/newsfirstlive-kannada/media/post_attachments/wp-content/uploads/2025/05/RCB_TEAM_2025.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನಲ್ಲಿ ಟಾಪ್- 2 ಸ್ಥಾನ ಪಡೆಯಲು ತುದಿಗಾಲಲ್ಲಿ ನಿಂತಿದೆ. ಆದರೆ ಹೈದ್ರಾಬಾದ್ ವಿರುದ್ಧ ಪಂದ್ಯ ಸೋತಿರುವುದು ದೊಡ್ಡ ನಷ್ಟವಾಗಿದೆ. ಇದಕ್ಕೆ ಆರ್ಸಿಬಿಗೆ ಮತ್ತೊಂದು ಅವಕಾಶ ಇದ್ದು ಲೀಗ್ನ ಕೊನೆ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಇದರ ನಡುವೆ ಬೆಂಗಳೂರು ತಂಡಕ್ಕೆ ಬಲಿಷ್ಠ ಬೌಲರ್ ಮರಳಿರುವುದು ಆನೆಬಲ ಬಂದಂತೆ ಆಗಿದೆ.
ಆಸ್ಟ್ರೇಲಿಯಾದ ವೇಗಿ ಹಾಗೂ ಆರ್ಸಿಬಿಯ ಭರವಸೆಯ ಬೌಲರ್ ಆಗಿರುವ ಜೋಶ್ ಹೇಜಲ್ವುಡ್ ಅವರು ಮತ್ತೆ ಆರ್ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ. ಈ ಬಗ್ಗೆ ಆರ್ಸಿಬಿ ಫ್ರಾಂಚೈಸಿಯೇ ಇದೀಗ ಅಧಿಕೃತವಾಗಿ ಪೋಸ್ಟ್ವೊಂದನ್ನು ಶೇರ್ ಮಾಡಿ ಮಾಹಿತಿ ನೀಡಿದೆ. ಭಾರತ ಮತ್ತು ಪಾಕ್ ನಡುವೆ ಬಿಕ್ಕಟ್ಟು ಸಂಭವಿಸಿ ಕೆಲವು ದಿನ ಐಪಿಎಲ್ಗೆ ಬ್ರೇಕ್ ನೀಡಲಾಗಿತ್ತು. ಇದೇ ಸಮಯದಲ್ಲಿ ಜೋಶ್ ಹೇಜಲ್ವುಡ್ ತವರಿಗೆ ವಾಪಸ್ ಹೋಗಿದ್ದರು.
ಇದನ್ನೂ ಓದಿ: IPL 6ನೇ ಟ್ರೋಫಿ ಮೇಲೆ ಕಣ್ಣು.. ಈ ಬಲಿಷ್ಠ ಪ್ಲೇಯರ್ ಬಂದ ಮೇಲೆ ತಂಡದ ಲಕ್ ಬದಲಾಯ್ತಾ?
ಈಗಾಗಲೇ ಆರ್ಸಿಬಿ ತಂಡ ಲಕ್ನೋದಲ್ಲಿ ಇದ್ದು ಅಭ್ಯಾಸ ಪ್ರಾರಂಭ ಮಾಡಿದೆ. ಈ ತಂಡವನ್ನು ಜೋಶ್ ಹೇಜಲ್ವುಡ್ ಅವರು ಸೇರಿಕೊಂಡಿದ್ದಾರೆ. ಸಹ ಆಟಗಾರರ ಜೊತೆ ಪ್ರಾಕ್ಟೀಸ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮೇ 29 ರಿಂದ ಪ್ಲೇ-ಆಫ್ ಪಂದ್ಯಗಳು ಆರಂಭವಾಗಲಿವೆ. ಆರ್ಸಿಬಿಯ ಸ್ಥಾನ ಇನ್ನೂ ನಿರ್ಧಾರವಾಗಿಲ್ಲ. ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಮತ್ತು ಎರಡನೇ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್ಸಿಬಿಗೆ ಲೀಗ್ ಹಂತದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದೆ.
ಉತ್ತರ ಪ್ರದೇಶದ ಲಕ್ನೋದಲ್ಲಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಎಲ್ಎಸ್ಜಿ ವಿರುದ್ಧ ಆರ್ಸಿಬಿ ಲೀಗ್ನ ಕೊನೆ ಪಂದ್ಯ ಆಡಲಿದೆ. ಜೋಶ್ ಹೇಜಲ್ವುಡ್ ತಂಡಕ್ಕೆ ಮರಳಿರುವುದು ಸಂತಸದ ಜೊತೆಗೆ ದೊಡ್ಡ ತಿರುವು ಕೂಡ ಸಿಗುವ ನಿರೀಕ್ಷೆಯಲ್ಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಜಯ ಸಾಧಿಸಿದರೆ ಟಾಪ್-2 ಸ್ಥಾನ ಸಿಗಲಿದೆ. ಒಂದು ವೇಳೆ ಲಕ್ನೋ ತಂಡ ಗೆಲುವು ಪಡೆದರೆ ಯಾವುದೇ ಲಾಭವಿಲ್ಲ. ಆದರೆ ಆರ್ಸಿಬಿಗೆ ದೊಡ್ಡ ನಷ್ಟವಾಗುವುದಂತು ಗ್ಯಾರಂಟಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ