/newsfirstlive-kannada/media/post_attachments/wp-content/uploads/2025/04/Jos_Buttler-1.jpg)
ಡಬಲ್ ಹೆಡ್ಡರ್ ಐಪಿಎಲ್​ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ಶುಭ್​​ಮನ್​ ಗಿಲ್​ ನೇತೃತ್ವದ ಗುಜರಾತ್​ ಟೈಟನ್ಸ್ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನಿಂದ ಪಾಯಿಂಟ್​ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಜೋಶ್ ಬಟ್ಲರ್ ಅವರ ಅರ್ಧಶತಕದ ನೆರವಿನಿಂದ ಟೈಟನ್ಸ್ ವಿಜಯಿಯಾಯಿತು. ​
/newsfirstlive-kannada/media/post_attachments/wp-content/uploads/2025/04/Jos_Buttler.jpg)
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್​ ತಂಡದ ನಾಯಕ ಶುಭ್​ಮನ್ ಗಿಲ್ ಫೀಲ್ಡಿಂಗ್ ಆಯ್ಕೆ ಮಾಡಿ ಎದುರಾಳಿ ಡೆಲ್ಲಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಡೆಲ್ಲಿ ಪರ ಓಪನರ್ ಆಗಿ ಮೈದಾನಕ್ಕೆ ಬಂದ ಅಭಿಷೇಕ್ ಪೊರೆಲ್ 18, ಹಾಗೂ ಕನ್ನಡಿಗ ಕರುಣ್ ನಾಯರ್ 31 ರನ್​ಗೆ ಕ್ಯಾಚ್ ಕೊಟ್ಟರು. ಕೆ.ಎಲ್ ರಾಹುಲ್ 28, ನಾಯಕ ಅಕ್ಷರ್ ಪಟೇಲ್ 39, ಸ್ಟಬ್ಸ್​ 31, ಅಶುತೋಷ್​ ಶರ್ಮಾ 37 ರನ್​ಗಳು. ಈ ಎಲ್ಲರ ಆಟದಿಂದ 8 ವಿಕೆಟ್​ಗೆ 204 ರನ್​​ಗಳ ಬೃಹತ್​ ಟಾರ್ಗೆಟ್​ ನೀಡಿತ್ತು.
ಗುಜರಾತ್ ಟೈಟನ್ಸ್​ ಗುರಿ ಬೆನ್ನತ್ತಿದ್ದ ಆರಂಭದಲ್ಲೇ ಆಘಾತಕ್ಕೆ ಒಳಗಾಗಿತ್ತು. ಕ್ಯಾಪ್ಟನ್ ಶುಭ್​ಮನ್​ ಗಿಲ್ 7 ರನ್​ಗೆ ರನೌಟ್​ ಆಗಿ ನಿರಾಶೆ ಮೂಡಿಸಿದ್ದರು. ಸಾಯಿ ಸುದರ್ಶನ್ ಕೂಡ 36 ರನ್​ಗೆ ವಿಕೆಟ್​ ಒಪ್ಪಿಸಿದರು. ಆದರೆ ಗಿಲ್​ ಬಳಿಕ ಬ್ಯಾಟಿಂಗ್​​ಗೆ​ ಆಗಮಿಸಿದ್ದ ಜೋಶ್​ ಬಟ್ಲರ್​ ಮ್ಯಾಚ್​ ವಿನ್ನಿಂಗ್​ ಪರ್ಫಾಮೆನ್ಸ್​ ನೀಡಿದರು. ಇವರ ಜೊತೆಗೆ ಶೆರ್ಫೇನ್ ರುದರ್ಫೋರ್ಡ್ ಬ್ಯಾಟಿಂಗ್ ಬಲ, ಗುಜರಾತ್​ಗೆ ಗೆಲುವನ್ನು ಸುಲಭವಾಗಿ ತಂದು ಕೊಟ್ಟಿತು ಎನ್ನಬಹುದು.
ಶೇರ್ಫೇನ್​ 3 ಸಿಕ್ಸರ್ ಸಮೇತ 43 ರನ್​ ಕೊಳ್ಳೆ ಹೊಡೆದರು. ಜೋಶ್ ಬಟ್ಲರ್​ ಅವರು 33 ಎಸೆತಗಳಲ್ಲಿ 3 ಬೌಂಡರಿ, 3 ಅಮೋಘವಾದ ಸಿಕ್ಸರ್​ಗಳಿಂದ ಅರ್ಧಶತಕ ಬಾರಿಸಿದರು. ಪಂದ್ಯ ಗೆಲ್ಲುವವರೆಗೂ ಕ್ರೀಸ್​ ಕಾಯ್ದುಕೊಂಡಿದ್ದ ಬಟ್ಲರ್​ ಪಂದ್ಯದಲ್ಲಿ ಒಟ್ಟು 54 ಎಸೆತಗಳನ್ನು ಎದುರಿಸಿ 11 ಬೌಂಡರಿ, 4 ಅದ್ಭುತವಾದ ಸಿಕ್ಸರ್​ಗಳಿಂದ 97 ರನ್​ ಗಳಿಸಿ ಅಜೇಯರಾಗಿ ಉಳಿದರು.
/newsfirstlive-kannada/media/post_attachments/wp-content/uploads/2025/04/Prasidh_Krishna_1.jpg)
ಬಟ್ಲರ್ ಕೇವಲ 3 ರನ್​ನಿಂದ ಸೆಂಚುರಿ ಮಿಸ್ ಮಾಡಿಕೊಂಡರು. ಏಕೆಂದರೆ ಪಂದ್ಯ ಗೆಲುವು ಪಡೆದಿದ್ದರಿಂದ ಬಟ್ಲರ್​ ಶತಕ ತಪ್ಪಿತು ಎನ್ನಬಹುದು. ಗುಜರಾತ್​ 19.2 ಓವರ್​​ಗಳಲ್ಲಿ ಕೇವಲ 3 ವಿಕೆಟ್​ಗೆ 204 ರನ್​ ಗಳಿಸಿ ವಿಜಯಮಾಲೆ ಧರಿಸಿತು. ಇದರಿಂದ ಪಾಯಿಂಟ್ ಟೇಬಲ್​ನಲ್ಲಿ ಗುಜರಾತ್ ಪ್ರಥಮ ಸ್ಥಾನಕ್ಕೆ ಜಿಗಿದ್ರೆ, ಡೆಲ್ಲಿ ಕ್ಯಾಪಿಟಲ್ಸ್​ 2ನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್​ಗೆ 3ನೇ ಸ್ಥಾನ, ಆರ್​ಸಿಬಿ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us