/newsfirstlive-kannada/media/post_attachments/wp-content/uploads/2025/05/josh_hazlewood_RCB.jpg)
ಐಪಿಎಲ್​ ಪುನಾರಂಭದ ಡೇಟ್​ ಅನೌನ್ಸ್​ ಬೆನ್ನಲ್ಲೇ ಆರ್​​ಸಿಬಿಗೆ ಆಘಾತ ಎದುರಾಗಿತ್ತು. ಆಸ್ಟ್ರೇಲಿಯಾ ವೇಗಿ ಜೋಷ್​ ಹೇಜಲ್​ವುಡ್​ ಮುಂದಿನ ಪಂದ್ಯಗಳನ್ನ ಆಡಲ್ಲ ಎಂದು ಸುದ್ದಿ ಹೊರಬಿದ್ದಿತ್ತು.
ಹೇಜಲ್​ವುಡ್​ ಅಲಭ್ಯತೆ ಆರ್​​ಸಿಬಿ ದೊಡ್ಡ ಮಟ್ಟದ ಹಿನ್ನಡೆಯಾಗಲಿದೆ ಎಂಬ ಚರ್ಚೆ ನಡೆದಿತ್ತು. ಇದೀಗ ಎಲ್ಲಾ ಚರ್ಚೆಗಳಿಗೂ ಫುಲ್​ ಸ್ಟಾಪ್​ ಬಿದ್ದಿದ್ದು, ಹೇಜಲ್​ವುಡ್​​ ವಾಪಾಸ್ಸಾತಿಗೆ ಕೌಂಟ್​​ಡೌನ್​ ಶುರುವಾಗಿದೆ. ಹೇಜಲ್​​ವುಡ್​ ಕಮ್​ಬ್ಯಾಕ್​ನ ಸುದ್ದಿ ಆರ್​​ಸಿಬಿ ತಂಡದ ಜೊತೆಗೆ ಅಭಿಮಾನಿಗಳ ವಲಯದಲ್ಲೂ ಜೋಷ್​ ಹೆಚ್ಚಿಸಿದೆ.
/newsfirstlive-kannada/media/post_attachments/wp-content/uploads/2023/12/hazlewood.jpg)
ಹೇಜಲ್​ವುಡ್​​ ಅಲಭ್ಯರಾಗಿದ್ರೆ ಆರ್​​ಸಿಬಿ ತೀವ್ರ ಹಿನ್ನಡೆಯನ್ನ ಅನುಭವಿಸೋ ಸಾಧ್ಯತೆ ದಟ್ಟವಾಗಿತ್ತು. ಈ ಸೀಸನ್​ನಲ್ಲಿ ಬ್ಯಾಟಿಂಗ್​ನಲ್ಲಿ ಹೇಗೆ ಕೊಹ್ಲಿ ಆರ್​​ಸಿಬಿಯ ಬಲವಾಗಿದ್ದಾರೋ, ಬೌಲಿಂಗ್​ನಲ್ಲಿ ಹೇಜಲ್​ವುಡ್​ ಆರ್​​ಸಿಬಿ ಪವರ್​​ ಆಗಿದ್ದಾರೆ. ಈ ಸೀಸನ್​ನಲ್ಲಿ ಅನುಭವಿ ಹೇಜಲ್​ವುಡ್​ ಸಂಘಟಿಸಿದ ಕರಾರುವಕ್​​ ಬೌಲಿಂಗ್​ ದಾಳಿ ಆರ್​​ಸಿಬಿಯ ಚರಿಷ್ಮಾವನ್ನೇ ಬದಲಿಸಿದ್ದು ಸುಳ್ಳಲ್ಲ.
ಈ ಸೀಸನ್​ IPLನಲ್ಲಿ ಹೇಜಲ್​ವುಡ್
ಈ ಸೀಸನ್​​ ಐಪಿಎಲ್​ನಲ್ಲಿ 10 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್​ ಮಾಡಿದ್ದ ಹೇಜಲ್​ವುಡ್​​ 18 ವಿಕೆಟ್​​ ಬೇಟೆಯಾಡಿದ್ದಾರೆ. 6 ಬಾರಿ 2ಕ್ಕೂ ಹೆಚ್ಚು ವಿಕೆಟ್ಸ್​​ ಬೇಟೆಯಾಡಿದ್ದು, ಶೇಕಡ 46.6 ಅಂದ್ರೆ 103 ಡಾಟ್​​ ಬಾಲ್​ಗಳನ್ನ ಹಾಕಿದ್ದಾರೆ.
ಪ್ರತಿ ಬಾರಿ ಬೌಲಿಂಗ್​ ವಿಭಾಗದಲ್ಲಿ ತೀವ್ರ ಹಿನ್ನಡೆ ತಂಡಕ್ಕೆ ಎದುರಾಗ್ತಿತ್ತು. ಜೋಷ್​​ ಹೇಜಲ್​ವುಡ್​ ಆ ಹಿನ್ನಡೆಯನ್ನ ಮೆಟ್ಟಿ ನಿಲ್ಲುವಂತೆ ಮಾಡಿದ್ರು. ಬ್ಯಾಟಿಂಗ್​ನಲ್ಲಿ ಕೊಹ್ಲಿ ಪ್ರತಿ ಸೀಸನ್​​ನಲ್ಲೂ ಕೊಹ್ಲಿ ಕಾಂಟ್ರಿಬ್ಯೂಟ್​ ಮಾಡ್ತಾನೆ ಬಂದಿದ್ದಾರೆ. ಈ ಸೀಸನ್​ನಲ್ಲೂ ಅದೇ ಆಟ ಆಡಿದ್ದಾರೆ. ಇವರಿಬ್ಬರು ಐಪಿಎಲ್​ನ ಮುಂದಿನ ಪಂದ್ಯಗಳಲ್ಲೂ ತಮ್ಮ ಕನ್ಸಿಸ್ಟೆನ್ಸಿ ಕಾಯ್ದುಕೊಂಡ್ರೆ ಕಪ್​ ಗೆಲ್ಲೋದು ಕಷ್ಟವೇನಲ್ಲ. ಐಪಿಎಲ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಆರ್​ಸಿಬಿ ಕೋಲ್ಕತ್ತ ನೈಟ್​ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ನಾಳೆ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಎರಡು ತಂಡಗಳು ಮುಖಾಮುಖಿ ಆಗಲಿವೆ.
ಇದನ್ನೂ ಓದಿ: ಬೆಳ್ಳಿ ಬಳೆಗಳಿಗಾಗಿ ತಾಯಿಯ ಚಿತೆ ಮೇಲೆ ಮಲಗಿದ ಮಗ.. ದುಃಖದ ಮಡುವಿನಲ್ಲಿ ಸುಪುತ್ರನ ವಿಲಕ್ಷಣ ವರ್ತನೆ..
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us