newsfirstkannada.com

ತಾಯಿ ಸಾವಿನ ದುಃಖದಲ್ಲೂ ದೇಶಕ್ಕಾಗಿ ಕ್ರಿಕೆಟ್​ ಆಡಿದ್ದ RCB ಸ್ಟಾರ್​​​​​​.. ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

Share :

Published February 6, 2024 at 4:33pm

Update February 6, 2024 at 4:36pm

    ರಾಯಲ್​ ಚಾಲೆಂಜರ್​​​ ಬೆಂಗಳೂರು ತಂಡದಲ್ಲಿ ಜೋಸೆಫ್

    ಅಂತಹ ಘಟನೆ ಎದುರಾದರೆ ಟೀಮ್​ಗಾಗಿ ಆಡುವ ಛಲಗಾರ

    ​ಜೋಸೆಫ್​ಗೆ ₹11.50 ಕೋಟಿ ಕೊಟ್ಟು ಖರೀದಿಸಿರುವ RCB

ಕಳೆದ ಡಿಸೆಂಬರ್​​ನಲ್ಲಿ ನಡೆದ ಐಪಿಎಲ್​ ಮಿನಿ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬರೋಬ್ಬರಿ 11.50 ಕೋಟಿ ನೀಡಿ ಖರೀದಿಸಿದ್ದ ಅಲ್ಜಾರಿ ಜೋಸೆಫ್​ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ವೇಗಿ ಅಲ್ಜಾರಿ ಜೋಸೆಫ್ ಬಗ್ಗೆ ಹಲವರು ಟೀಕಿಸಿ ನಿಂದಿಸಿದ್ದರು. ಈಗ ಅಲ್ಜಾರಿ ಜೋಸೆಫ್ ಬಗ್ಗೆ ಆರ್​​ಸಿಬಿ ಫ್ಯಾನ್ಸ್​​ ಹೆಮ್ಮೆಪಡುವ ಸುದ್ದಿಯೊಂದು ಹರಿದಾಡುತ್ತಿದೆ.

ತಂದೆ ನಿಧನರಾಗಿದ್ರೂ ದುಃಖದಲ್ಲೇ ಭಾರತಕ್ಕಾಗಿ ಆಡಿ ಗೆಲ್ಲಿಸಿದ ವಿರಾಟ್​ ಕೊಹ್ಲಿ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಅದೇ ರೀತಿಯ ಕಥೆ ನಮ್ಮ ಆರ್​​ಸಿಬಿ ಸ್ಟಾರ್​ ಆಟಗಾರನದ್ದು. 2019ರ ವೆಸ್ಟ್​ ಇಂಡೀಸ್​, ಇಂಗ್ಲೆಂಡ್​ ಮಧ್ಯೆ ಟೆಸ್ಟ್​​ ಸರಣಿ ಇತ್ತು. ಆಂಟಿಗುವಾದಲ್ಲಿ ನಡೆಯುತ್ತಿದ್ದ ಸರಣಿಯ 2ನೇ ಟೆಸ್ಟ್​ನ 3 ದಿನದಾಟದ ಆರಂಭಕ್ಕೂ ಮುನ್ನ ಆಘಾತಕಾರಿ ಸುದ್ದಿ ವಿಂಡೀಸ್​ ಕ್ಯಾಂಪ್​ಗೆ ಅಪ್ಪಳಿಸಿತ್ತು. ಸಾಕಿ ಸಲುಹಿ, ಕ್ರಿಕೆಟರ್​ ಆಗೋ ಕನಸು ಕಂಡವನಿಗೆ ದಾರಿ ತೋರಿಸಿದ್ದ ಅಲ್ಜಾರಿ ಜೋಸೆಫ್​ ಅಮ್ಮ ನಿಧನ ಹೊಂದಿದ್ದರು.

ಬಹುಕಾಲದಿಂದ ಬ್ರೈನ್​ ಟ್ಯೂಮರ್​ನಿಂದ ಬಳಲ್ತಿದ್ದ ತಾಯಿ ಕೊನೆ ಉಸಿರೆಳೆದಿದ್ರು. ಆಗ ವೆಸ್ಟ್​ ಇಂಡೀಸ್​​ನ ಪ್ಲೇಯಿಂಗ್​ ಇಲೆವೆನ್​ನಲ್ಲಿದ್ದ ಅಲ್ಜಾರಿ ಜೋಸೆಫ್​ ದೃಢ ನಿರ್ಧಾರ ತಳೆದ್ರು. ಆಗ ದೇಶವೇ ಮುಖ್ಯ ಎಂದ ಅಲ್ಜಾರಿ, ದಿನದ ಆಟವನ್ನ ಮುಗಿಸಿ ತಾಯಿಯ ಅಂತಿಮ ಕ್ರಿಯೆಗೆ ತೆರಳಿದ್ರು. ಇಷ್ಟೇ ಅಲ್ಲ.. ಮರುದಿನದ ಆಟ ಆರಂಭವಾಗೋದ್ರೊಳಗೆ ತಂಡವನ್ನ ಕೂಡಿ ಕೊಂಡಿದ್ರು. ಈ ಯುವ ವೇಗಿ ಕಮಿಟ್​ಮೆಂಟ್​ಗೆ ಆರ್​​ಸಿಬಿ ಫಿದಾ ಆಗಿದ್ದು, ಹರಾಜಿನಲ್ಲಿ ಖರೀದಿ ಮಾಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ತಾಯಿ ಸಾವಿನ ದುಃಖದಲ್ಲೂ ದೇಶಕ್ಕಾಗಿ ಕ್ರಿಕೆಟ್​ ಆಡಿದ್ದ RCB ಸ್ಟಾರ್​​​​​​.. ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/12/RCB_JOSEPH_1.jpg

Load More