/newsfirstlive-kannada/media/post_attachments/wp-content/uploads/2025/02/megha-shtty.jpg)
ಕಿರುತೆರೆಯಲ್ಲಿ ದಾಖಲೆ ಬರೆದ ಸೀರಿಯಲ್ಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಕೂಡ ಒಂದು. ಜೊತೆ ಜೊತೆಯಲ್ಲಿ ಖ್ಯಾತಿಯ ಮೇಘಾ ಶೆಟ್ಟಿ ಈಗ ಸ್ಯಾಂಡಲ್ವುಡ್ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಆದ್ರೆ ಇದರ ಮಧ್ಯೆ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ: ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ನಟಿ ಮೇಘಾ ಶೆಟ್ಟಿ; ಫೋಟೋಸ್ ನೋಡಿ ಫ್ಯಾನ್ ಏನಂದ್ರು?
ಹೌದು, ಸದಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಌಕ್ವೀವ್ ಆಗಿದ್ದ ನಟಿ ಮೇಘಾ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಿಂದ ಹೊಚ್ಚ ಹೊಸ ಸೀರಿಯಲ್ವೊಂದು ಮೂಡಿ ಬರುತ್ತಿದೆ. ಈಗಾಗಲೇ ಕಲರ್ಸ್ ಕನ್ನಡದಲ್ಲಿ ಹೊಚ್ಚ ಹೊಸ ಧಾರಾವಾಹಿಯ ಪ್ರೋಮೋವೊಂದು ರಿಲೀಸ್ ಆಗಿದೆ. ಆ ಸೀರಿಯಲ್ಗೆ ಮುದ್ದು ಸೊಸೆ ಎಂದು ಹೆಸರನ್ನು ಇಡಲಾಗಿದೆ.
View this post on Instagram
ಇನ್ನೂ, ಮುದ್ದು ಸೊಸೆ ಧಾರಾವಾಹಿಯಲ್ಲಿ ನಾಯಕಿಯಾಗಿ ಅಂತರಪಟ ಧಾರಾವಾಹಿ ಖ್ಯಾತಿಯ ಸಿರಿ ಪಾತ್ರದ ಮೂಲಕ ಫೇಮಸ್ ಆಗಿದ್ದ ಪ್ರತಿಮಾ ಆಯ್ಕೆಯಾಗಿದ್ದಾರೆ. ರಿಲೀಸ್ ಆಗಿರೋ ಪ್ರೋಮೋದಲ್ಲಿ ಪ್ರತಿಮಾ ಮಧು ಮಗಳ ಗೆಟಪ್ನಲ್ಲಿ ಪರೀಕ್ಷಾ ಬರೆಯುತ್ತಿದ್ದಾಳೆ. ಸ್ಕೂಲ್ ಬೆಂಚ್‍ನಿಂದ ಹಸೆಮಣೆಗೆ ಬರ್ತಿದ್ದಾಳೆ ಮುದ್ದು ಸೊಸೆ ಎಂಬ ಕ್ಯಾಪ್ಶನ್ ಬರೆದು ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದೇ ಪ್ರೋಮೋ ನೋಡಿದ ವೀಕ್ಷಕರಲ್ಲಿ ಕೂತುಹಲ ಹೆಚ್ಚಾಗುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ