Advertisment

ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗ್ತಾರಾ.. ಜೋ ಬೈಡನ್​ ಹೇಳಿದ್ದೇನು?

author-image
Bheemappa
Updated On
ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗ್ತಾರಾ.. ಜೋ ಬೈಡನ್​ ಹೇಳಿದ್ದೇನು?
Advertisment
  • ರಾಷ್ಟ್ರಕ್ಕಾಗಿ ಕಾರ್ಯನಿರ್ವಹಿಸಿದ್ದು ನನಗೆ ಸಂತಸ ನೀಡಿದೆ
  • ಡೋನಾಲ್ಡ್​ ಟ್ರಂಪ್ ಎದುರಾಳಿ ಹೆಸರು ಸೂಚಿಸಿದ ಬೈಡನ್
  • ವಿಶ್ವದ ಬಲಿಷ್ಠ ರಾಷ್ಟ್ರದ ಅಧ್ಯಕ್ಷರಾಗ್ತಾರಾ ಕಮಲಾ ಹ್ಯಾರಿಸ್?

ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಸದ್ಯ ಇದರ ಬೆನ್ನಲ್ಲೇ ರಿಪಬ್ಲಿಕನ್​​ ಪಕ್ಷದ ವಿರುದ್ಧ ಗೆಲುವು ಸಾಧಿಸಬೇಕಾದರೆ ಡೆಮಾಕ್ರಟಿಕ್‌ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಅವರು ಸ್ಪರ್ಧೆ ಮಾಡುವುದು ಸೂಕ್ತ ಎಂದು ಬೈಡನ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisment

ಇದನ್ನೂ ಓದಿ: ‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್​ ಅಂದ್ರೆ ಇವರಿಗೆ ಭಯ, ಕಾರಣ?

publive-image

ಯುಎಸ್​ನಲ್ಲಿ ಚುನಾವಣೆ ಕಾವು ಜೋರಾಗಿದ್ದು ಇದೇ ನವೆಂಬರ್​ನಲ್ಲಿ ಮತದಾನ ನಡೆಯಲಿದೆ. ಆದರೆ ಜೋ ಬೈಡನ್ ಅವರಿಗೆ 81 ವಯಸ್ಸು ಆಗಿದ್ದರಿಂದ ಹಾಗೂ ದೇಶ ಹಾಗೂ ಪಕ್ಷದ ಹಿತಕ್ಕಾಗಿ ಅವರು ಅಧ್ಯಕ್ಷ ಚುನಾವಣೆ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಅಧಿಕೃತ ಎಕ್ಸ್​​ನಲ್ಲಿ ಪೋಸ್ಟ್​ವೊಂದನ್ನ ಶೇರ್ ಮಾಡಿರುವ ಬೈಡನ್ ಅವರು, ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಹೆಸರನ್ನು ಸೂಚಿಸಿದ್ದಾರೆ. ಒಂದು ವೇಳೆ ಕಮಲಾ ಹ್ಯಾರಿಸ್ ಅವರು ಚುನಾವಣೆಯಲ್ಲಿ ಗೆದ್ದು ಅಮೆರಿಕದ ಅಧ್ಯಕ್ಷರಾದರೆ ಭಾರತ ಮೂಲದ ಮಹಿಳೆಯೊಬ್ಬರು ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರದ ಹುದ್ದೆಯನ್ನು ಸ್ವೀಕರಿಸಿದಂತೆ ಆಗುತ್ತದೆ.

ಇದನ್ನೂ ಓದಿ: IT ಕಂಪನಿಗಳ ಉದ್ಯೋಗಿಗಳಿಗೆ ಬಿಗ್​ ಶಾಕ್​.. ಇನ್ಮುಂದೆ 14 ಗಂಟೆ ಕೆಲಸ ಮಾಡೋದು ಫಿಕ್ಸ್​?

Advertisment


">July 21, 2024

ಅಮೆರಿಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಕ್ಕೆ ಸಂತಸವಿದೆ. ರಾಷ್ಟ್ರದ ಅತ್ಯುತ್ತಮ ಕಾರ್ಯವನ್ನು ನಿಭಾಹಿಸಿದ ಹೆಮ್ಮೆ ನನಗಿದೆ. ಈ ಸಲನು ಸ್ಪರ್ಧೆ ಮಾಡಬೇಕೆಂದು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಿಲ್ಲ. 2020 ರಲ್ಲಿ ರಾಷ್ಟ್ರದ ಅಧ್ಯಕ್ಷರಾಗಿ ಕರ್ತವ್ಯ ತೆಗೆದುಕೊಂಡ ಮೇಲೆ ಪಕ್ಷದ ಅಭ್ಯರ್ಥಿಯಾಗಿ ನನ್ನ ಮೊದಲ ನಿರ್ಧಾರ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು. ಇದು ನಾನು ಮಾಡಿದ ಅತ್ಯುತ್ತಮ ನಿರ್ಧಾರವಾಗಿತ್ತು. ಈ ವರ್ಷ ಕಮಲಾ ಹ್ಯಾರಿಸ್ ಪಕ್ಷದ ಅಭ್ಯರ್ಥಿಯಾಗಲು ನನ್ನ ಸಂಪೂರ್ಣ ಬೆಂಬಲವಿದೆ. ಹಾಗೂ ಅವರ ಹೆಸರನ್ನು ಅನುಮೋದನೆ ಮಾಡಲು ಬಯಸುತ್ತೇನೆ. ಎದುರಾಳಿ ರಿಪಬ್ಲಿಕನ್ ಪಕ್ಷದ ಡೋನಾಲ್ಡ್​ ಟ್ರಂಪ್​​ ಅವರನ್ನು ಮಣಿಸಲು ಇದು ಉತ್ತಮ ಸಮಯ. ಇದನ್ನು ನಾವೆಲ್ಲ ಮಾಡೋಣ ಎಂದು ಬೈಡೆನ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment