Advertisment

ಖ್ಯಾತ ಅಂಕಣಕಾರ ಗಿರೀಶ್ ಲಿಂಗಣ್ಣಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ; ಶುಭ ಕೋರಿದ ನಿರ್ಮಲಾನಂದ ಸ್ವಾಮೀಜಿ

author-image
Veena Gangani
Updated On
ಖ್ಯಾತ ಅಂಕಣಕಾರ ಗಿರೀಶ್ ಲಿಂಗಣ್ಣಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ; ಶುಭ ಕೋರಿದ ನಿರ್ಮಲಾನಂದ ಸ್ವಾಮೀಜಿ
Advertisment
  • ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಒಲಿದ ಪ್ರಶಸ್ತಿ
  • ದಿನಪತ್ರಿಕೆಗಳ ಜಾಲತಾಣಗಳ ಅಂಕಣಕಾರರಾಗಿದ್ದಾರೆ ಗಿರೀಶ್ ಲಿಂಗಣ್ಣ
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂವಾದ, ಚರ್ಚೆಗಳಲ್ಲಿ ಪ್ಯಾನೆಲಿಸ್ಟ್ ಆಗಿದ್ದರು

ಬೆಂಗಳೂರು: ಗಿರೀಶ್ ಲಿಂಗಣ್ಣ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಬಾಹ್ಯಾಕಾಶ, ರಕ್ಷಣೆ, ಅಂತಾರಾಷ್ಟ್ರೀಯ ವ್ಯವಹಾರಗಳ ವಿಶ್ಲೇಷಕ. ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಇಂಡಿಯನ್ ಎಕ್ಸ್​​ಪ್ರೆಸ್​​ ದಿನಪತ್ರಿಕೆಗಳ ಜಾಲತಾಣಗಳ ಅಂಕಣಕಾರರಾಗಿದ್ದಾರೆ.

Advertisment

ಇದನ್ನೂ ಓದಿ: ಶಿವಣ್ಣ ಆರೋಗ್ಯದ ಬಗ್ಗೆ ಅಪ್​​ಡೇಟ್ಸ್​.. ಅಭಿಮಾನಿಗಳಿಗೆ ಭರ್ಜರಿ ಗುಡ್​​ನ್ಯೂಸ್

ವಿಜಯ ಕರ್ನಾಟಕ, ಉದಯವಾಣಿ, ವಿಶ್ವವಾಣಿ ಪತ್ರಿಕೆಗಳಲ್ಲಿ ಒನ್ ಇಂಡಿಯಾ ಜಾಲತಾಣದಲ್ಲಿ ನಿರಂತರ ಲೇಖನಗಳನ್ನು ಬರೆಯುತ್ತಿದ್ದಾರೆ. ವಿವಿಧ ರಾಷ್ಟ್ರೀಯ, ಅಂತಾರಾಷ್ಟ್ರೀಯ ಇಂಗ್ಲಿಷ್ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಪ್ರಚಲಿತ ವಿಚಾರಗಳ ಕುರಿತು ನ್ಯೂಸ್​ ಫಸ್ಟ್​, ಸುವರ್ಣ ನ್ಯೂಸ್, ದೂರದರ್ಶನ, ಆಕಾಶವಾಣಿ, ಚಂದನ ವಾಹಿನಿಗಳಲ್ಲಿ ಪ್ಯಾನೆಲಿಸ್ಟ್ ಆಗಿ ಭಾಗಿಯಾಗಿದ್ದಾರೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳಲ್ಲಿ ಸಂವಾದ, ಚರ್ಚೆಗಳಲ್ಲಿ ಪ್ಯಾನೆಲಿಸ್ಟ್ ಆಗಿದ್ದಾರೆ.

publive-image

ಇನ್ನೂ ಗಿರೀಶ್ ಲಿಂಗಣ್ಣ ಅವರಿಗೆ  ಕರ್ನಾಟಕ ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಘೋಷಣೆ ಮಾಡಿದೆ. 2019ನೇ ಸಾಲಿನ ಅಭಿವೃದ್ದಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಗಿರೀಶ್ ಲಿಂಗಣ್ಣ ಅವರಿಗೆ ನೀಡಲಾಗಿದೆ. ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅಧಿಕೃತವಾಗಿ ಪ್ರಶಸ್ತಿ ಪಡೆದವರ ಹೆಸರು ಅನ್ನು ಘೋಷಿಸಿದೆ. ಗಿರೀಶ್ ಲಿಂಗಣ್ಣ ಅವರು ವಿವಿಧ ಮಾಧ್ಯಮಗಳಲ್ಲಿ ಅಭಿವೃದ್ದಿಗೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ಬರೆದು ಗಮನ ಸೆಳೆದಿದ್ದಾರೆ.  ಈಗ ಇವರ ಲೇಖನ ಬರಹಕ್ಕೆ ವಾರ್ತಾ ಇಲಾಖೆಯ ಅಭಿವೃದ್ದಿ ಪತ್ರಿಕೋದ್ಯಮ ಪ್ರಶಸ್ತಿ ಒಲಿದು ಬಂದಿದೆ. ಸದ್ಯದಲ್ಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಶಸ್ತಿ ಪ್ರದಾನ ಮಾಡಲಿದೆ. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆಯನ್ನು ಒಳಗೊಂಡಿದೆ. 2017 ರಿಂದ 2023ರವರೆಗಿನ ಅಭಿವೃದ್ದಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ವಾರ್ಷಿಕ ಪ್ರಶಸ್ತಿಗಳನ್ನ ಇಂದು ಘೋಷಿಸಲಾಗಿದೆ.

Advertisment

ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾದ ಗಿರೀಶ್ ಲಿಂಗಣ್ಣ ಸೇರಿದಂತೆ ಪ್ರಶಸ್ತಿ ವಿಜೇತರಿಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಶುಭ ಕೋರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment