newsfirstkannada.com

ಬಿಡನ್ V/S ಟ್ರಂಪ್‌ ರೀ ಮ್ಯಾಚ್‌.. ಅಮೆರಿಕಾ ಅಧ್ಯಕ್ಷ ಚುನಾವಣೆಗೆ ಹೊಸ ಟ್ವಿಸ್ಟ್‌; ಏನದು?

Share :

Published March 13, 2024 at 2:48pm

Update March 13, 2024 at 2:49pm

    4 ವರ್ಷದ ಬಳಿಕ ಡೊನಾಲ್ಡ್ ಟ್ರಂಪ್‌ಗೆ ಮತ್ತೆ ಜೋ ಬೈಡನ್ ಚಾಲೆಂಜ್‌

    ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್‌ ಟ್ರಂಪ್‌ ಅವರ ನಾಮನಿರ್ದೇಶನ

    ಡೆಮಾಕ್ರಟಿಕ್ ಪಕ್ಷದಿಂದ ಮತ್ತೊಮ್ಮೆ ಜೋ ಬೈಡನ್ ಅವರೇ ಅಖಾಡಕ್ಕೆ

ವಾಷಿಂಗ್ಟನ್: 2024ರ ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಮತ್ತೊಮ್ಮೆ ಜೋ ಬಿಡನ್ ಹಾಗೂ ಡೊನಾಲ್ಡ್‌ ಟ್ರಂಪ್ ಅವರೇ ಮುಖಾಮುಖಿ ಆಗೋ ಸಾಧ್ಯತೆ ಹೆಚ್ಚಾಗಿದೆ. ಇದುವರೆಗೂ ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್‌ ಟ್ರಂಪ್‌ ಅವರ ಆಯ್ಕೆ ಸ್ಪಷ್ಟವಾಗಿತ್ತು. ಇದೀಗ ಡೆಮಾಕ್ರಟಿಕ್ ಪಕ್ಷದಿಂದ ಜೋ ಬೈಡನ್ ಅವರೇ ಚುನಾವಣೆಗೆ ಮತ್ತೊಮ್ಮೆ ನಾಮನಿರ್ದೇಶನ ಆಗಲಿದ್ದಾರೆ ಎನ್ನಲಾಗಿದೆ.

2024ರ ನವೆಂಬರ್‌ನಲ್ಲಿ ಅಮೆರಿಕಾ ಅಧ್ಯಕ್ಷ ಚುನಾವಣೆ ನಡೆಯಲಿದೆ. ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಜೋ ಬೈಡನ್ ಹಾಗೂ ಟ್ರಂಪ್ ಅವರು ಬಹುಮತವನ್ನು ಪಡೆದಿದ್ದಾರೆ. ಜಾರ್ಜಿಯಾ, ಮಿಸ್ಸಿಸ್ಸಿಪ್ಪಿ ಮತ್ತು ವಾಷಿಂಗ್ಟನ್‌ನಲ್ಲಿ ನಡೆದ ಅಧ್ಯಕ್ಷೀಯ ಆಯ್ಕೆಯ ಪ್ರಕ್ರಿಯೆಯಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಅಧಿಕೃತವಾಗಿ ಘೋಷಣೆ ಒಂದೇ ಬಾಕಿ ಇದೆ.

2020ರಲ್ಲಿ ನಡೆದ ಅಮೆರಿಕಾ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜೋ ಬೈಡನ್ ಸವಾಲು ಹಾಕಿ ಚುನಾವಣೆಯಲ್ಲಿ ಗೆದ್ದಿದ್ದರು. 4 ವರ್ಷದ ಬಳಿಕ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡನ್ ಅವರು ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. 2020ರ ಚುನಾವಣೆಯಲ್ಲಿ ಬೈಡನ್ ಅವರು ಶೇಕಡಾ 51.3ರಷ್ಟು ಮತ ಪಡೆದಿದ್ದರು. ಡೋನಾಲ್ಡ್ ಟ್ರಂಪ್ ಅವರು ಶೇಕಡಾ 46.8ರಷ್ಟು ಮತ ಪಡೆದಿದ್ದರು.

ಡೊನಾಲ್ಡ್ ಟ್ರಂಪ್ ಅವರಿಗೆ ಸದ್ಯ 77 ವರ್ಷ ವಯಸ್ಸಾಗಿದೆ. ಹಾಲಿ ಅಧ್ಯಕ್ಷ ಜೋ ಬೈಡನ್ ಅವರಿಗೆ 81 ವರ್ಷ ವಯಸ್ಸಾಗಿದೆ. ವಿಶ್ವದ ದೊಡ್ಡಣ್ಣನ ಹುದ್ದೆಗಾಗಿ ನಡೆಯುತ್ತಿರುವ ಚುನಾವಣೆಯನ್ನ ಇಡೀ ವಿಶ್ವವೇ ಎದುರು ನೋಡುತ್ತಿದೆ. ಇದೀಗ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡನ್‌ ಅವರ ಮಧ್ಯೆ ರೀ ಮ್ಯಾಚ್ ನಡೆಯುತ್ತಿರೋದು ತೀವ್ರ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಡನ್ V/S ಟ್ರಂಪ್‌ ರೀ ಮ್ಯಾಚ್‌.. ಅಮೆರಿಕಾ ಅಧ್ಯಕ್ಷ ಚುನಾವಣೆಗೆ ಹೊಸ ಟ್ವಿಸ್ಟ್‌; ಏನದು?

https://newsfirstlive.com/wp-content/uploads/2024/03/Trump-Biden.jpg

Load More