BREAKING: ಅಮೆರಿಕ ಚುನಾವಣೆಗೆ ಅತಿ ದೊಡ್ಡ ಟ್ವಿಸ್ಟ್‌.. ರೇಸ್​ನಿಂದ ಹಿಂದೆ ಸರಿದ ಅಧ್ಯಕ್ಷ ಜೋ ಬೈಡನ್; ಯಾಕೆ?

author-image
Bheemappa
Updated On
BREAKING: ಅಮೆರಿಕ ಚುನಾವಣೆಗೆ ಅತಿ ದೊಡ್ಡ ಟ್ವಿಸ್ಟ್‌.. ರೇಸ್​ನಿಂದ ಹಿಂದೆ ಸರಿದ ಅಧ್ಯಕ್ಷ ಜೋ ಬೈಡನ್; ಯಾಕೆ?
Advertisment
  • ಬೈಡನ್ ಹಿಂದೆ ಸರಿಯುವಂತೆ ಒತ್ತಾಯಿಸಿದ್ದ ಮಾಜಿ ಅಧ್ಯಕ್ಷ ಒಬಾಮ
  • ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಯಾರು ನೇಮಕ ಆಗುತ್ತಾರೆ?
  • ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದ ಜೋ ಬೈಡೆನ್‌

ಅಮೆರಿಕದ ಅಧ್ಯಕ್ಷ ಸ್ಥಾನದ ರೇಸ್​ನಿಂದ ಹಾಲಿ ಪ್ರೆಸಿಡೆಂಟ್ ಆಗಿರುವ ಜೋ ಬೈಡನ್ ಅವರು ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.

ಹಾಲಿ ಅಧ್ಯಕ್ಷರಾಗಿರುವ ಜೋ ಬೈಡನ್ ಅವರಿಗೆ ಈಗಾಗಲೇ 81 ವರ್ಷಗಳು ಆಗಿವೆ. ಹೀಗಾಗಿ ಅನಾರೋಗ್ಯ, ವಯಸ್ಸಿನ ಕಾರಣದಿಂದ ಯುಎಸ್​ ಪ್ರೆಸಿಡೆಂಟ್​ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಬೈಡನ್‌ ಅವರು ಹಿಂದೆ ಸರಿದಿದ್ದು ನೂತನ ಅಧ್ಯಕ್ಷರನ್ನು ಸದ್ಯದಲ್ಲೇ ನೇಮಕ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ:ಗುಡ್​​ನ್ಯೂಸ್.. ಕೆಆರ್​​ಎಸ್​ ಡ್ಯಾಂ ತುಂಬಲು ಕೆಲವೇ ಅಡಿಗಳು ಮಾತ್ರ ಬಾಕಿ..

publive-image

ಡೆಮಾಕ್ರಟಿಕ್ ಪಕ್ಷದಿಂದ ಬೇರೊಬ್ಬರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕಾಗಿದೆ. ಇದರಿಂದ ಡೆಮಾಕ್ರಟಿಕ್​ನಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಯಾರು ಆಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಬೈಡನ್ ಅವರಿಗೆ ವಯಸ್ಸು ಆದ ಕಾರಣ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಅವರು ಹಿಂದೆ ಸರಿಯುವುದು ಉತ್ತಮ ಎಂದು ಹೇಳಿದ್ದಾರೆ. ಇನ್ನು ಈ ಬಾರಿಯ ಎಲೆಕ್ಷನ್​ನಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಡೋನಾಲ್ಡ್ ಟ್ರಂಪ್​ರನ್ನು ಸೋಲಿಸಲು ಡೆಮಾಕ್ರಟಿಕ್ ಪಕ್ಷದ ನಾಯಕರು ಪಣ ತೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment