ಮಹಿಳೆಗೆ ಕಿಸ್ ಮಾಡಲು ಹೋದ ಜೋ ಬೈಡನ್.. US ಪ್ರೆಸಿಡೆಂಟ್ ಕನ್​​ಫ್ಯೂಸ್ ಆಗಿದ್ದೆಲ್ಲಿ?

author-image
Bheemappa
Updated On
ಮಹಿಳೆಗೆ ಕಿಸ್ ಮಾಡಲು ಹೋದ ಜೋ ಬೈಡನ್.. US ಪ್ರೆಸಿಡೆಂಟ್ ಕನ್​​ಫ್ಯೂಸ್ ಆಗಿದ್ದೆಲ್ಲಿ?
Advertisment
  • ಈಗಾಗಲೇ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿರೋ ಹಾಲಿ ಪ್ರೆಸಿಡೆಂಟ್
  • ಎರಡ್ಮೂರು ವರ್ಷಗಳಿಂದ ಅರುಳು ಮರಳು ಸ್ಥಿತಿಯಲ್ಲಿದ್ದಾರಾ ಬೈಡನ್?
  • ಕಾರ್ಯಕ್ರಮದಲ್ಲಿ ಬೇರೆ ಮಹಿಳೆಗೆ ಕಿಸ್ ಮಾಡಲು ಹೋದ್ರಾ ಅಧ್ಯಕ್ಷ?

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಾರ್ಯಕ್ರಮ ಒಂದರಲ್ಲಿ ಪತ್ನಿ ಬದಲಿಗೆ ಬೇರೊಬ್ಬ ಮಹಿಳೆಗೆ ಕಿಸ್ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವರು 81 ವರ್ಷದ ಬೈಡೆನ್‌ ಅವರಿಗೆ ಅರುಳು ಮರುಳು ಹಿಡಿದಿದೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ:ನಮ್ಮ ನಡುವಿನ ಗಾಸಿಪ್​​ ನಿಜ.. ಒಟ್ಟಾಗಿ ಬದುಕಲು ಆಗಲಿಲ್ಲ- ನಟಾಶಾ ಬಗ್ಗೆ ಹಾರ್ದಿಕ್ ಏನಂದರು?

ತುಂಬಿದ ಕಾರ್ಯಕ್ರಮದಲ್ಲಿ ಸಾಕಷ್ಟು ಜನರು ಸೇರಿರುತ್ತಾರೆ. ಈ ವೇಳೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಮಹಿಳೆಯೊಬ್ಬರ ಜೊತೆ ಮಾತನಾಡುತ್ತಿರುತ್ತಾರೆ. ಆಗ ಆ ಮಹಿಳೆಯೇ ತನ್ನ ಹೆಂಡತಿ ಜಿಲ್ ಬೈಡನ್ ಎಂದುಕೊಂಡು ಕಿಸ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಹೆಂಡತಿ ಜಿಲ್ ಬೈಡನ್ ತಕ್ಷಣ ಮಧ್ಯ ಪ್ರವೇಶಿಸಿ ಗಂಡನನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಅವರ ಹೆಂಡತಿ ಹಾಗೂ ಮಹಿಳೆ ಇಬ್ಬರು ನೀಲಿ ಬಣ್ಣದ ಡ್ರೆಸ್ ಹಾಕಿದ್ದಾರೆ. ಹೀಗಾಗಿ ಬೈಡನ್ ಕನ್​​ಫ್ಯೂಸ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮನೆ ಕುಸಿದು ಮುದ್ದಾದ ಅವಳಿ ಮಕ್ಕಳು ಸೇರಿ 3 ಸಾವು.. ಪಾಪ.. ಆಂಬ್ಯುಲೆನ್ಸ್​ ಬೇಗ ಬಂದಿದ್ರೆ ಬದುಕುತ್ತಿದ್ದರೇನೋ..


">July 18, 2024

ಅಮೆರಿಕದ ಅಧ್ಯಕ್ಷ ಸ್ಥಾನದ ರೇಸ್​ನಿಂದ ಹಾಲಿ ಪ್ರೆಸಿಡೆಂಟ್ ಆಗಿರುವ ಜೋ ಬೈಡನ್ ಅವರು ಹಿಂದೆ ಸರಿದಿದ್ದಾರೆ. ಜೋ ಬೈಡನ್ ಅವರಿಗೆ ಈಗಾಗಲೇ 81 ವರ್ಷಗಳು ತುಂಬಿದ್ದು ಅನಾರೋಗ್ಯ, ವಯಸ್ಸಿನ ಕಾರಣದಿಂದ ಯುಎಸ್​ ಪ್ರೆಸಿಡೆಂಟ್​ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಬೈಡನ್‌ ಅವರು ಹಿಂದೆ ಸರಿದ ಹಿನ್ನೆಲೆಯಲ್ಲಿ ನೂತನ ನಾಯಕನನ್ನು ಸದ್ಯದಲ್ಲೇ ನೇಮಕ ಮಾಡಲಾಗುವುದು ಎಂದು ತಿಳಿಸಲಾಗಿದೆ. ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್ ಅವರ ಹೆಸರು ಅನ್ನು ಘೋಷಣೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: BREAKING: ಅಮೆರಿಕ ಚುನಾವಣೆಗೆ ಅತಿ ದೊಡ್ಡ ಟ್ವಿಸ್ಟ್‌.. ರೇಸ್​ನಿಂದ ಹಿಂದೆ ಸರಿದ ಅಧ್ಯಕ್ಷ ಜೋ ಬೈಡೆನ್; ಯಾಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment