ಎರಡನೇ ಟೆಸ್ಟ್​ಗೂ ಮುನ್ನವೇ ಇಂಗ್ಲೆಂಡ್​ಗೆ ಆನೆಬಲ.. ವಿಧ್ವಂಸಕ ಬೌಲರ್​ ತಂಡಕ್ಕೆ ಎಂಟ್ರಿ..!

author-image
Ganesh
Updated On
ಕ್ರಿಕೆಟ್ ಕಾಶಿಯಲ್ಲಿ ಗೆಲುವು ಸುಲಭ ಇಲ್ಲ.. ಟೀಂ ಇಂಡಿಯಾಗೆ ಇದೆ 5 ಸವಾಲುಗಳು..!
Advertisment
  • ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯ ಆಡಲಿರುವ ಭಾರತ
  • ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿದೆ
  • 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಬುಮ್ರಾರ ಮಿಸ್ ಮಾಡಿಕೊಳ್ತಿದೆ

ಟೀಮ್​ ಇಂಡಿಯಾ ವಿರುದ್ಧದ 2ನೇ ಟೆಸ್ಟ್​ಗೂ ಮುನ್ನ ಇಂಗ್ಲೆಂಡ್​ ತಂಡದ ಬಲ ಹೆಚ್ಚಿದೆ. ಮಾರಕ ವೇಗಿ ಜೋಫ್ರಾ ಆರ್ಚರ್​​ ಕಮ್​ಬ್ಯಾಕ್​ಗೆ ಸಜ್ಜಾಗಿದ್ದಾರೆ.

ಇಂಜುರಿಯಿಂದ ಟೆಸ್ಟ್​ ಫಾರ್ಮೆಟ್​ನಿಂದ ದೂರ ಉಳಿದಿದ್ದ ಆರ್ಚರ್ 4 ವರ್ಷಗಳ ಬಳಿಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವಾರ ಸಸೆಕ್ಸ್​ ಪರ ಕೌಂಟಿ ಪಂದ್ಯವನ್ನಾಡಿರುವ ಆರ್ಚರ್​ 2ನೇ ಟೆಸ್ಟ್​ನಲ್ಲಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳೋ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದುಕೊಂಡಿರುವ ಇಂಗ್ಲೆಂಡ್​ಗೆ ಮತ್ತಷ್ಟು ಆನೆಬಲ ಸಿಕ್ಕಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಆಘಾತ.. ಎರಡನೇ ಟೆಸ್ಟ್​ಗೆ ಕೈಕೊಟ್ಟ ಸ್ಟಾರ್​ ವೇಗಿ..!

ಇತ್ತ ಇಂಗ್ಲೆಂಡ್ ತಂಡಕ್ಕೆ ಆನೆಬಲ ಬಂದರೆ, ಟೀಂ ಇಂಡಿಯಾ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಭಾರತ, ಇದೀಗ ಜಸ್​ಪ್ರಿತ ಬೂಮ್ರಾ ಎರಡನೇ ಟೆಸ್ಟ್ ಪಂದ್ಯವನ್ನು ಆಡ್ತಿಲ್ಲ. ಮತ್ತೊಂದು ಕಡೆ ಯುವ ಬ್ಯಾಟರ್​ ಸಾಯಿ ಸುದರ್ಶನ್ ಕೂಡ ಆಡೋದು ಡೌಟ್ ಎನ್ನಲಾಗುತ್ತಿದೆ. ಹೀಗಾಗಿ ಟೀಂ ಇಂಡಿಯಾ ಪಾಲಿಗೆ ಜೋಪ್ರಾ ಅರ್ಚರ್​​ ಎಂಟ್ರಿ ಆಘಾತ ತಂದಿದೆ ಎನ್ನಬಹುದು. ಜುಲೈ 2 ರಂದು ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಹರ್ಷಿತ್ ರಾಣಾ, ಬುಮ್ರಾ ಬೆನ್ನಲ್ಲೇ ಟೀಂ ಇಂಡಿಯಾದಿಂದ ಮತ್ತೊಂದು ಕೆಟ್ಟ ಸುದ್ದಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment