/newsfirstlive-kannada/media/post_attachments/wp-content/uploads/2025/01/IND-vs-ENG.jpg)
ನಾಳೆಯಿಂದ ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವಿನ ಟಿ20 ಸರಣಿ ಶುರುವಾಗಲಿದೆ. ಈ ಮಹತ್ವದ ಸರಣಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹೇಗಾದ್ರೂ ಮಾಡಿ ಈ ಸರಣಿ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಜಿದ್ದಿಗೆ ಬಿದ್ದಿದೆ.
ಕ್ಯಾಪ್ಟನ್​​ ಸೂರ್ಯಕುಮಾರ್​ ಯಾದವ್​​ ಟೀಮ್​​ ಇಂಡಿಯಾವನ್ನು ಲೀಡ್​ ಮಾಡಲಿದ್ದಾರೆ. ನಾಳೆಯ ಪಂದ್ಯಕ್ಕೆ ಇಂಗ್ಲೆಂಡ್​ ತಂಡದಲ್ಲಿ ಮೇಜರ್​ ಸರ್ಜರಿ ಆಗಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇಂಗ್ಲೆಂಡ್​​ ಕೋಚ್​ ಬಿಗ್​ ಅಪ್ಡೇಟ್​ ಕೊಟ್ಟಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಇದು ಬ್ಯಾಟಿಂಗ್​ ಪಿಚ್​ ಆಗಿದೆ. ಹಾಗಾಗಿ ಟಾಸ್​​ ಗೆದ್ದವರಿಗೆ ಇದು ಬಹಳ ಅನುಕೂಲ. ಐದು ಟಿ20 ಪಂದ್ಯಗಳ ಸೀರೀಸ್​​ ಮುಗಿದ ಬೆನ್ನಲ್ಲೇ ಟೀಮ್​ ಇಂಡಿಯಾ ವಿರುದ್ಧ ಇಂಗ್ಲೆಂಡ್​​ 3 ಮ್ಯಾಚ್​ಗಳ ಏಕದಿನ ಸರಣಿ ಆಡಲಿದೆ.
ಬಿಗ್​ ಶಾಕ್​ ಕೊಟ್ಟ ಬಟ್ಲರ್
ಚಾಂಪಿಯನ್ಸ್ ಟ್ರೋಫಿಗೆ ಮುನ್ನ ನಡೆಯಲಿರೋ ಮಹತ್ವದ ಸರಣಿ ಇದಾಗಿದೆ. ಹಾಗಾಗಿ ಸರಣಿ ಬಹಳ ರೋಚಕತೆಯಿಂದ ಕೂಡಿರಲಿದೆ. ಈ ಹೊತ್ತಲ್ಲೇ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ವಿಕೆಟ್ ಕೀಪರ್ ಜವಾಬ್ದಾರಿ ಹಿಂದೆ ಸರಿದು ಬಿಗ್​ ಶಾಕ್​ ಕೊಟ್ಟಿದ್ದಾರೆ.
ಇನ್ನು, ಈ ಬಗ್ಗೆ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಸ್ಪಷ್ಟನೆ ನೀಡಿದ್ದಾರೆ. ನನ್ನೊಂದಿಗೆ ಜೋಸ್​ ಮಾತಾಡಿದ್ದಾರೆ. ನಾನು ವಿಕೆಟ್ ಕೀಪಿಂಗ್ ಮಾಡುವುದಿಲ್ಲ ಎಂದಿದ್ದಾರೆ. ಈ ನಿರ್ಧಾರ ನಾನು ಒಪ್ಪಲೇಬೇಕು. ಇದು ಜೋಸ್​ ಮೈದಾನದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲ ಆಗುತ್ತದೆ ಎಂದರು.
ಟಿ20 ಸರಣಿಗೆ ಇಂಗ್ಲೆಂಡ್​ ಟೀಮ್​ ಹೀಗಿದೆ!
ಜೋಸ್ ಬಟ್ಲರ್ (ಕ್ಯಾಪ್ಟನ್​), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪನಾಯಕ), ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್. ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us