6, 6, 6, 4, 4, 4; ಆರಂಭದಲ್ಲೇ ಗಿಲ್​ಗೆ ಆಘಾತ.. ಭರ್ಜರಿ ಅರ್ಧಶತಕ ಬಾರಿಸಿದ ಜೋಶ್ ಬಟ್ಲರ್​

author-image
Bheemappa
Updated On
6, 6, 6, 4, 4, 4; ಆರಂಭದಲ್ಲೇ ಗಿಲ್​ಗೆ ಆಘಾತ.. ಭರ್ಜರಿ ಅರ್ಧಶತಕ ಬಾರಿಸಿದ ಜೋಶ್ ಬಟ್ಲರ್​
Advertisment
  • ಆರಂಭಿಕರಾದ ಶುಭ್​ಮನ್-ಸುದರ್ಶನ್ ವಿಫಲ ಬ್ಯಾಟಿಂಗ್
  • ಟಾರ್ಗೆಟ್​ನತ್ತ ಮುನ್ನುಗ್ಗುತ್ತಿರುವ ತಂಡಕ್ಕೆ ಬ್ರೇಕ್ ಹಾಕುತ್ತ ಡೆಲ್ಲಿ?
  • ಡೆಲ್ಲಿ ಆಟಗಾರರಿಗೆ ಮನ ಬಂದಂತೆ ಚಚ್ಚಿದ ಜೋಶ್ ಬಟ್ಲರ್​​

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ 35ನೇ ಐಪಿಎಲ್​ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ಬ್ಯಾಟರ್​ ಜೋಶ್ ಬಟ್ಲರ್ ಅಮೋಘವಾದ ಅರ್ಧಶತಕ ಸಿಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಟಾಸ್ ಗೆದ್ದುಕೊಂಡ ಗುಜರಾತ್ ನಾಯಕ ಶುಭ್​ಮನ್​ ಗಿಲ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ್ದರು. ಹೀಗಾಗಿ ಮೊದಲ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್​ 204 ರನ್​ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು. ಸದ್ಯ ಈ ಗುರಿ ಬೆನ್ನತ್ತಿರುವ ಗುಜರಾತ್ ಟೀಮ್ ಕೊಂಚ ಸಂಕಷ್ಟದಲ್ಲಿದೆ ಎಂದು ಹೇಳಬಹುದು.

publive-image

ಆದರೆ ಗುಜರಾತ್ ತಂಡಕ್ಕೆ ಉತ್ತಮವಾಗಿ ಆಶ್ರಯವಾಗಿರುವ ಜೋಶ್ ಬಟ್ಲರ್ ಅವರು ಹಾಫ್​ ಸೆಂಚುರಿ ಬಾರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ಒಳ್ಳೆಯ ಬ್ಯಾಟಿಂಗ್​​ ಪ್ರದರ್ಶನ ಮಾಡಿದ ಜೋಶ್ ಬಟ್ಲರ್​ ಅವರು, 33 ಎಸೆತಗಳಲ್ಲಿ 3 ಬೌಂಡರಿ, 3 ಅಮೋಘವಾದ ಸಿಕ್ಸರ್​ಗಳಿಂದ 52 ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಗುಜರಾತ್ ಪರವಾಗಿ ಆರಂಭಿಕರಾಗಿ ಕ್ರೀಸ್​ಗೆ ಬಂದಿದ್ದ ನಾಯಕ ಶುಭ್​ಮನ್ ಗಿಲ್ ಹಾಗೂ ಸಾಯಿ ಸುದರ್ಶನ ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ತಂಡದ ಮೊತ್ತ 14 ರನ್​ ಇರುವಾಗ ಕರುಣ್ ನಾಯರ್ ಎಸೆದ ಬಾಲ್ ನೇರ ವಿಕೆಟ್​​ಗಳಿಗೆ ತಾಗಿದ್ದರಿಂದ ಶುಭ್​ಮನ್ ಗಿಲ್​ ರನೌಟ್​ಗೆ ಬಲಿಯಾದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment