/newsfirstlive-kannada/media/post_attachments/wp-content/uploads/2025/05/josh_hazlewood_RCB.jpg)
ಆರ್ಸಿಬಿ ಹಾಗೂ ಫ್ರಾಂಚೈಸಿಯ ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ. ಬೌಲಿಂಗ್ ವಿಭಾಗದ ದೈತ್ಯ ಶಕ್ತಿ ಆಗಿರುವ ಜೋಶ್ ಹೇಜಲ್ವುಡ್ ಫುಲ್ ಫಿಟ್ ಆಗಿದ್ದು, ನೆಟ್ಸ್ನಲ್ಲಿ ಬೆವರಿಳಿಸಿದ್ದಾರೆ.
ಮೇ 23 ರಂದು ಲಕ್ನೋದಲ್ಲಿ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಬೌಲಿಂಗ್ ಮಾಡೋದು ಪಕ್ಕಾ ಆಗಿದೆ. ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ಹೇಜಲ್ವುಡ್ ಕಳೆದ ಪಂದ್ಯಗಳನ್ನು ಆಡಿರಲಿಲ್ಲ. ಅಲ್ಲದೇ, ಐಪಿಎಲ್ ಪಂದ್ಯಾವಳಿಗಳು ತಾತ್ಕಾಲಿಕವಾಗಿ ರದ್ದುಗೊಂಡ ನಂತರ ಅವರು, ಆಸ್ಟ್ರೇಲಿಯಾಗೆ ವಾಪಸ್ ಆಗಿದ್ದರು. ಇದೀಗ ಬೆಂಗಳೂರಿಗೆ ಮರಳಿದ್ದು, ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಅಲ್ಲದೇ ನೆಟ್ಸ್ನಲ್ಲಿ ಪ್ರ್ಯಾಕ್ಟೀಸ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 25 ವರ್ಷಗಳ ಆಪ್ತ ಹೊನ್ನೆಗೌಡ ನಿಧನಕ್ಕೆ ನಟ ದರ್ಶನ್ ಸಂತಾಪ
ಹೇಜಲ್ವುಡ್ ಮೇ 9 ಆರ್ಸಿಬಿ ಕ್ಯಾಂಪ್ ತೊರೆದಿದ್ದರು. ನಂತರ ಅವರು ಆರ್ಸಿಬಿ ಮ್ಯಾಚ್ಗೆ ಲಭ್ಯರಾಗುವುದರ ಬಗ್ಗೆ ಖಚಿತತೆ ಇರಲಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ಹೇಜಲ್ವುಡ್, ಅತ್ಯಧಿಕ ವಿಕೆಟ್ ಕಬಳಿಸಿದ್ದಾರೆ. 10 ಪಂದ್ಯಗಳಲ್ಲಿ 8.44 ಸರಾಸರಿ ರನ್ ನೀಡಿ, 18 ವಿಕೆಟ್ ಪಡೆದುಕೊಂಡಿದ್ದಾರೆ. ಸದ್ಯ ಅವರು ಪರ್ಪಲ್ ಕ್ಯಾಪ್ನ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಲೀಗ್ ಹಂತದಲ್ಲಿ ಆರ್ಸಿಬಿ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಎರಡೂ ಮ್ಯಾಚ್ಗಳು ಮಳೆಯಿಂದಾಗಿ ಲಕ್ನೋದಲ್ಲೇ ನಡೆಯಲಿವೆ. ಈಗಾಗಲೇ ಪ್ಲೇ-ಆಫ್ಗೆ ಲಗ್ಗೆ ಇಟ್ಟಿರುವ ಆರ್ಸಿಬಿಗೆ ಹೇಜಲ್ವುಡ್ ಬಲ ಸಿಕ್ಕಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆರ್ಸಿಬಿ ಮುಂದಿನ ಮ್ಯಾಚ್ ರದ್ದು.. ಮತ್ತೆ ಎಲ್ಲಿ ನಡೆಯುತ್ತೆ..?
Josh Hazlewood started bowling. We're coming for that tinpot trophy 😭🔥😭🔥😭🔥😭 pic.twitter.com/oxSFVVjxwL
— HONEST LIVI FAN (@rohancric947) May 20, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್