣಿ ಪ್ಯಾರಾ ಅಥ್ಲೀಟ್ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ!
ಗ್ರೇಟ್ ಬ್ರಿಟನ್‌ನ ಜೋಡೀ ಗ್ರಿನ್‌ಹ್ಯಾಮ್ (Jodie Grinham) ಈ ಸಾಧನೆ ಮಾಡಿದ್ದಾರೆ. ಗ್ರಿನ್‌ಹ್ಯಾಮ್ ಅವರು ಬಿಲ್ಲುಗಾರಿಕೆಯಲ್ಲಿ (Archery) ಪದಕ ಗೆದ್ದಿದ್ದಾರೆ. ಈ ಮೂಲಕ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೀಗ ಅವರ ಧೈರ್ಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ಅಂದ್ಹಾಗೆ ಗ್ರಿನ್‌ಹ್ಯಾಮ್ ಕಂಚಿನ ಪದಕ ಗೆದ್ದರು. ಆಗಸ್ಟ್ 31 ರಂದು ಗ್ರಿನ್‌ಹ್ಯಾಮ್ ಮಹಿಳಾ ಕಾಂಪೌಂಡ್‌ನಲ್ಲಿ ಗ್ರೇಟ್ ಬ್ರಿಟನ್‌ನ ಫೋಬೆ ಪ್ಯಾಟರ್ಸನ್ ಪೈನ್ ವಿರುದ್ಧ ಕಂಚಿನ ಪದಕ ಗೆದ್ದಿದ್ದಾರೆ. ಎದುರಾಳಿ ವಿರುದ್ಧ 142-141 ಅಂಕಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಗ್ರಿನ್‌ಹ್ಯಾಮ್ ಗರ್ಭಿಣಿಯಾಗಿದ್ದಾಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಪ್ಯಾರಾ ಅಥ್ಲೀಟ್. ಇವರು ಎಡಗೈಯಲ್ಲಿ ಅಂಗವೈಕಲ್ಯ ಹೊಂದಿದ್ದಾರೆ.
ಇದನ್ನೂ ಓದಿ:ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!
HISTORY MADE
Jodie Grinham is the first pregnant athlete to podium at the @Paralympics. 🥉🇬🇧#ParaArchery #ArcheryInParis pic.twitter.com/TmFL0FVYvL— World Archery (@worldarchery) September 1, 2024
ಪದಕ ಗೆದ್ದ ಸಂಭ್ರಮದಲ್ಲೇ ಮಾತನಾಡಿರುವ ಅವರು.. ಗರ್ಭದಲ್ಲಿ ಬೇಬಿ ಒದೆಯುವುದನ್ನು ನಿಲ್ಲಿಸಿಲ್ಲ, ಅದರ ಚಲನೆ ಜೋರಾಗಿತ್ತು. ಮಗು ಪ್ರತಿಬಾರಿ ಕಿಕ್ ಮಾಡಿದಾಗಲೂ ಅದು ನನಗೆ ನೀಡುತ್ತಿರುವ ಬೆಂಬಲ ಅಂದ್ಕೊಂಡೆ. ನಿಜವಾಗಿಯೂ ನನಗೆ ನನ್ನ ಬಗ್ಗೆ ಹೆಮ್ಮೆ ಇದೆ. ನಾನು ಕಷ್ಟಗಳನ್ನು ಹೊಂದಿದ್ದೇನೆ. ಒಲಿಂಪಿಕ್ಸ್ನಲ್ಲಿ ಗೆಲ್ಲೋದು ಸುಲಭ ಅಲ್ಲ. ಆರೋಗ್ಯವಾಗಿ, ಮಗುವಿನ ಆರೋಗ್ಯ ಎಲ್ಲವನ್ನೂ ನಾನು ಗಮನದಲ್ಲಿಟ್ಟುಕೊಂಡು ಸ್ಪರ್ಧೆ ಮಾಡಬೇಕಾಗಿತ್ತು ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್