/newsfirstlive-kannada/media/post_attachments/wp-content/uploads/2024/12/PRATAP-CHANDRA-SARANGI.jpg)
ಪಾರ್ಲಿಮೆಂಟ್​ನಲ್ಲಿ ನಡೆದ ನೂಕಾಟ ಪ್ರಕರಣ ಈಗ ಬೇರೆ ಆಯಾಮ ಪಡೆದುಕೊಂಡಿದೆ. ಸಂಸದ ಪ್ರತಾಪ್ ಚಂದ್ರ ಸಾರಂಗಿಯವರನ್ನು, ವಿಪಕ್ಷ ನಾಯಕ ರಾಹುಲ್ ಗಾಂಧಿ ದೂಡಿ ಬೀಳಿಸಿದ್ದರಿಂದ ಅವರಿಗೆ ಗಾಯವಾಗಿದೆ ಎಂದು ಸದ್ಯ ಹೇಳಲಾಗುತ್ತಿದೆ. ಒಂದು ವೇಳೆ ಅದಕ್ಕೆ ತಕ್ಕ ಸಾಕ್ಷ್ಯವಿದ್ದಲ್ಲಿ ಪ್ರಕರಣ ದಾಖಲಾಗಲಿದ್ದು. ಲೋಸಕಭಾ ಸ್ಪೀಕಟರ್ ಅನುಮತಿ ನೀಡಿದರೆ ದೆಹಲಿ ಪೊಲೀಸರಿಂದ ತನಿಖೆ ನಡೆಯಲಿದೆ.
ಘಟನೆಯ ವಿಡಿಯೋನೆ ಇಲ್ಲಿ ಪ್ರಮುಖ ಸಾಕ್ಷ್ಯವಾಗಲಿದ್ದು ರಾಹುಲ್ ಗಾಂಧಿ ತಾವು ಪ್ರತಿಭಟಿಸುವ ಸ್ಥಳ ಬಿಟ್ಟು ಬಿಜೆಪಿ ಎಂಪಿಗಳ ಬಳಿ ಬಂದು ತಳ್ಳಿದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಲಿದ್ದಾರೆ. ಈಗಾಗಲೇ ಸಿಐಎಸ್​ಎಫ್, ಪಾರ್ಲಿಮೆಂಟ್ ಭದ್ರತಾ ಸಿಬ್ಬಂದಿಗೆ ಲೋಕಸಭಾ ಸ್ಪೀಕರ್ ಮಾಹಿತಿ ನೀಡಿದ್ದು, ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಹೇಳಿದೆ.
ಇದನ್ನೂ ಓದಿ:ಪ್ರತಿಭಟನೆ ವೇಳೆ ನೆಲಕ್ಕೆ ಬಿದ್ದ ಬಿಜೆಪಿ ಸಂಸದ..ಪ್ರತಾಪ್ ಚಂದ್ರ ಸಾರಂಗಿಯವರನ್ನ ತಳ್ಳಿದ್ರಾ ರಾಹುಲ್ ಗಾಂಧಿ?
ಸದ್ಯ ಎನ್​ಡಿಎ ಎಂಪಿಗಳು ರಾಹುಲ್ ಗಾಂಧಿ ವಿರುದ್ಧ ಎಫ್​ಐಆರ್ ದಾಖಲಿಸಲು ನಿರ್ಧಾರ ಮಾಡಿದ್ದಾರೆ. ಪ್ರತಾಪ್ ಚಂದ್ರ ಸಾರಂಗಿ ಮೇಲೆ ಹಲ್ಲೆ ಮಾಡಿರುವುದಾಗಿ ಎಫ್​ಐಆರ್​ ದಾಖಲಿಸಲು ಚಿಂತನೆ ನಡೆಸಿದ್ದಾರೆ. ಮತ್ತೊಂದೆಡೆ ನಮ್ಮನ್ನು ಬಿಜೆಪಿ ಎಂಪಿಗಳು ತಳ್ಳಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಆರೋಪ ಮಾಡಿದ್ದಾರೆ.
ಒಂದು ಕಡೆ ಇದು ಸಂದರ ಮೇಲೆ ನಡೆದ ಹಲ್ಲೆಯೆಂದು ಪ್ರಕರಣ ದಾಖಲು ಮಾಡಲು ಹಾಗೂ ಸ್ಪೀಕರ್​ಗೆ ದೂರು ಕೊಡಲು ಬಿಜೆಪಿ ನಿರ್ಧಾರ ಮಾಡಿದ್ದರೆ, ಮತ್ತೊಂದು ಕಡೆ ತನ್ನ ಮೇಲಿನ ಆರೋಪವನ್ನ ಒಪ್ಪಿಕೊಂಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬಿಜೆಪಿಯವರು ನಮ್ಮನ್ನು ತಡೆಯೋ ಪ್ರಯತ್ನ ಮಾಡಿದರು , ನನ್ನನ್ನನು ಹಿಡಿದು, ಹೆದರಿಸುವ ಪ್ರಯತ್ನ ಮಾಡಿದರು ಆ ವೇಳೆ ಹೀಗಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us