/newsfirstlive-kannada/media/post_attachments/wp-content/uploads/2025/07/Joe_Root-1.jpg)
ಭಾರತ ಹಾಗೂ ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಗೆಲುವನ್ನು ಪಡೆಯುವ ಅನಿವಾರ್ಯದಲ್ಲಿ ಶುಭ್ಮನ್ ಗಿಲ್ ಪಡೆ ಇದೆ. ಆದರೆ ಮೊದಲ ಇನ್ನಿಂಗ್ಸ್ನಲ್ಲಿ ಸಾಧಾರಣ ರನ್ಗಳನ್ನು ಕಲೆ ಹಾಕಿರುವ ಟೀಮ್ ಇಂಡಿಯಾಕ್ಕೆ ಸಂಕಷ್ಟ ಎದುರಾಗಿದೆ ಎನ್ನಬಹುದು. ಇದರ ನಡುವೆ ಸೆಂಚುರಿ ಸಿಡಿಸಿರುವ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಅವರು ಸಚಿನ್ ತೆಂಡುಲ್ಕರ್ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಜೋ ರೂಟ್ ಅವರು ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಅವರ ಟೆಸ್ಟ್ನ ವೃತ್ತಿ ಜೀವನದ 38ನೇ ಶತಕವಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ 248 ಬಾಲ್ಗಳನ್ನ ಎದುರಿಸಿದ ರೂಟ್ 14 ಬೌಂಡರಿಗಳಿಂದ 150 ರನ್ ಚಚ್ಚಿದರು. ಇದರಿಂದ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಮಟ್ಟದಲ್ಲೇ ಬ್ಯಾಟಿಂಗ್ನಲ್ಲಿ ನೆರವಾದರು. ಅಲ್ಲದೇ ವಿಶೇಷ ದಾಖಲೆ ಕೂಡ ಮಾಡಿದ್ದಾರೆ.
ಇದನ್ನೂ ಓದಿ:Video; ಆಕಾಶದಿಂದ ಹೆದ್ದಾರಿಗೆ ರಭಸವಾಗಿ ಬಿದ್ದ ಜೆಟ್ ವಿಮಾನ.. ಕ್ಷಣಾರ್ಧದಲ್ಲೇ ಸುಟ್ಟು ಭಸ್ಮ!
ತವರಿನ ಮೈದಾನದಲ್ಲಿ ಅತಿ ಹೆಚ್ಚು ಸೆಂಚುರಿಗಳನ್ನು ಬಾರಿಸಿದ ವಿಶ್ವದ ಬ್ಯಾಟರ್ಗಳ ಪೈಕಿ ಜೋ ರೂಟ್ ಅವರು, ಸಚಿನ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಸಚಿನ್ ತೆಂಡುಲ್ಕರ್ ಅವರು ತವರಿನಲ್ಲಿ (ಭಾರತ) ಒಟ್ಟು 94 ಮ್ಯಾಚ್ಗಳಲ್ಲಿ 22 ಸೆಂಚುರಿ ಬಾರಿಸಿದ್ದಾರೆ. ಆದರೆ ಜೋ ರೂಟ್ ಕೇವಲ 84 ಪಂದ್ಯಗಳಿಂದ 23 ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ ಶ್ರೀಲಂಕಾದ ಮಹೇಲಾ ಜಯವರ್ಧನೆ, ಜಾಕ್ ಕಾಲಿಸ್, ರಿಕಿ ಪಾಟಿಂಗ್ ಅವರ ಸಾಲಿಗೆ ಈಗ ರೂಟ್ ಕೂಡ ಸೇರಿಕೊಂಡಿದ್ದಾರೆ.
ತವರಿನಲ್ಲಿ ಅತಿ ಹೆಚ್ಚು ಸೆಂಚುರಿ ಸಿಡಿಸಿದ ಬ್ಯಾಟ್ಸ್ಮನ್ಗಳು?
- ಇಂಗ್ಲೆಂಡ್- ಜೋ ರೂಟ್- 23 ಶತಕ, 81 ಪಂದ್ಯ
- ಶ್ರೀಲಂಕಾ- ಮಹೇಲಾ ಜಯವರ್ಧನೆ- 23 ಶತಕ, 81 ಪಂದ್ಯ
- ಆಫ್ರಿಕಾ- ಜಾಕ್ ಕಾಲಿಸ್- 23 ಶತಕ, 88 ಪಂದ್ಯ
- ಆಸ್ಟ್ರೇಲಿಯಾ- ರಿಕಿ ಪಾಟಿಂಗ್- 23 ಶತಕ, 92 ಪಂದ್ಯ
- ಸಚಿನ್ ತೆಂಡುಲ್ಕರ್- 22 ಶತಕ, 94 ಪಂದ್ಯ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ