ಒಂದೇ ಕಲ್ಲಲ್ಲಿ ಮೂರು ಹಕ್ಕಿ; ಬರೋಬ್ಬರಿ 15.75 ಕೋಟಿ ನೀಡಿ ಜೋಸ್​ ಬಟ್ಲರ್​ ಖರೀದಿಸಿದ ಗುಜರಾತ್​​

author-image
Ganesh Nachikethu
Updated On
ಬರೋಬ್ಬರಿ 15.75 ಕೋಟಿಗೆ ಸೇಲಾದ ಬಟ್ಲರ್​​ಗೆ ಜಾಕ್​ಪಾಟ್​​; ಗುಜರಾತ್​ನಿಂದ ಬಿಗ್​ ಆಫರ್​
Advertisment
  • ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್
  • IPL 2025 ಸೀಸನ್ ಮೆಗಾ ಹರಾಜು ಇಂದಿನಿಂದ ಶುರು
  • ಬರೋಬ್ಬರಿ 15.75 ಕೋಟಿಗೆ ಸೇಲಾದ ಜೋಸ್​ ಬಟ್ಲರ್​

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್ ಮೆಗಾ ಹರಾಜು ಶುರುವಾಗಿದೆ. ಇಂಗ್ಲೆಂಡ್ ಟಿ20 ತಂಡದ ನಾಯಕ ಜೋಸ್ ಬಟ್ಲರ್ ಅವರು ಬರೋಬ್ಬರಿ 15.75 ಕೋಟಿಗೆ ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ ಸೇಲ್​ ಆಗಿದ್ದಾರೆ.

ಯಾರು ಈ ಜೋಸ್​ ಬಟ್ಲರ್​?

ಜೋಸ್ ಬಟ್ಲರ್ ಖರೀದಿಯಿಂದ ಮೂರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬಹುದು. ಟಿ20 ಕ್ರಿಕೆಟ್​ನಲ್ಲಿ ಓಪನರ್​ ಆಗಿ ಕಣಕ್ಕಿಳಿಯೋ ಬಟ್ಲರ್, ವಿಕೆಟ್ ಕೀಪರ್ ಜವಾಬ್ದಾರಿ ಕೂಡ ನಿರ್ವಹಿಸಲಿದ್ದಾರೆ. ಇದರ ಜೊತೆಗೆ ನಾಯಕತ್ವವನ್ನು ನಿಭಾಯಿಸುವ ಸಾಮರ್ಥ್ಯ ಕೂಡ ಇದೆ.

ಕಳೆದ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 11 ಪಂದ್ಯಗಳನ್ನಾಡಿದ್ದ ಜೋಸ್ ಬಟ್ಲರ್ 2 ಭರ್ಜರಿ ಶತಕಗಳೊಂದಿಗೆ ಒಟ್ಟು 359 ರನ್ ಕಲೆಹಾಕಿದ್ದರು. ತಾವು ಆಡಿರೋ 107 ಐಪಿಎಲ್​ ಪಂದ್ಯಗಳಿಂದ ಒಟ್ಟು 3582 ರನ್ ಗಳಿಸಿದ್ದಾರೆ. ಈ ಪೈಕಿ ಬರೋಬ್ಬರಿ ವೇಳೆ 7 ಶತಕ ಹಾಗೂ 19 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಜೋಸ್ ಬಟ್ಲರ್ ಖರೀದಿಗಾಗಿ ಈ ಬಾರಿ ಭರ್ಜರಿ ಪೈಪೋಟಿ ನಡೆಸಲಾಗಿತ್ತು.

ಭಾರೀ ಪೈಪೋಟಿ

ಲಕ್ನೋ ಸೂಪರ್​ ಜೈಂಟ್ಸ್​, ಗುಜರಾತ್​ ಟೈಟನ್ಸ್​ ಮತ್ತು ರಾಜಸ್ಥಾನ್​​ ರಾಯಲ್ಸ್​ ಮಧ್ಯೆ ಭಾರೀ ಪೈಪೋಟಿ ನಡೆಯಿತು. ಕೊನೆಗೂ 15.75 ಕೋಟಿ ನೀಡಿ ಗುಜರಾತ್​ ಟೈಟನ್ಸ್​ ತಂಡ ಬಟ್ಲರ್​ ಅವರನ್ನು ಖರೀದಿ ಮಾಡಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment