ಆರ್​​ಸಿಬಿ ತಂಡಕ್ಕೆ ಡೇಂಜರಸ್​ ಬೌಲರ್​ ಎಂಟ್ರಿ; ಬೆಂಗಳೂರಿಗೆ ಬಂತು ಆನೆ ಬಲ

author-image
Ganesh Nachikethu
Updated On
RCB ಅಲ್ಲವೇ ಅಲ್ಲ! ಐಪಿಎಲ್ ಇತಿಹಾಸದಲ್ಲೇ ಕೆಟ್ಟ ಪ್ರದರ್ಶನ ನೀಡ್ತಿರೋ ತಂಡ ಯಾವುದು?
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರೇಜ್​ ಶುರು
  • ಇದೇ ಮಾರ್ಚ್​​​ 22ನೇ ತಾರೀಕಿನಿಂದ ಐಪಿಎಲ್​ ಸ್ಟಾರ್ಟ್​​!
  • ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್​​, ಆರ್​​ಸಿಬಿ ಮುಖಾಮುಖಿ

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರೇಜ್​ ಶುರುವಾಗಿದೆ. ಇದೇ ಮಾರ್ಚ್​​​ 22ನೇ ತಾರೀಕಿನಿಂದ ಶುರುವಾಗೋ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನು, ಎಂದಿನಂತೆ ಈ ವರ್ಷವೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮೇಲೆ ಭಾರೀ ನಿರೀಕ್ಷೆ ಇದೆ. ಹಾಗಾಗಿ ಈ ಸಲ ಕಪ್​ ನಮ್ದೇ ಎಂದು ಫ್ಯಾನ್ಸ್​​​ ಮತ್ತೊಮ್ಮೆ ಹೇಳಲು ಶುರು ಮಾಡಿದ್ದಾರೆ. 2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಕೆಕೆಆರ್​​, ಆರ್​​ಸಿಬಿ ಮುಖಾಮುಖಿ ಆಗಲಿವೆ.

ಕೋಲ್ಕತ್ತಾದ ಈಡನ್ ಗಾರ್ಡನ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಈ ಪಂದ್ಯದಲ್ಲಿ ಆರ್​​ಸಿಬಿ ತಂಡವನ್ನು ಕ್ಯಾಪ್ಟನ್​ ರಜತ್​ ಪಾಟಿದಾರ್​ ಲೀಡ್​ ಮಾಡಲಿದ್ದಾರೆ. ಈಗಾಗಲೇ ಇಡೀ ಟೀಮ್​ ಆರ್​​ಸಿಬಿ ಕ್ಯಾಂಪ್​​ ಸೇರಿಕೊಂಡಿದ್ದು, ಅಭ್ಯಾಸ ಪ್ರಾರಂಭಿಸಿದ್ದಾರೆ. ಈ ಮಧ್ಯೆ ಆರ್​​ಸಿಬಿ ತಂಡಕ್ಕೆ ಬಿಗ್​ ಅಪ್ಡೇಟ್​ ಸಿಕ್ಕಿದೆ.

ಆರ್​​ಸಿಬಿಗೆ ಸ್ಟಾರ್​ ಪ್ಲೇಯರ್​ ಎಂಟ್ರಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಅಪಾಯಕಾರಿ ವೇಗದ ಬೌಲರ್ ಎಂಟ್ರಿಯಾಗಿದೆ. ಈ ಸ್ಟಾರ್ ಬೌಲರ್ ಸೊಂಟದ ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದರು. ಹೀಗಾಗಿ ಅವರು ಐಪಿಎಲ್ 2025ರಲ್ಲಿ ಆಡುವುದು ಡೌಟ್​ ಎನ್ನಲಾಗಿತ್ತು. ಸದ್ಯ ಈ ಸ್ಟಾರ್ ಬೌಲರ್ ಆರ್‍‌ಸಿಬಿ ಸೇರಿರುವುದು ತಂಡದ ಬಲ ಹೆಚ್ಚಿಸಿದೆ.

ಆರ್​ಸಿಬಿ ತಂಡ ಸೇರಿದ ಸ್ಟಾರ್ ಬೌಲರ್ ಜೋಶ್ ಹೇಜಲ್‌ವುಡ್. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಆರ್​​ಸಿಬಿ ಪೋಸ್ಟ್​ ಹಾಕಿದೆ. ಇವರು ಕೆಕೆಆರ್ ವಿರುದ್ಧದ ಉದ್ಘಾಟನಾ ಆರಂಭಿಕ ಪಂದ್ಯದಲ್ಲಿ ಆಡಲು ಸಿದ್ಧರಿದ್ದಾರೆ. ಹೇಜಲ್​ವುಡ್​ಗೆ ಆರ್‌ಸಿಬಿ 12.5 ಕೋಟಿ ರೂ. ನೀಡಿ ಖರೀದಿಸಿತ್ತು.

publive-image

ಐಪಿಎಲ್ 2025ರಲ್ಲಿ ಆರ್‌ಸಿಬಿ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕಪ್‌ ಗೆಲ್ಲಲಿದೆ ಅನ್ನೋ ವಿಶ್ವಾಸ ಇದೆ.

ಆರ್‌ಸಿಬಿ ತಂಡ ಹೀಗಿದೆ!

ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ಕ್ಯಾಪ್ಟನ್​), ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.

ಇದನ್ನೂ ಓದಿ:BSNL: 229 ರೂಪಾಯಿ ರೀಚಾರ್ಜ್​ ಪ್ಲಾನ್​ಗೆ ಭಾರೀ ಡಿಮ್ಯಾಂಡ್​​! ದಿನಕ್ಕೆ 2GB ಮಾತ್ರವಲ್ಲ, ಹಲವಿವೆ ಬೆನಿಫಿಟ್ಸ್!​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment